ಗೋವಾ ಇಫಿ ಚಿತ್ರೋತ್ಸವ: ಮಣಿಪುರಿ ಸಿನಿಮಾಕ್ಕೆ ಸುವರ್ಣ ಸಂಭ್ರಮ; ಈಶಾನ್ಯ ಭಾರತದ ಸಂಸ್ಕೃತಿಯ ಹಿರಿಮೆಯ ಹತ್ತು ಚಿತ್ರಗಳು!
Team Udayavani, Nov 20, 2022, 9:29 AM IST
ಪಣಜಿ: ಮಣಿಪುರಿ ಭಾಷೆಯ ಸಿನಿಮಾದ ಐವತ್ತು ವರ್ಷದ ಸುವರ್ಣ ಪಯಣವನ್ನು ಕಾಣಲಿಕ್ಕೆ ಈ ಉತ್ಸವಕ್ಕೆ ಬರಬಹುದು.
ಮಣಿಪುರಿ ಭಾರತೀಯ ಭಾಷೆಗಳಲ್ಲಿ ಪ್ರಮುಖವಾದುದು. ಅದರಲ್ಲೂಈಶಾನ್ಯ ಭಾರತದ ವಿಶಿಷ್ಟ ಸಂಸ್ಕೃತಿಯನ್ನು ಹಿಡಿದುಕೊಡುವಂಥ ಪ್ರಮುಖ ಭಾಷೆಗಳಲ್ಲಿ ಒಂದು. ಅಲ್ಲಿಯ ಸಿನಿಮಾ ಸಂಸ್ಕೃತಿಗೂ ಈಗ ಸುವರ್ಣ ವರ್ಷದ ಸಂಭ್ರಮ.
ಅದನ್ನು ಬೊಗಸೆಯಲ್ಲಿ ಹಿಡಿದುಕೊಡುವ ಪ್ರಯತ್ನ ಮಾಡಿದೆ. 53 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ [IFFI). ಈ ಮೂಲಕ ಈಶಾನ್ಯ ಭಾರತದ ಸಾಂಸ್ಕೃತಿಕ ಸಿರಿವಂತಿಕೆ ಹಾಗೂ ಪರಿಸರವನ್ನು ಜಗತ್ತಿಗೆ ತೆರೆದಿಡುವ ಉದ್ದೇಶವೂ ಈ ಪ್ರಯತ್ನದ ಹಿಂದಿದೆ.
ಒಂಬತ್ತು ದಿನಗಳ ಉತ್ಸವದಲ್ಲಿ ಮಣಿಪುರಿ ಭಾಷೆಯ ಐದು ಕಥಾ ಹಾಗೂ ಐದು ಕಥೇತರ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮಣಿಪುರ ರಾಜ್ಯದ ಫಿಲ್ಮ್ ಡೆವಲಪ್‌ಮೆಂಟ್ ಸೊಸೈಟಿ ಇವುಗಳನ್ನು ಒದಗಿಸಿದೆ.
1972ರ ಏಪ್ರಿಲ್ 9 ರಂದು ಬಿಡುಗಡೆ ಕಂಡ ದೇಬ್ ಕುಮಾರ್ ಬೋಸ್ ಅವರ ಮಣಿಪುರಿಯ ಮೊದಲ ಚಿತ್ರ ‘ಮಾತಂಗಿ ಮಣಿಪುರ್’ ಸಹ ಈ ಬಾರಿ ಪ್ರದರ್ಶನಗೊಳ್ಳುತ್ತಿದೆ. ಇದರೊಂದಿಗೆ ಅರಿಬಂ ಶ್ಯಾಮ್ ಶರ್ಮರ ’ಇಶಾನೊವೊ’ [Ishanaou] ಹಾಗೂ ’ರಥನ್ ಥಿಯಾಂ-ದಿ ಮ್ಯಾನ್ ಆಪ್ ಥಿಯೇಟರ್’ ಎರಡೂ ಮಣಿಪುರ ರಾಜ್ಯದ ಶ್ರೇಷ್ಠ ಸಂಸ್ಕೃತಿ ಹಾಗೂ ನೃತ್ಯ ಸಂಗೀತ ಹಾಗೂ ನಾಟಕ ಪರಂಪರೆಯನ್ನು ಕಟ್ಟಿ ಕೊಡಲಿದೆ.
ಇದನ್ನೂ ಓದಿ:ಭಾರತ-ನ್ಯೂಜಿಲ್ಯಾಂಡ್ ಟಿ20 ಸರಣಿ: ದ್ವಿತೀಯ ಪಂದ್ಯಕ್ಕೂ ಎದುರಾಗಿದೆ ಮಳೆ ಭೀತಿ
ಅಲ್ಲದೇ ಮಣಿಪುರಿ ಸಿನಿಮಾದ ದಿಗ್ಗಜರೆನಿಸುವ ಓಕೆನ್ ಅಮಕ್ಚಮ್ [Oken Amakcham], ನಿರ್ಮಲಾ ಚಾನು [Nirmala Chanu], ಬೊರುನ್ ಥೋಕ್ಚೋಮ್ [Borun Thokchom], ರೋಮಿ ಮಿಥೈ [Romi Meitei] ಅವರ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.
ಇಶಾನೊಹೊ ಚಿತ್ರವು ಒಬ್ಬ ಮಹಿಳೆ, ಆಚರಣೆ ಹಾಗೂ ಸಮಾಜದ ಸುತ್ತಲಿನ ಕಥೆ. ಕಥಾ ನಾಯಕಿ ತಂಪಾ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಬದುಕು ಕಳೆಯುತ್ತಿರುತ್ತಾಳೆ. ಒಂದು ದಿನ ಪತಿ ಇದ್ದಕ್ಕಿದ್ದಂತೆ ಅವಳನ್ನು ಬಿಟ್ಟು ಹೋಗುತ್ತಾನೆ. ಅನಂತರದ ಬದುಕು ಸಾಗುವ ಪರಿ ಮತ್ತು ಸಮಾಜ, ಆಚರಣೆ ಎಲ್ಲವೂ ಸಿನಿಮಾದ ವಸ್ತು.
ಬ್ರೊಜೆಂದ್ರಗೀ ಲುಹೊಂಗ್ಬಾ [Brojendragee Luhongba] ಸಹ ವಿಶಿಷ್ಟವಾದ ಕಥಾವಸ್ತು. ತನ್ನ ತಾಯಿ ತೋರಿಸಿದ ಹುಡುಗಿಯನ್ನು ಒಲ್ಲದ ಮನಸ್ಸಿನಿಂದ ಮದುವೆಯಾಗುವ ವಿದ್ಯಾವಂತ ಡಾಕ್ಟರ್ ನೊಬ್ಬ ಅವಳನ್ನು ತಲೆ ಎತ್ತಿಯೂ ನೋಡುವುದಿಲ್ಲ. ಅವಳು ಮತ್ತು ಅವಳ ಆಸಕ್ತಿ, ಅಭಿರುಚಿಯನ್ನು ತಿಳಿದುಕೊಳ್ಳಲೂ ಪ್ರಯತ್ನಿಸುವುದಿಲ್ಲ. ಒಮ್ಮೆ ಸಂಗೀತ ಕಾರ್ಯಕ್ರಮಕ್ಕೆ ಹೋಗಿ, ಸಂಗೀತಗಾರ್ತಿ್‌ಯ ಪ್ರಸ್ತುತಿಯನ್ನು ಇಷ್ಟಪಟ್ಟು ಒಂದು ಬಗೆಯ ಅನುರಕ್ತನಾಗುತ್ತಾನೆ. ಆ ಬಳಿಕ ಮನೆಗೆ ಬಂದರೆ ಅದೇ ಸಂಗೀತಗಾರ್ತಿ ತನ್ನ ಪತ್ನಿಯೆಂಬುದು ತಿಳಿಯುತ್ತದೆ. ಎಸ್.ಎನ್.ಚಾಂದ್ ಸಜತಿ ನಿರ್ದೇಶಿಸಿರುವ ಚಿತ್ರವಿದು.
ಲೋಕತಕ್ ಲೇಕ್ ಒಂದು ಕಾವ್ಯಮಯ ಚಿತ್ರ. ಹೋಬಮ್ ಪಬನ್ ಕುಮಾರ್ ನಿರ್ದೇಶಿಸಿರುವಂಥದ್ದು.
ದೇಬ್ ಕುಮಾರ್ ಬೋಸ್ ಅವರ ಮಾತಂಗಿ ಮಣಿಪುರಿಯೂ ಮಧ್ಯಮ ವರ್ಗದ ಕುಟುಂಬದ ಸುತ್ತಲಿನ ಚಿತ್ರ. ಒಬ್ಬ ನಿವೃತ್ತ ನೌಕರ ಮತ್ತು ಅವನ ಕುಟುಂಬ. ಹಳೆಯ ಹಾಗೂ ಆಧುನಿಕ ಮೌಲ್ಯಗಳ ದ್ವಂದ್ವದಲ್ಲಿ ಮಕ್ಕಳು ಸಾಗುತ್ತಾರೆ. ಇದರ ಕುರಿತಾದ ಚಿತ್ರವಿದು.
ಓನಮ್ ಗೌತಮ್ [Oinam Gautam] ಸಹ ನಿರ್ದೇಶಿಸಿರುವುದು ಮಹಿಳಾ ಕಥಾವಸ್ತು ಆಧರಿತ ಫಿಜಿಗಿ ಮಣಿ. ಒಂದು ಕುಟುಂಬದ ವಿಘಟನೆ ಹಾಗೂ ಸಂಘಟನೆಯ ಚಿತ್ರಣದಲ್ಲಿ ಮಣಿಪುರಿಯ ಸಾಮಾಜಿಕ ಹಾಗೂ ರಾಜಕೀಯ ನೆಲೆಗಳನ್ನೂ ಚರ್ಚಿಸುವ ಚಿತ್ರವಿದು.
ಶ್ರೇಷ್ಠ ಕವಿ, ನಾಟಕಕಾರ, ಕಲಾವಿದ, ಸಂಗೀತಗಾರ ಎಲ್ಲವೂ ಆಗಿದ್ದ ರಥನ್ ಥಿಯಾಂ ಕುರಿತ ಚಿತ್ರವಿದು. ಓಕೆನ್ ಅಮಕ್ಚಮ್ ಹಾಗೂ ನಿರ್ಮಲಾ ಚಾನು ನಿರ್ದೇಶಿಸಿರುವಂಥದ್ದು.
ಇಲಿಸಾ ಅಮಗಿ ಮಾಹೋ [Ilisa amaagi maho] ನಿಂಗ್ತಾವುಜಾ [Ningthauja Lancha] ಲಾಂಚಾ ನಿರ್ದೇಶಿಸಿರುವ ಚಿತ್ರ. ಎನ್. ಕುಂಜಮೋಹನ್ ಅವರ ಥೆ ಆಧರಿತವಾದದ್ದು.
ಹಾಗೆಯೇ ಅಶೋಕ್ ವಿಲೊ [Ashok Veilou), ಬೊರೊನ್ ತೊಕ್ಚಮ್, ರೋಮಿ ಮಿಥೈ ಅವರ ನಿರ್ದೇಶಿತ ಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್
Chef Chidambara: ಅನಿರುದ್ಧ್ ಅಡುಗೆ ಶುರು
Bollywood: ರಿಮೇಕ್ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್ ಸಿನಿಮಾಗಳು
ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್
ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.