ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

ಬೆಳೆ ಕನ್ನಡ ವಿಶೇಷ ಲೇಖನ-3, ಈಗ ಬಹುಸಂಖ್ಯಾತರು ಕನ್ನಡ ಮಾಧ್ಯಮದವರಾದರೂ ಇಂಗ್ಲಿಷಿನಲ್ಲಿಯೇ ಮಾಹಿತಿ ಲಭ್ಯ, ಕೃಷಿಯಲ್ಲೂ ಕನ್ನಡದ ಕೃತಿ ಹೆಚ್ಚು ಬರಬೇಕು

Team Udayavani, Nov 4, 2024, 7:26 AM IST

science-AI-2

ವಿಜ್ಞಾನ ಕೃತಿಗಳು ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗಬೇಕು ಎನ್ನುವುದು ಬಹುವರ್ಷಗಳ ಬೇಡಿಕೆ. ಈಗಲೂ ಅದೇ ಬೇಡಿಕೆ ಮುಂದುವರೆದಿದೆ. ನಾಳೆಯ ದಿನಗಳಲ್ಲಿ ಕನ್ನಡದ ಸಾಹಿತ್ಯ ಸೊಂಪಾಗಬೇಕಾದರೆ ಕೇವಲ ಪುಸ್ತಕಗಳ ಪ್ರಕಟನೆಯಷ್ಟೇ ಅಲ್ಲ. ಇತರ ಮಾಧ್ಯಮಗಳ­ಲ್ಲಿಯೂ ಅಡಕ ಅಥವಾ ಕಂಟೆಂಟನ್ನು ಸೃಷ್ಟಿಸಬೇಕಾಗಿದೆ.

ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕನ್ನಡದಲ್ಲಿ ಎಂಜಿನಿಯರಿಂಗ್‌ನ ಪಠ್ಯ ಪುಸ್ತಕಗಳನ್ನು ಪ್ರಕಟಿಸಲು ಸಿದ್ಧವಾಗುತ್ತಿದೆ ಎನ್ನುವುದು ಹಳೆಯ ಸುದ್ದಿ. ಉನ್ನತ ಶಿಕ್ಷಣವನ್ನೂ ಮಾತೃಭಾಷೆಯಲ್ಲಿಯೇ ನೀಡುವಂತಾಗಬೇಕು ಎನ್ನುವುದು ಹೊಸ ಶಿಕ್ಷಣ ನೀತಿಯ ಆಶಯ. ವಿಜ್ಞಾನವೇ ಆಧಾರವಾಗಿರುವ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಪದವಿಗಳಿಗೆ ಇದು ತರವೇ? ಅಲ್ಲಿನ ವ್ಯವಹಾರಗಳೆಲ್ಲವೂ ಬಹುತೇಕ ಇಂಗ್ಲಿಷಿನಲ್ಲಿಯೇ ಇರುವಾಗ ತರಬೇತಿ ಯನ್ನು ಕನ್ನಡದಲ್ಲಿ ಪಡೆದರೆ ಅದು ಕೊರತೆ ಎನ್ನಿಸದೇ? ಎನ್ನುವ ವಾದಗಳಿವೆ.

ಅದೇನೇ ಇರಲಿ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದು ಇದೇ ಮೊದಲಲ್ಲ. 1952ನೇ ಇಸವಿಯಲ್ಲಿ, ಅಂದರೆ, ಇಂದಿನ ಕರ್ನಾಟಕ ಎನ್ನುವ ರಾಜ್ಯ ಹುಟ್ಟುವುದಕ್ಕೂ ಮೊದಲೇ ಈ ಪ್ರಯತ್ನಗಳು ನಡೆದಿದ್ದವು. ಇಂದಿನ ಚೆನ್ನೆçಯಲ್ಲಿರುವ ಅಂದಿನ ಮದರಾಸು ವಿಶ್ವವಿದ್ಯಾನಿಲಯವು, ಅಂದು ಇನ್ನೂ ಹೊಸದಾಗಿದ್ದ ಪರಮಾಣು ವಿಜ್ಞಾನದ ಬಗ್ಗೆ ನೊಬೆಲ್‌ ಪ್ರಶಸ್ತಿ ವಿಜೇತರಾದ ಸುಪ್ರಸಿದ್ಧ ಜರ್ಮನ್‌ ವಿಜ್ಞಾನಿ ವರ್ನರ್‌ ಹೈಸೆನºರ್ಗ್‌ ಬರೆದ ನ್ಯೂಕ್ಲಿಯಾರ್‌ ಫಿಸಿಕ್ಸ್‌ ಎನ್ನುವ ಬೃಹತ್‌ ಗ್ರಂಥವನ್ನು ಕನ್ನಡದಲ್ಲಿ ಪ್ರಕಟಿಸಿತ್ತು.

ಅದಕ್ಕೂ ಮೊದಲು ಮಂಗಳೂರಿನ ವೆಸ್ಲೀ ಪ್ರೆಸ್‌, ಜರ್ಮನ್‌ ಭಾಷೆಯಲ್ಲಿದ್ದ ವಿಜ್ಞಾನದ ವಿವಿಧ ವಿಜ್ಞಾನ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿತ್ತು. ಇವುಗಳನ್ನು ಅನುವಾದಿಸಿದವರು ವಿಜ್ಞಾನಿಗಳಲ್ಲ. ಭಾಷಾಪಂಡಿತರು. ಪ್ರಾಣಿವಿಜ್ಞಾನ ಸಂಬಂಧಿತ ಪುಸ್ತಕವನ್ನು ಕವಿ ಹಾಗೂ ಇಂಗ್ಲೀಷು ಶಿಕ್ಷಕರಾಗಿದ್ದ ಪಂಜೆ ಮಂಗೇಶರಾಯರು ಅನುವಾದಿಸಿದ್ದರು. ಇದು ನಡೆದದ್ದು 1924ನೇ ಇಸವಿಯಲ್ಲಿ.

ಹಿಂತಿರುಗಿ ನೋಡಿದಾಗ…
ಈಗ 100 ವರ್ಷಗಳು ಕಳೆದ ಅನಂತರ ಹಿಂದೆ ತಿರುಗಿ ನೋಡಿದರೆ ಕನ್ನಡದಲ್ಲಿ ವಿಜ್ಞಾನದ ಸ್ಥಾನಮಾನ ಏನೆಂಬುದರ ಬಗ್ಗೆ ಗೊಂದಲವೇಳುವುದು ಸಹಜವೇ. ಏಕೆಂದರೆ ಪ್ರಪಂಚದ ಸಂಶೋಧನ ಸಂಸ್ಥೆಗಳಲ್ಲಿ ಅತ್ಯುನ್ನತ ಸ್ಥಾನ ಗಳಿಸಿದ ಹಲವು ಸಂಶೋಧನ ಸಂಸ್ಥೆಗಳು ಕರ್ನಾಟಕದಲ್ಲಿ ಇವೆ. ಬೆಂಗಳೂರನ್ನು ಕರ್ನಾಟಕದ ವೈಜ್ಞಾನಿಕ ರಾಜಧಾನಿ ಎನ್ನುವಷ್ಟು ಸಂಖ್ಯೆಯ ರಾಷ್ಟ್ರೀಯ ಪ್ರಯೋಗಾಲಯಗಳು, ಸಂಶೋಧನ ಸಂಸ್ಥೆಗಳು ಇವೆ.

ಜತೆಗೆ ಕಾರ್ಪೊರೆಟ್‌ ಕ್ಷೇತ್ರದಲ್ಲಿನ ಹಲವು ಸಂಶೋಧನ ಸಂಸ್ಥೆಗಳೂ, ಖಾಸಗಿ ವಿಶ್ವವಿದ್ಯಾನಿಲಯ ಗಳೂ ಇವೆ. ಆದರೂ ಕನ್ನಡದಲ್ಲಿ ಇತ್ತೀಚಿನ ಹೊಸ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ತಿಳಿಸಬಲ್ಲಂತಹ ಪಠ್ಯ ಪುಸ್ತಕಗಳು ಕನ್ನಡದಲ್ಲಿ ಇಲ್ಲ. ಬೆಂಗಳೂರಿನಲ್ಲಿಯೇ ಹುಟ್ಟಿದ ಇಂಗ್ಲೀಷು ಪಠ್ಯಪುಸ್ತಕಗಳೂ ಕಡಿಮೆಯೇ ಎನ್ನುವುದು ಇದಕ್ಕೆ ಸಮಾಧಾನವಲ್ಲ ಎನ್ನಿ.

ಬೆರಳೆಣಿಕೆಯಷ್ಟು ಪುಸ್ತಕಗಳು
ಕನ್ನಡದಲ್ಲಿ ಶಿಕ್ಷಣ ಬೇಕೋ ಬೇಡವೋ ಎನ್ನುವ ವಾದ ಹೇಗೇ ಇರಲಿ. ಕನ್ನಡದಲ್ಲಿ ಮಾಹಿತಿ ದೊರಕಬೇಕು ಎನ್ನುವುದಂತೂ ನಿರ್ವಿವಾದ. ಏಕೆಂದರೆ ಇಂದಿಗೂ ಕರ್ನಾಟಕದ ನಿವಾಸಿಗಳಲ್ಲಿ ಶೇಕಡ 70-80 ಮಂದಿ ಕನ್ನಡದಲ್ಲಿಯೇ ವ್ಯವ ಹರಿಸುತ್ತಾರೆ. 10ನೇ ತರಗತಿ ಪಾಸಾದವರಲ್ಲಿ ಶೇಕಡ 20-30 ಮಂದಿಯಷ್ಟೇ ಇಂಗ್ಲೀಷು ಮಾಧ್ಯಮದಲ್ಲಿ ವ್ಯಾಸಂಗ ಪೂರೈಸಿರುತ್ತಾರೆ. ಉಳಿದವರಿಗೆ 70-80 ಶತಾಂಶ ಜನರಿಗೆ ಮಾಹಿತಿಗಳು ಕನ್ನಡದಲ್ಲಿಯೇ ದೊರಕಬೇಕು.

ದುರದೃಷ್ಟವಶಾತ್‌, ಕನ್ನಡದಲ್ಲಿ ಪ್ರಕಟವಾಗುವ ಒಟ್ಟಾರೆ ಪುಸ್ತಕಗಳಲ್ಲಿ ವಿಜ್ಞಾನ ಪುಸ್ತಕಗಳ ಸಂಖ್ಯೆ ಬೆರಳೆಣಿಕೆಯಷ್ಟು, ಪಠ್ಯ ಪುಸ್ತಕಗಳಂತೂ ಇಲ್ಲವೇ ಇಲ್ಲ. ಜನಪ್ರಿಯ ಪುಸ್ತಕ ಗಳಿಗೂ ಕೊರತೆ ಇದೆ. ವೈದ್ಯ, ಕೃಷಿ, ಖಗೋಳ ಹೊರತಾಗಿ ಉಳಿದ ವಿಜ್ಞಾನ ವಿಷಯಗಳಲ್ಲಿ, ಎಂಜಿನಿಯರಿಂಗ್‌ ಕುರಿತ ಪುಸ್ತಕಗಳು ಕಡಿಮೆ. ಶಾಲಾ ಮಟ್ಟದಲ್ಲಿ ಕಲಿಸುವ ವಿಜ್ಞಾನಕ್ಕೆ ಪಠ್ಯಪುಸ್ತಕಗಳನ್ನು ಸರಕಾರವೇ ಒದಗಿಸುತ್ತಿರುವುದು ಇದಕ್ಕೆ ಕಾರಣವಿರಬಹುದು.ಆದರೆ ಈ ಪುಸ್ತಕಗಳಿಗೆ ಪೂರಕವಾದ ಮಾಹಿತಿ ನೀಡುವ ಕನ್ನಡದ ವಿಜ್ಞಾನ ಪುಸ್ತಕಗಳು ಬಣವೆಯಲ್ಲಿನ ಸೂಜಿಯಷ್ಟು. ಇದಕ್ಕೆ ಹೋಲಿಸಿದರೆ ಇಂಗ್ಲೀಷಿನಲ್ಲಿ ನರ್ಸರಿ ಶಾಲೆಯಿಂದ ಪದವಿ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪೂರಕ ಪಠ್ಯಗಳಿಂದ ಆರಂಭಿಸಿ, ಗೈಡು ಪುಸ್ತಕಗಳವರೆಗೆ ಹಲವರ ಪುಸ್ತಕಗಳು ದೊರೆಯುತ್ತವೆ.

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಎಳೆಯದಾಗಿದ್ದಾಗ ಬಾಗದ ಮರ ಬಲಿತಾಗ ಬಾಗೀತೇ ಎನ್ನುವ ಮಾತಿಗೆ ಕನ್ನಡದ ಈ ಪರಿಸ್ಥಿತಿ ತಕ್ಕ ಉದಾಹರಣೆ. ಕನ್ನಡದಲ್ಲಿ ಇಂದಿಗೂ ಮಕ್ಕಳಿಗಾಗಿ ವಿಜ್ಞಾನ ಪುಸ್ತಕಗಳು ಪ್ರಕಟವಾಗುತ್ತಿಲ್ಲ. ದುರದೃಷ್ಟವೆಂದರೆ ವಿಜ್ಞಾನ ಎಂದರೆ ಕೇವಲ ಶಾಲೆಯ ಮಟ್ಟದಲ್ಲಿ ಅರಿತುಕೊಳ್ಳಬೇಕಾದ ವಿಷಯ ಎನ್ನುವ ತಪ್ಪುನಂಬಿಕೆ ವ್ಯಾಪಕವಾಗಿದೆ. ಹಾಗಿದ್ದೂ ಸಣ್ಣ ಮಕ್ಕಳನ್ನು ತಟ್ಟಬಲ್ಲ ವಿಜ್ಞಾನದ ಪುಸ್ತಕಗಳು ಪ್ರಕಟವಾಗುವುದು ಕಡಿಮೆ.

ಆ ವಯಸ್ಸಿನಲ್ಲಿ ವಿಜ್ಞಾನದ ವಿಷಯಗಳನ್ನು ಕಲಿಯಬೇಕಾದ ಆವಶ್ಯಕತೆ ಇಲ್ಲ ಎನ್ನುವುದು ಕೆಲವು ಸಮಾಜ ವಿಜ್ಞಾನಿಗಳ ಅಭಿಪ್ರಾಯ. ಆದರೆ ನಮ್ಮ ಸಮಾಜದ ರೀತಿ, ನೀತಿಗಳನ್ನು ಕಲಿಸುವ ಪುಸ್ತಕಗಳು ಹೇಗೆ ಅತ್ಯಾವಶ್ಯವೋ ಹಾಗೆಯೇ ವಿಜ್ಞಾನವನ್ನು ಕಲಿಯುವ ರೀತಿ, ನೀತಿಗಳನ್ನು ರೂಢಿಸಿಕೊಳ್ಳಲೂ ಇಂತಹ ಪುಸ್ತಕಗಳು ಬೇಕು. ಆದರೆ ಈ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಕನ್ನಡಕ್ಕೆ ಇಂಗ್ಲೀಷಿನ ಮಾಹಿತಿ ಎರಡಲುಗಿನ ಕತ್ತಿ
ಕನ್ನಡ ಭಾಷೆಯ ಹಾಗೂ ವಿಜ್ಞಾನ ಸಂವಹನದ ಹೊಣೆ ಹೊತ್ತಿರುವ ಸಂಸ್ಥೆಗಳು ಬಹುತೇಕ ಕೆಲವು ಪ್ರಶಸ್ತಿಗಳನ್ನು ನೀಡುವಷ್ಟಕ್ಕೆ ಮಾತ್ರ ತಮ್ಮ ಪೋ›ತ್ಸಾಹವನ್ನು ಸೀಮಿತಗೊಳಿಸಿವೆ. ಆದರೆ ಇದಷ್ಟೆ ಸಾಲದು. ನಾಳೆಯ ದಿನಗಳಲ್ಲಿ ಕನ್ನಡದ ಸಾಹಿತ್ಯ ಸೊಂಪಾಗಬೇಕಾದರೆ ಕೇವಲ ಪುಸ್ತಕಗಳ ಪ್ರಕಟನೆಯಷ್ಟೆ ಅಲ್ಲ. ಇತರ ಮಾಧ್ಯಮಗಳಲ್ಲಿಯೂ ಅಡಕ ಅಥವಾ ಕಂಟೆಂಟನ್ನು ಸೃಷ್ಟಿಸಬೇಕಾಗಿದೆ.

ಇದನ್ನು ಈ ಸಂಸ್ಥೆಗಳು ಗಮನಿಸಿ, ಅಂತಹ ಪ್ರಯತ್ನಗಳನ್ನು ಪೋ›ತ್ಸಾಹಿಸಿ ಬೆಳೆಸದಿದ್ದಲ್ಲಿ ಕನ್ನಡದ ಸಾರಸ್ವತ ಲೋಕ ಇನ್ನಷ್ಟು ಬಡವಾಗುವುದರಲ್ಲಿ ಸಂಶಯವಿಲ್ಲ. ಹಾಗಿದ್ದರೆ ಈ ಹೊಸ ತಂತ್ರಜ್ಞಾನಗಳಿಂದ ಕನ್ನಡಕ್ಕೆ ಅಪಾಯವಿಲ್ಲವೇ? ಇದು ಚಾಟ್‌ ಜಿಪಿಟಿ, ಗೂಗಲ್‌ ಜೆಮಿನಿ ಮೊದಲಾದ ತಂತ್ರಜ್ಞಾನಗಳ ಬಳಕೆಯನ್ನು ಕಂಡು ಗಾಬರಿಗೊಂಡವರ ಪ್ರಶ್ನೆ. ನಿಜ. ಇಂದು ಸೊಗಸಾದ ಕನ್ನಡದಲ್ಲಿ ಪ್ರಬಂಧ ಬರೆಯುವ ಸಾಮರ್ಥ್ಯವನ್ನು ಇವು ಬೆಳೆಸಿಕೊಂಡಿವೆ. ಇಂಗ್ಲೀಷಿನ ಮಾಹಿತಿಯನ್ನು ಹೆಕ್ಕಿ ಕನ್ನಡದಲ್ಲಿ ಅದನ್ನು ನೀಡಬಲ್ಲ ಶಕ್ತಿ ಇವಕ್ಕೆ ಇವೆ. ಇದು ಎರಡಲುಗಿನ ಕತ್ತಿಯ ಹಾಗೆ. ಇಂಗ್ಲೀಷಿನಲ್ಲಿರುವ ಮಾಹಿತಿ ಯನ್ನೆಲ್ಲ ಕನ್ನಡದಲ್ಲಿ ಪಡೆಯುವ ಈ ಸಾಮರ್ಥ್ಯವಿರುವಾಗ ಕನ್ನಡ ಕಲಿಯುವುದೇಕೆ ಎನ್ನುವ ಪ್ರಶ್ನೆ ಕೇಳಬಹುದು. ಈ ಪ್ರಶ್ನೆ ವಾಸ್ತವವೇ.

ಕನ್ನಡ ಬಲಗೊಳಿಸುವುದು ಕಷ್ಟವಲ್ಲ…
ವಿಜ್ಞಾನದಂತಹ ಬಹುತೇಕ ವ್ಯವಹಾರಗಳೆಲ್ಲವೂ ಇಂಗ್ಲೀಷಿನಲ್ಲಿಯೇ ನಡೆಯುವ ಕ್ಷೇತ್ರದಲ್ಲಿನ ಮಾಹಿತಿಯನ್ನು ಪಡೆಯಲು ಎಐ ತಂತ್ರಜ್ಞಾನ ಖಂಡಿತ ನೆರವಾಗುತ್ತದೆ. ಅದರಿಂದ ಕನ್ನಡಕ್ಕೆ ಆಗುವ ಹಾನಿಯಂತೆ ಅನುಕೂಲವೂ ಆಗಬಹುದು. ಆ ಅನುಕೂಲ ಪಡೆಯುವುದು ನಮ್ಮ ಕೈಯಲ್ಲಿದೆ. ಉದಾಹರಣೆಗೆ, ಇವೇ ತಂತ್ರಜ್ಞಾನಗಳು ಕನ್ನಡೇತರರೊಂದಿಗೆ ಕನ್ನಡದಲ್ಲಿಯೇ ನಾವು ವಿಜ್ಞಾನ ಕ್ಷೇತ್ರದಲ್ಲಿ ವ್ಯವಹರಿಸಲೂ ಅನುಕೂಲ ಮಾಡಿಕೊಡುತ್ತವೆ. ಹಿಂದಿನಂತೆ ಭಾಷೆ ತೊಡಕಾಗುತ್ತದೆ ಎಂದು ಹಿಂಜರಿಯಬೇಕಿಲ್ಲ. ವಿಜ್ಞಾನಕ್ಕೆ ಒದಗುವಂತೆಯೇ ಈ ತಂತ್ರಜ್ಞಾನ ಆಡಳಿತಕ್ಕೂ, ಶಿಕ್ಷಣಕ್ಕೂ ಒದಗುತ್ತದೆ ಎಂಬುದನ್ನು ಗಮನಿಸಿದರೆ, ಇದರ ಆಸರೆಯಲ್ಲಿ ಕನ್ನಡವನ್ನು ಇನ್ನಷ್ಟು ಬಲಗೊಳಿಸುವುದು ಕಷ್ಟವೇನಲ್ಲ. ಅಂತಹ ಪ್ರಯತ್ನಗಳೂ ನಡೆಯುತ್ತಿವೆ. ಎಲ್ಲರ ಬೆಂಬಲ ಇರಬೇಕು ಅಷ್ಟೆ.

ಆಗಬೇಕಾದ್ದೇನು?
1. ಕನ್ನಡ ಭಾಷೆಯಲ್ಲಿ ಜನಪ್ರಿಯ ವಿಜ್ಞಾನ ಪುಸ್ತಕಗಳು ಹೆಚ್ಚು ಹೆಚ್ಚು ಹೊರಗೆ ಬರಬೇಕು
2. ಕೃತಕ ಬುದ್ಧಿಮತ್ತೆ ಮೂಲಕ ಕನ್ನಡೇತರರ ಜತೆ ಕನ್ನಡದಲ್ಲಿ ವ್ಯವಹರಿಸುವಂತಾಗಬೇಕು
3. ವಿಜ್ಞಾನ ಸಂವಹನದ ಹೊಣೆ ಹೊತ್ತ ಸಂಸ್ಥೆಗಳು ಪ್ರಶಸ್ತಿ ನೀಡಿಕೆಗೆ ಸೀಮಿತ ಆಗಬಾರದು
4. ಪುಸ್ತಕ ಪ್ರಕಟನೆ ಮಾತ್ರವಲ್ಲ, ಇತರ ಮಾಧ್ಯಮ­ಗಳಲ್ಲಿ ಕನ್ನಡದ ಅಡಕಗಳ ಸೃಷ್ಟಿಯಾಗಬೇಕು
5. ಕೃಷಿ, ಖಗೋಳ ವಿಷಯಗಳ ಕುರಿತು ಕನ್ನಡದಲ್ಲೇ ಕೃತಿಗಳು ಪ್ರಕಟವಾಗುವಂತೆ ಮಾಡಬೇಕು


– ಕೊಳ್ಳೇಗಾಲ ಶರ್ಮ ವಿಜ್ಞಾನ ಲೇಖಕರು, ಮೈಸೂರು

ಟಾಪ್ ನ್ಯೂಸ್

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.