IFFI 2023: ಮೊದಲ ಇಫಿ ಚಿತ್ರೋತ್ಸವ ಉದ್ಘಾಟಿಸಿದ್ದು ಪ್ರಧಾನಿಯಲ್ಲ; ಒಬ್ಬ ಕನ್ನಡಿಗ !

ಮುಂಬಯಿಯಲ್ಲಿ ಮೊದಲ ಚಿತ್ರೋತ್ಸವವನ್ನು ಸಂಘಟಿಸಲಾಯಿತು.

Team Udayavani, Nov 1, 2023, 6:30 PM IST

IFFI 2023: ಮೊದಲ ಇಫಿ ಚಿತ್ರೋತ್ಸವ ಉದ್ಘಾಟಿಸಿದ್ದು ಪ್ರಧಾನಿಯಲ್ಲ; ಒಬ್ಬ ಕನ್ನಡಿಗ !

ಇಫಿ ಚಿತ್ರೋತ್ಸವ ಎಂದು ಪ್ರಸಿದ್ಧವಾಗಿರುವ ಭಾರತೀಯ ಆಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಸ್ತುತ ಜಗತ್ತಿನ ಪ್ರತಿಷ್ಠಿತ ಉತ್ಸವಗಳಲ್ಲಿ ಒಂದು. ಐವತ್ತನಾಲ್ಕು ವರ್ಷಗಳ ಪಯಣದಲ್ಲಿ ಸಾಕಷ್ಟು ಅಚ್ಚರಿಗಳು, ವಿಶಿಷ್ಟ ಸಂಗತಿಗಳನ್ನು ಹುದುಗಿಸಿಕೊಂಡಿವೆ. ಅವುಗಳಲ್ಲಿ ಕೆಲವದ್ದರ ಹಿಂದೆ ಬೆಳಕು ಚೆಲ್ಲುವಂಥ ಪ್ರಯತ್ನ.

ಇನ್ನು ಇಪ್ಪತ್ತು ದಿನಗಳಲ್ಲಿ ಗೋವಾದ ಪಣಜಿಯಲ್ಲಿ ಮತ್ತೂಂದು ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಆರಂಭವಾಗುತ್ತದೆ. ಮತ್ತೆ ಚಿತ್ರನಗರಿಯಲ್ಲಿ ನವಿಲು ಕುಣಿಯತೊಡಗುತ್ತದೆ. ಇದು 54 ನೇ ಚಲನಚಿತ್ರೋತ್ಸವ.

ನ. 20 ರಿಂದ 28 ರವರೆಗೆ ನಡೆಯುವ ಉತ್ಸವದಲ್ಲಿ ದೇಶ ವಿದೇಶಗಳ 300 ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇವುಗಳಲ್ಲಿ ಬಹುತೇಕ ಇತ್ತೀಚಿನ ಫ‌ಸಲೇ. ಕೆಲವು ವಿಭಾಗಗಳಲ್ಲಿ ಹಳೆಯ ಕ್ಲಾಸಿಕ್‌ ಸಿನಿಮಾಗಳೂ ಪ್ರದರ್ಶನಗೊಳ್ಳಲಿವೆ. ಮಾಸ್ಟರ್‌ ಕ್ಲಾಸ್‌ನಂಥ ವಿಭಾಗದಲ್ಲಿ ಸಿನಿ ಪರಿಣಿತರು ತಮ್ಮ ತಂತ್ರಗಳನ್ನು, ಕೌಶಲವನ್ನು ಸಿನಿಮೋಹಿಗಳಿಗೆ ವಿವರಿಸುತ್ತಾರೆ. ಇವೆಲ್ಲದರ ಮ«ಲು ಒಂದಿಷ್ಟು ಭಾರತೀಯ ಹಾಗೂ ವಿದೇಶಿ ಸಿನಿಮಾಗಳ ನಟರು, ನಿರ್ದೇಶಕರು, ಸಿನಿ ಕ್ಷೇತ್ರದ ಗಣ್ಯರ ಭೇಟಿ ನಡೆಯುತ್ತದೆ. ಪ್ರಮುಖ ಸಿನಿಮಾಗಳ ನಟರು, ನಿರ್ದೇಶಕರಿಗೆ ಹಾಕುವ ಕೆಂಪುಹಾಸು ವಿಶೇಷವಾದದ್ದೇ.

ಇವೆಲ್ಲದರ ಮಧ್ಯೆ ಇಂಥದೊಂದು ಭಾರತೀಯ ಸಿನಿಮೋತ್ಸವಕ್ಕೇ ಕೆಂಪು ಹಾಸು ಹಾಕಿದ್ದು ಯಾವಾಗ ಮತ್ತು ಯಾರು ಎಂಬುದೇ ಕುತೂಹಲದ ಪ್ರಶ್ನೆ. ಅಷ್ಟೇ ಅಲ್ಲ. ಮೊದಲ ಚಿತ್ರೋತ್ಸವವನ್ನು ಉದ್ಘಾಟಿಸುವ ನೈಜ ಭಾಗ್ಯ ಕನ್ನಡಿಗನದ್ದಾಗಿತ್ತು ಎಂಬುದು ಮತ್ತೂ ಕುತೂಹಲದ ಸಂಗತಿ.

1951 ರ ಸಂದರ್ಭ. ಪ್ರಧಾನಿ ನೆಹರೂ ಆಗಲೇ ಭಾರತೀಯ ಸಿನಿಮಾಗಳನ್ನು ವಿಶ್ವ ವೇದಿಕೆಯಲ್ಲಿ ಬಿಂಬಿಸುವ ಬಗೆ ಕುರಿತು ಆಲೋಚಿಸುತ್ತಿದ್ದರಂತೆ. ಜಮ್ಮು ಮತ್ತು ಕಾಶ್ಮೀರದಲ್ಲೂ ಚುನಾವಣೆಗೆ ವೇದಿಕೆ ಸಜ್ಜಾಗಿತ್ತು. ದೇಶದ ಮೊದಲ ಪ್ರಧಾನಿ ಪಂ. ಜವಾಹರಲಾಲ್‌ ನೆಹರೂ ಮತ್ತು ವಾರ್ತಾ ಮತ್ತು ಸಚಿವ ಆರ್‌. ಆರ್‌. ದಿವಾಕರ್‌ ನ್ಯಾಷನಲ್‌ ಕಾನ್ಸರೆನ್ಸ್‌ನ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲೆಂದು ಶ್ರೀನಗರಕ್ಕೆ ಬಂದರು. ಅದೇ ಸಂದರ್ಭದಲ್ಲಿ ಆಗಿನ ಫಿಲ್ಮ್ ಡಿವಿಷನ್‌ ನ ಚೀಫ್ ಪ್ರೊಡ್ನೂಸರ್‌ ಆಗಿದ್ದ ಮೋಹನ್‌ ಭವನಾನಿಯ ವರು ಸಾಕ್ಷ್ಯಚಿತ್ರ ಚಿತ್ರೀಕರಣಕ್ಕೆ ಶ್ರೀನಗರಕ್ಕೆ ಬಂದಿದ್ದರು. ಪ್ರಧಾನಿಯನ್ನು ಭೇಟಿಯಾಗುವಂತೆ ಸೂಚನೆ ಬಂದಿತು. ಆ ಸಂದರ್ಭದಲ್ಲಿ ಭಾರತೀಯ ಸಿನಿಮಾಗಳ ಪ್ರದರ್ಶನದ ಬಗ್ಗೆ ಚರ್ಚಿಸಿದಾಗ ಮೋಹನ್‌ ತಮ್ಮ ಚಿತ್ರೋತ್ಸವದ ಆಲೋಚನೆಯನ್ನು ಮುಂದಿಟ್ಟರಂತೆ. ಮೋಹನ್‌ ಭವನಾನಿ ಅವರು ಜರ್ಮನಿಯಲ್ಲಿ ಸಿನಿಮಾ ಕಲೆ ಕಲಿತು ಭಾರತಕ್ಕೆ ವಾಪಸಾಗಿ ಹಲವಾರು ಸಿನಿಮಾಗಳನ್ನು ರೂಪಿಸಿದವರು.

ಅಂತೂ ಒಂದು ವರ್ಷದಲ್ಲಿ ಆಲೋಚನೆ ದೊಡ್ಡದಾಗಿ ಬೆಳೆದು ವಾಸ್ತವಕ್ಕೆ ಬರುವಷ್ಟರಲ್ಲಿ ಜನವರಿ 1952 ಬಂದಿತ್ತು. ಮುಂಬಯಿಯಲ್ಲಿ ಮೊದಲ ಚಿತ್ರೋತ್ಸವವನ್ನು ಸಂಘಟಿಸಲಾಯಿತು. ಜನವರಿ 24 ರಿಂದ ಫೆಬ್ರವರಿ 1 ರವರೆಗೆ ಮೊದಲ ಚಿತ್ರೋತ್ಸವ ನಡೆಯಿತು. ಇಷ್ಟಕ್ಕೂ ಭಾರತೀಯ ಸಿನಿಮಾದ ಹೊಸ ಅಧ್ಯಾಯವನ್ನು ಆರಂಭಿಸುವ ಸಂದರ್ಭಕ್ಕೆ ಸಾಕ್ಷಿಯಾಗಲು ಪ್ರಧಾನಿಗೆ ಅದೃಷ್ಟವಿರಲಿಲ್ಲ. ಆ ಅದೃಷ್ಟ ದೊರಕಿದ್ದು ಕನ್ನಡಿಗರಾದ ಆಗಿನ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಆರ್‌.ಆರ್‌. ದಿವಾಕರ್‌ ಅವರಿಗೆ. ಆರ್‌. ಆರ್‌. ದಿವಾಕರ್‌ ಅವರು ಧಾರವಾಡದವರು. ಸ್ವಾತಂತ್ರ್ಯ ಹೋರಾಟಕ್ಕೂ ಇಳಿದಿದ್ದ ಅವರು, ದೇಶದ ಮೊದಲ ಸರಕಾರದ (1949-52) ಭಾಗವಾಗಿದ್ದರು. 1952 ರ ಜನವರಿಯಲ್ಲಿ ಚಿತ್ರೋತ್ಸವ ಉದ್ಘಾಟಿಸಿದರು. ಆದರೆ ಅದಾದ ಕೆಲವೇ ತಿಂಗಳಲ್ಲಿ ಸಚಿವ ಪದವಿಗೆ ರಾಜೀನಾಮೆ ಇತ್ತರು. ಆ ಬಳಿಕ ಅವರು ಬಿಹಾರದ ರಾಜ್ಯಪಾಲರೂ ಆದರು.

ಇಂದು ಗರಿಬಿಚ್ಚಿ ಕುಣಿಯುತ್ತಿರುವ ನವಿಲಿಗೆ ಅಂದು ಹಸಿರುನಿಶಾನೆ ತೋರಿದ್ದು ಕನ್ನಡಿಗರೆಂದರೆ ಹೆಮ್ಮೆಯ ಸಂಗತಿಯಲ್ಲವೇ?
ಇಷ್ಟಕ್ಕೂ ಇಂಥದೊಂದು ನವಿಲು ಎಲ್ಲೆಲ್ಲಿ ಎಷ್ಟೆಷ್ಟು ಬಾರಿ ಕುಣಿದಿದೆ ಗೊತ್ತೇ? ಅದೂ ವಿಶೇಷವೇ.

*ಅರವಿಂದ ನಾವಡ

ಟಾಪ್ ನ್ಯೂಸ್

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

Agarwal

Vijay Hazare Trophy; ಮಯಾಂಕ್‌ ಅಗರ್ವಾಲ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಪ್ಪಳದಲ್ಲಿ ಕ್ಯಾನ್ಸರ್‌ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್‌ ಪತ್ತೆ!

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.