ಬೆಳೆ ಕನ್ನಡ: ಉಪಭಾಷೆಗಳು ಉಳಿದರೆ ಸಂಸ್ಕೃತಿಯೂ ಉಳಿಯುತ್ತದೆ…

ಸರಕಾರವು ಕನ್ನಡದ ಉಪಭಾಷೆಗಳ ಅಭಿವೃದ್ಧಿಗೆ ನಿಗಮಗಳನ್ನು ಸ್ಥಾಪಿಸಲಿ, ಉಪಭಾಷೆಗಳ ಸಂರಕ್ಷಣೆ, ಸಂಶೋಧನೆಗೆ ನೆರವು ದೊರೆಯಲಿ

Team Udayavani, Nov 19, 2024, 6:30 AM IST

Kannada-Replica

ಭಾಷೆ ಎಂಬುದು ಸ್ವವಿಚಾರ ಪ್ರಕಾಶನಕ್ಕೆ ಊರುಗೋಲು, ಅದು ಜ್ಞಾನವನ್ನೋ, ವಿವೇಕವನ್ನೋ, ಅನುಭವವು ಕಲಿಸಿದ ಪಾಠವನ್ನೋ ಸಂಗ್ರಹ ಮಾಡಿ ಇಡುವುದಕ್ಕೂ ಆಗಿಬರುವ ಉಪಕರಣ. ಅದು ವಿಚಾರ ವಿನಿಮಯಕ್ಕೆ ಸಾಧನವು ಹೇಗೋ ಹಾಗೆಯೇ ವಿಚಾರ ವಿಮರ್ಶೆಗೂ ಉಪಕಾರಿ…

ಈವರೆಗೆ ಉಪಲಬ್ಧವಾಗಿರುವ ಕನ್ನಡ ಗ್ರಂಥಗಳಲ್ಲಿ ಅತ್ಯಂತ ಹಳೆಯದಾದ “ಕವಿರಾಜಮಾರ್ಗ’ವು ಅಲಂಕಾರ ಶಾಸ್ತ್ರಕ್ಕೆ ಸಂಬಂಧಪಟ್ಟ ಗ್ರಂಥ. ಹಾಗಿದ್ದರೂ ಇದರಲ್ಲಿ ಅಲ್ಲಲ್ಲಿ ಕನ್ನಡನಾಡು, ನುಡಿ, ಜನ, ಮೊದಲಾದವುಗಳ ಬಗೆಗೆ ಒಂದೆರಡು ಮಾತುಗಳೂ ಇವೆ. ಅದರಲ್ಲಿ, ಇದೇನು ಹೀಗೆ ಹೇಳಿಬಿಟ್ಟಿದ್ದಾನಲ್ಲ ಅನ್ನಿಸುವಂಥ ಪದ್ಯವೊಂದು ಪ್ರಥಮ ಪರಿಚ್ಛೇದದಲ್ಲಿ ಬರುತ್ತದೆ, ಅದನ್ನು ಬಿಡಿಸಿ, ಗದ್ಯರೂಪದಲ್ಲಿ ಬರೆದರೆ, ಅದು ಹೀಗೆ ಕಂಡೀತು:

“ದೇಸಿ ಬೇರೆ ಬೇರೆ ಅಪ್ಪುದರಿನ್‌ ಕನ್ನಡಂಗಳೊಳ್‌ ದೋಸಮ್‌ ಇನಿತೆಂದು ಬಗೆದು ಉದ್ಭಾಸಿಸಿ ತರಿಸಂದು ಅರಿಯಲಾರದೆ ವಾಸುಗಿ­ಯುಮ್‌ ಬೇಸರು­ಗುಮ…’. ಅಂದರೆ ಆ ಕಾಲದಲ್ಲೇ  ಕನ್ನಡದಲ್ಲಿ ಅದೆಷ್ಟು ಬಗೆಯ ಪ್ರಾದೇಶಿಕ ವೈವಿಧ್ಯಗಳು ಇದ್ದವು ಎಂದರೆ “ಇದು ಸರಿ, ಇದು ದೋಷ’ ಎಂದು ನಿಶ್ಚಯ ಮಾಡಿ ಹೇಳುವುದಕ್ಕೆ ಸಾವಿರ ನಾಲಗೆಗಳುಳ್ಳ ಆದಿಶೇಷನಿಗೂ ಆಗಲಿಕ್ಕಿಲ್ಲವಂತೆ!

ನಮ್ಮಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಧಾರವಾಡ, ಕುಂದಾಪುರ, ಬಿಜಾಪುರ, ಕಲಬುರಗಿ ಇತ್ಯಾದಿಗಳ ಕನ್ನಡ, ಹವಿಗನ್ನಡ, ಹಾಲಕ್ಕಿಯವರ ಕನ್ನಡ, ಅರೆಭಾಷೆ ಇವೆಲ್ಲ ಇರುವಂತೆ ಶ್ರೀವಿಜಯನ ಕಾಲದಲ್ಲಿಯೂ ಸೀಮೆಗೊಂದೊಂದು ಬಗೆಯ ಕನ್ನಡಗಳು ಇದ್ದಿರಬೇಕು. ಯಾವುದು ಸರಿ ಎಂಬ ಚರ್ಚೆ ಬಂದಾಗ ಎಲ್ಲರೂ ನಮ್ಮದೇ ನಿರ್ದುಷ್ಟ ಎಂದು ಕೂಗೆಬ್ಬಿಸುವುದನ್ನು ನೋಡಿ ತಲೆಬಿಸಿಯಾಗಿ, ಇದನ್ನು ಇತ್ಯರ್ಥ ಮಾಡುವುದಕ್ಕೆ ವಾಸುಕಿಯ ಸಾವಿರ ನಾಲಗೆಗಳೂ ಸಾಲವು ಎಂದು ಮಾರ್ಗಕಾರನು ಹೇಳಿದನೋ ಏನೋ.

ಬೇರೆ ಬೇರೆ ಪ್ರಾಂತಗಳ ನಿತ್ಯ ವ್ಯವಹಾರಗಳು ಅಲ್ಲಿನ ಆಡುಭಾಷೆಗಳಲ್ಲಿ, ಉಪಭಾಷೆಗಳಲ್ಲಿಯೇ ನಡೆಯುತ್ತ­ವಷ್ಟೇ. ಹಾಗಿರುವಾಗ ಅವರ ಪರಂಪರೆಯ ಹೆಚ್ಚು ಗಾರಿಕೆ, ಅವರ ಸಂಸ್ಕೃತಿಯ ಹಿರಿಮೆ, ಅಲ್ಲಿನವರ ಇತಿಹಾಸದ ವೈಶಿಷ್ಟ್ಯ , ಅವರ ಲೋಕಾನುಭವದ ಒಟ್ಟು ಮೊತ್ತ ಇವೆಲ್ಲ ಅವರ ಉಪಭಾಷೆ ಗಳಲ್ಲಿಯೇ ಗುಪ್ತನಿಧಿಯಂತೆ ಅಡಗಿರುತ್ತದೆ ಎಂದರೆ ಹೆಚ್ಚಾಗಲಿಕ್ಕಿಲ್ಲ. ನನಗೆ ಗೊತ್ತಿರುವ ಭಾಷೆಯಾದ ಹವಿಗನ್ನಡದಿಂದಲೇ ಒಂದೆರಡು ಉದಾಹರಣೆಗಳನ್ನು ಮುಂದಿಡಬಹುದು.

ಹಳೆಯ ಭಾಷೆ ಉಳಿದ ಸೋಜಿಗ
ಹವಿಗನ್ನಡವು ಕನ್ನಡದ್ದೇ ಒಂದು ರೂಪ; ಬಹುಶಃ ಕದಂಬರ ಕಾಲದಲ್ಲಿ ಬನವಾಸಿ ದೇಶದಲ್ಲಿ ಜನರು ಆಡುತ್ತಿದ್ದ ಹಳಗನ್ನಡದ ಒಂದು ದೇಸಿರೂಪ. ಹಾಗಾಗಿಯೇ ಅದು ಹಳಗನ್ನಡ ಮತ್ತೆ ನಡುಗನ್ನಡದ ಕಂಪನ್ನು ಈಗಲೂ ಉಳಿಸಿಕೊಂಡಿರುವ ಭಾಷೆ. ಪಂಪನು ಒಂದು ಕಡೆ “ಓಡ’ ಎಂಬ ಪದ ಬಳಸುತ್ತಾನೆ. ವಿದ್ವಾಂಸರೊಬ್ಬರು, ಈ ಪದವು ಎಲ್ಲಿಂದ ಬಂತಪ್ಪಾ, ಇದರ ಅರ್ಥ ಏನಪ್ಪಾ ಎಂದು ಯೋಚನೆ ಮಾಡಿದ್ದನ್ನು ನೋಡಿದೆ . ಆದರೆ ನನಗದರ ಅರ್ಥ ಕೂಡಲೇ ಹೊಳೆದಿತ್ತು. ಕಾರಣ ಇಷ್ಟೇ; ನಮ್ಮಲ್ಲಿ ಈಗಲೂ ದೋಣಿ ಎಂಬುದನ್ನು “ಓಡ’ ಅಂತಲೇ ಹೇಳುತ್ತಾರೆ.

“ಎಕ್ಕಸಕ್ಕತನಂಗಳು’ ಎಂಬುದು ಪಂಪನ ಇನ್ನೊಂದು ಬಳಕೆ. ಡಿ.ಎಲ್‌. ನರಸಿಂಹಾಚಾರ್ಯರು ಎಕ್ಕಸಕ್ಕತನಂಗಳು = ನಿಂದೆ ಪರಿಹಾಸಗಳು ಎಂದು ಅರ್ಥವನ್ನು ಕೊಟ್ಟಿದ್ದಾರೆ, ಅದಕ್ಕೆ ತೆಲುಗಿನ ಎಕ್ಕಸಕ್ಕಮು ಅನ್ನುವ ಪ್ರಯೋಗ ಅವರಿಗೆ ಆಧಾರವಾಗಿ ಕಂಡಿದೆ. ಆದರೆ ತುಳುನಾಡಿನವರಿಗೆ ಇದಕ್ಕೆ ಇನ್ನೊಂದು ಅರ್ಥ ಗೋಚರಿಸುತ್ತದೆ. ಯಾಕೆಂದರೆ ಇದು ತುಳುವಿನಲ್ಲಿ ಮತ್ತು ಹವಿಗನ್ನಡದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಪದವೇ. ಬೇಕಾಬಿಟ್ಟಿ, ಲಂಗುಲಗಾಮಿಲ್ಲದ ಎಂಬ ಅರ್ಥದಲ್ಲಿ ಇದು ನಮ್ಮಲ್ಲಿ ತುಳು ಮತ್ತು ಹವಿಗನ್ನಡಗಳಲ್ಲಿ ಈಗಲೂ ಬಳಕೆಯಲ್ಲಿದೆ.

ಭಾಷೆ ಬದಲಾಗುವ ಕ್ರಮ
ಕನ್ನಡಿಗರು ಬಿಟ್ಟಿರುವ ಕನ್ನಡದ್ದೇ ಎಷ್ಟೋ ಪ್ರಯೋಗಗಳು ಈ ಉಪಭಾಷೆ ಯಲ್ಲಿ ಹೇಗೆ ಉಳಿದವು ಎಂದು ಯೋಚನೆ ಮಾಡಿದಾಗ ಹೊಳೆದದ್ದು ಇಷ್ಟು: ಒಂದು ಭಾಷೆಯು ಬದಲಾಗುವುದು ಕೊಡು ಕೊಳೆಯಿಂದ, ಅನುಕರಣೆಯಿಂದ. ಬಹುಭಾಷಿಕರು ಇರುವಲ್ಲಿ, ನಗರಗಳಲ್ಲಿ ಇದು ಹೆಚ್ಚಾಗಿ ಆಗುತ್ತದೆ. ಹವಿಕರು ಹಳ್ಳಿಗಳಲ್ಲಿಯೇ ಕೃಷಿ ಮಾಡಿಕೊಂಡು ಎರಡು ಮೂರು ಜಿಲ್ಲೆಗಳಲ್ಲಿ ಮಾತ್ರ ಇದ್ದವರು. ಹೀಗಾಗಿ ಬೇರೆ ಭಾಷೆಗಳ ಪ್ರಭಾವ ಅವರ ಮೇಲೆ ಅಷ್ಟಾಗಿ ಆಗಲಿಲ್ಲ ಅಂತ ಹೇಳಬಹುದು. ಈ ಭಾಷೆ ಒಂದು ಸೀಮಿತ ವಲಯದಲ್ಲಿ ಮಾತ್ರ ಚಾಲ್ತಿಯಲ್ಲಿದ್ದರಿಂದ ಬಹಳಷ್ಟು ಹಳೆಯ ಪ್ರಯೋಗಗಳನ್ನು ಉಳಿಸಿಕೊಳ್ಳುವುದು ಸಾಧ್ಯವಾಯಿತು ಅಂತ ಕಾಣುತ್ತದೆ. ಹಾಗಂತ ಎಷ್ಟೋ ಹಳೆಯ ಶಬ್ದಗಳು ಬದಲಾಗಿ ಉಳಿದಿರುವುದೂ ಉಂಟು.

“ಅಡರು’ ಅನ್ನುವ ಶಬ್ದವನ್ನು ಪಂಪ “ಮೇಲಕ್ಕೇರು’ ಅನ್ನುವ ಅರ್ಥದಲ್ಲಿ ಬಳಸಿದ್ದಾನೆ (ಉದಾ: ರಥವನ್ನು ಅಡರಿದನು). ಹವಿಕರಲ್ಲಿ ಏನಾದರೂ ತಲೆಗೆ ಏರುವುದು ಎಂಬ ಸೀಮಿತ ಅರ್ಥದಲ್ಲಿ ಇದು ಈಗಲೂ ಇದೆ. ಉದಾ: ಅವಂಗೆ ಹಾಂಕಾರ ತಲೆಗೆ ಅಡರಿದ್ದು (ಅವನಿಗೆ ಅಹಂಕಾರ ತಲೆಗೆ ಏರಿದೆ). ಹವಿಕರು “ಬೆಳಗ್ಗೆ, ಸಂಜೆ’ ಅನ್ನುವುದನ್ನು “ಉದಿಯಪ್ಪಗ, ಹೊತ್ತೋಪ್ಪಗ’ ಅನ್ನುತ್ತಾರೆ. ಸ್ವಲ್ಪ ಯೋಚಿಸಿದರೆ ಇದರ ಅರ್ಥ ಹೊಳೆಯುತ್ತದೆ. (ಸೂರ್ಯ) ಉದಯ ಆಗುವಾಗ – ಉದಯ ಅಪ್ಪಗ – ಉದಿಯಪ್ಪಗ. ಹೊತ್ತು ಹೋಗುವಾಗ – ಹೊತ್ತು ಹೋಪಗ – ಹೊತ್ತೋಪ್ಪಗ. ಇದೆಲ್ಲ ಕನ್ನಡದ ಹಳೆಯ ಪ್ರಯೋಗಗಳೇ ಹವಿಕರ ನಾಲಗೆಯಲ್ಲಿ ಸ್ವಲ್ಪ ತಿರುಚಲ್ಪಟ್ಟ ರೂಪದಲ್ಲಿವೆ.

ಸಂಸ್ಕೃತಿ ಮರೆಯಾಗುವುದರ ಸೂಚನೆ
ನಗರಗಳಿಗೆ ವಲಸೆ ಹೆಚ್ಚಾಗಿ ಈ ಭಾಷೆಯಲ್ಲಿಯೂ ಎಷ್ಟೋ ಪ್ರಯೋಗಗಳು ಇತ್ತೀಚೆಗೆ ಮಾಯವಾಗುತ್ತಿವೆ. ಹಳಗನ್ನಡದಲ್ಲಿ ಅಮ್ಮ = ತಂದೆ, ಅಬ್ಬೆ = ತಾಯಿ, ಹವಿಕರಲ್ಲೂ ಮೊನ್ನೆ ಮೊನ್ನೆಯವರೆಗೆ ಅಮ್ಮನನ್ನು “ಅಬ್ಬೆ’ ಅನ್ನಲಾಗುತ್ತಿತ್ತು ಅಡುಗೆ ಮನೆಯನ್ನು ಮೊನ್ನೆ ಮೊನ್ನೆಯವರೆಗೂ ಹಳ್ಳಿಗಳಲ್ಲಿ “ಅಟ್ಟುಂಬೊಳ’ ಅನ್ನಲಾಗುತ್ತಿತ್ತು (ಅಟ್ಟು ಉಂಬ ಒಳ = ಅಟ್ಟುಂ­ಬೊಳ, ಇದು ಈಗಿನ ಅಡುಗೆ ಮನೆ + ಡೈನಿಂಗ್‌ ಹಾಲ…). ಹಾಗೆಯೇ ಮನೆಯಲ್ಲಿ ಕೈಸಾಲೆ, ಮುಖಮಂಟಪ, ಉಪ್ಪರಿಗೆ ಇತ್ಯಾದಿ ಭಾಗಗಳು.

ಉಪಭಾಷೆ ಉಳಿಸಿಕೊಳ್ಳುವ ಕೆಲಸವಾಗಲಿ
ಮೇಲೆ ಹವಿಗನ್ನಡವನ್ನು ಇಟ್ಟುಕೊಂಡು ಹೇಳಿದ ಮಾತುಗಳನ್ನು ಧಾರವಾಡ, ಮಂಡ್ಯ, ಕುಂದಾಪುರ, ಕನ್ನಡಗಳಿಗೂ ಅನ್ವಯಿಸಿ ಅರ್ಥ ಮಾಡಿಕೊಳ್ಳಬೇಕು. ಮುದ್ದಣನ “ಓವೊ! ಕಾಲಪುರುಷಂಗೆ ಗುಣಮಣ­ಮಿಲ್ಲಂ ಗಡ! ನಿಸ್ತೇಜಂ ಗಡ! ಜಡಂ ಗಡ! ಎಂಬ ಸಾಲನ್ನೇ ತೆಗೆದುಕೊಳ್ಳಿ. ಇಲ್ಲಿ ಗಡ = ಅಂತೆ/ಅಲ್ಲವೇ ಎಂದು ಅರ್ಥ. ಕನ್ನಡದಲ್ಲಿ ಬಿಟ್ಟುಹೋಗಿ­ರುವ ಈ ಪ್ರಯೋಗವು ಅರೆಭಾಷೆಯಲ್ಲಿ ಈಗಲೂ ಅಂವ ಬಾತ್‌ ಗಡ, ಕೊಡೊಕಡ ಎಂಬ ಪ್ರಯೋಗಗಳಲ್ಲಿ ಇರುವುದನ್ನು ಪ್ರೊ| ಕುಶಾಲಪ್ಪ ಗೌಡರು ಗುರುತಿಸಿದ್ದಾರೆ. ಸಣ್ಣ ಎಂಬ ಅರ್ಥದ “ಕುಂಞಿ’ ಎಂಬ ಪದ, ಅತಿಸಾರ ಅಥವಾ ಆಮಶಂಕೆಗೆ ಇರುವ “ಹೊಟ್ಟೆಂದ ಹೋಪದು’ ಎಂಬ ಪ್ರಯೋಗ ಇವೆಲ್ಲ ಅರೆಭಾಷೆಯ ಹಳಗನ್ನಡದ ಸೊಗ­ಡಿನ ವಿಶಿಷ್ಟ ಪ್ರಯೋಗಗಳು. ಇಲಿಗೆ ಪೂರ್ವದ ಹಳಗನ್ನಡದಲ್ಲಿ “ಎಲಿ’ ಎಂದು ಪ್ರಯೋಗ. ಅರೆಭಾಷೆಯಲ್ಲಿ ಇದು ಈಗಲೂ ಎಲಿ ಎಂದೇ ಇದೆ.

ಎಲ್ಲವನ್ನೂ ಒತ್ತಿ, ಸಂಕ್ಷೇಪ ಮಾಡಿ ಹೇಳುವ ಅದ್ಭುತ ಶಕ್ತಿ ಇರುವ ಕುಂದಾಪುರ ಕನ್ನಡದಿಂದಲೂ ಇಂಥವನ್ನು ಎತ್ತಿ ತೋರಿಸಬಹುದು. ಹಳಗನ್ನಡದ ಈಗಳ್‌, ಆಗಳ್‌, ಏಗಳ್‌ ಇವುಗಳಂತೆ ಕುಂದಾಪುರದಲ್ಲಿ ಏಗಳಿಕೆ (ಯಾವಾಗ) ಇದೆ. ಹಳಗನ್ನಡದ ಮಿಡುಕು “ಮಿಡುಕ್ತ/ಮಿಡುಕ್ತಳ್‌’ ಎಂಬ ಪ್ರಯೋಗಗಳಲ್ಲಿ ಕಾಣಸಿಗುತ್ತದೆ. ಇನ್ನು ಬಪ್ಪದು, ಹೋಪದು, ದಾಂಟು ಇವೆಲ್ಲ ಹಳೆಯ ಪ್ರಯೋಗಗಳನ್ನು ಈಗಲೂ ಜತನದಿಂದ ಉಳಿಸಿಕೊಂಡಿರುವುದಕ್ಕೆ ನಿದರ್ಶನಗಳು. ಧಾರವಾಡದ ಭಾಷೆಯ ಬಗೆಗಂತೂ ಹೇಳುವುದೇ ಬೇಡ, ಅದು ವಿಶಿಷ್ಟ ಪ್ರಯೋಗಗಳ ಆಡುಂಬೊಲ.

ಹಳೆಯ ದೊಡ್ಡ ಕವಿಗಳೆಷ್ಟೋ ಜನ ಆ ಪ್ರದೇಶದವರೇ ತಾನೇ. “ಕವಿರಾಜಮಾರ್ಗ’ದಲ್ಲಿ ಕಿಸುವೊಳಲು (ಪಟ್ಟದಕಲ್ಲು), ಕೊಪಣನಗರ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ), ಒಂಕುಂದ (ಒಕ್ಕುಂದ) ಈ ಗ್ರಾಮಗಳ “ನಡುವಣ ನಾಡೆ ನಾಡೆ ಕನ್ನಡದ ತಿರುಳ್‌’ ಎಂದು ಹೇಳಿದೆ. ಪಂಪನೂ ತನ್ನ “ವಿಕ್ರಮಾರ್ಜುನ­ವಿಜಯ’ವನ್ನು ಪುಲಿಗೆರೆಯ ತಿರುಳ ಕನ್ನಡದಲ್ಲಿ ಬರೆದಿದ್ದೇನೆಂದು ಹೇಳಿದ್ದಾನೆ. ಅಂದರೆ ಆ ಕಾಲಕ್ಕೆ ಉತ್ತರ ಕರ್ನಾಟಕದ ಭಾಷೆಯೇ ಕನ್ನಡದ ತಿರುಳು. ಬ್ಯಾನಿ (ಬೇನೆ), ಮಾರಿ (ಮೋರೆ), ಮಳ್ಳ (ಮರುಳ), ಮುತ್ಯಾ (ಅಜ್ಜ) ಇದೆಲ್ಲ ಹಳೆಯ ಕಾಲದ ಕನ್ನಡದ ಪರಿಮಳವೇ ಉಂಟು. ತುಳು, ಕೊಡವ, ಬ್ಯಾರಿ ಭಾಷೆಗಳ ಅಭಿವೃದ್ಧಿಗೆ ನಿಗಮ ಮಾಡಿರುವಂತೆ ಕನ್ನಡದ್ದೇ ಉಪಭಾಷೆಗಳಿಗೂ ಮಾಡಿದರೆ ಪ್ರಯೋಜನ ಆದೀತು. ಎಲ್ಲ ಉಪಭಾಷೆಗಳ ಗಾದೆಮಾತುಗಳ ಸಂಗ್ರಹ, ಪಡೆನುಡಿ ಕೋಶಗಳು, ನಿಘಂಟುಗಳು ಬಂದರೆ ಒಳ್ಳೆಯದು.

ಉಪಭಾಷೆಗಳಲ್ಲಿ ನಾಟಕ, ಯಕ್ಷಗಾನಾದಿಗಳು, ಕೃತಿ ರಚನೆಗಳು, ಕೃತಿ ರಚನೆಗಳ ಸ್ಪರ್ಧೆಗಳು ಎಲ್ಲ ಆದರೆ, ಪ್ರಚಾರಕ್ಕೆ ಸಹಾಯವಾದೀತು. ಎಲ್ಲ ಪ್ರಾಂತಗಳ ಜನರ ಜ್ಞಾನಭಂಡಾರದ ಕೀಲಿಕೈ ಅವರವರ ಭಾಷೆ ಗಳಲ್ಲಿವೆ ಎಂಬುದನ್ನು ಮರೆಯದಿರೋಣ.

ಆಗಬೇಕಾದ್ದೇನು? 
1. ತುಳು, ಕೊಡವ, ಬ್ಯಾರಿ ಭಾಷೆಗಳ ಅಭಿವೃದ್ಧಿಗೆ ನಿಗಮ ಮಾಡಿರುವಂತೆ ಕನ್ನಡದ್ದೇ ಉಪ ಭಾಷೆಗಳಿಗೂ ಅಭಿವೃದ್ಧಿ ನಿಗಮಗಳಾಗಲಿ.

2. ಎಲ್ಲ ಉಪಭಾಷೆಗಳ ಗಾದೆಮಾತು ಸಂಗ್ರಹ, ಪಡೆ­ ನುಡಿ ಕೋಶ, ನಿಘಂಟು ಬಂದರೆ ಒಳ್ಳೆಯದು.

3. ಉಪಭಾಷೆಗಳಲ್ಲಿ ನಾಟಕ, ಯಕ್ಷಗಾನಾದಿಗಳು, ಕೃತಿ ರಚ­ನೆಗಳು ಹೆಚ್ಚಾದರೆ ಪ್ರಚಾರಕ್ಕೆ ಸಹಾಯ

4. ಉಪಭಾಷೆಗಳ ಕಣ್ಮರೆಯಾದರೆ ಸಂಸ್ಕೃತಿ ನಾಶ ವಾದಂತೆ. ಹಾಗಾಗಿ ಅವುಗಳ ರಕ್ಷಣೆಯಾಗಬೇಕು

5. ಉಪ ಭಾಷೆಗಳ ಸಂಶೋಧನೆ ಹಾಗೂ ಮತ್ತಿತರ ಚಟುವಟಿಕೆಗಳಿಗೆ ಸರಕಾರ ನೆರವು ನೀಡಲಿ

– ಶರತ್‌ ಭಟ್‌ ಸೇರಾಜೆ, ಸಾಫ್ಟ್‌ವೇರ್‌ ತಂತ್ರಜ್ಞ

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.