ಭಾರತದ ತಂಟೆಗೆ ಬಂದರೆ ತಕ್ಕಪಾಠ: ಚೀನಕ್ಕೆ ಭಾರತ ಕಠಿನ ಸಂದೇಶ
ಭಾರತದ ಚಿತ್ರವೇ ಈಗ ಬದಲಾಗಿದೆ. ದೇಶ ಮತ್ತಷ್ಟು ಪ್ರತಿಷ್ಠಿತವಾಗಿದೆ.
Team Udayavani, Apr 16, 2022, 12:41 PM IST
ವಾಷಿಂಗ್ಟನ್: ಭಾರತದ ಸಾರ್ವಭೌಮತ್ವಕ್ಕೆ ಹಾನಿಮಾಡಲು ಯಾರೇ ಪಿತೂರಿ ರೂಪಿಸಿದರೂ, ಅವರನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವ ಮೂಲಕ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು, ಲಡಾಖ್ ಬಿಕ್ಕಟ್ಟಿನ ವಿಚಾರದಲ್ಲಿ ಚೀನಕ್ಕೆ ಕಠಿನ ಸಂದೇಶ ರವಾನಿಸಿದ್ದಾರೆ.
ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಇಂಡೋ- ಅಮೆರಿಕನ್ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಲಡಾಖ್‌ನ ಗಡಿಯಲ್ಲಿ ಭಾರತದ ಯೋಧರು ಏನು ಮಾಡಿದರು? ಕೇಂದ್ರ ಸರಕಾರ ಎಂಥ ನಿಲುವು ತೆಗೆದುಕೊಂಡಿತ್ತು? - ಇವೆಲ್ಲವನ್ನೂ ಸಾರ್ವಜನಿಕವಾಗಿ ಹೇಳಲಾಗದು. ಆದರೆ, ನಮ್ಮ ತಂಟೆಗೆ ಬಂದವರನ್ನು ಸುಮ್ಮನೆ ಬಿಟ್ಟಿಲ್ಲ, ಬಿಡುವುದೂ ಇಲ್ಲ ಎಂಬ ಕಠಿನ ಸಂದೇಶವನ್ನು ನಾವು ಎದುರಾಳಿಗಳಿಗೆ ಮುಟ್ಟಿಸಿದ್ದೇವೆ’ ಎಂದಿದ್ದಾರೆ.
ನಾವು ಏಕಪಕ್ಷೀಯವಲ್ಲ: “ಹೊಸದಿಲ್ಲಿಯ ವಿದೇಶಾಂಗ ನೀತಿ ಏಕಪಕ್ಷೀಯವಲ್ಲ. ನಮ್ಮ ಒಂದು ದೇಶದೊಂದಿಗಿನ ನಮ್ಮ ಸಂಬಂಧ ಇನ್ನೊಂದು ದೇಶದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಯಾವುದೇ ಚಿಂತೆ ಅನಗತ್ಯ’ ಎನ್ನುವ ಮೂಲಕ ರಷ್ಯಾದ ಜತೆಗಿನ ಭಾರತದ ಸಂಬಂಧವನ್ನು ಅಮೆರಿಕನ್ನರಿಗೆ ಮನವರಿಕೆ ಮಾಡಿಸಿದರು.
“ಭಾರತದ ಚಿತ್ರವೇ ಈಗ ಬದಲಾಗಿದೆ. ದೇಶ ಮತ್ತಷ್ಟು ಪ್ರತಿಷ್ಠಿತವಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತ ಜಗತ್ತಿನ ಟಾಪ್ 3 ರಾಷ್ಟ್ರಗಳಿಗೆ ಸೇರುವುದನ್ನು ಯಾರಿಂದಲೂ ತಪ್ಪಿಸಲಾಗದು’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.