ಅನಧಿಕೃತ ಅಂಗಡಿ ತೆರವಿಗೆ ಆಗ್ರಹ : ಬಂಟ್ವಾಳ ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
Team Udayavani, Apr 2, 2022, 10:15 PM IST
ಬಂಟ್ವಾಳ: ಮೆಲ್ಕಾರಿನಲ್ಲಿ ಅನ ಧಿಕೃತ ಅಂಗಡಿಗಳನ್ನು ತೆರವು ಮಾಡಬೇಕು ಎಂದು ನ್ಯಾಯಾಲಯದ ಆದೇಶವಿದ್ದರೂ ಬಂಟ್ವಾಳ ಪುರಸಭೆಯ ಅ ಧಿಕಾರಿಗಳು ಅವುಗಳನ್ನು ತೆರವು ಮಾಡುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರು ಬಂಟ್ವಾಳ ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಕಚೇರಿಗೆ ಬೀಗ ಹಾಕುತ್ತಿದ್ದಂತೆ ಆಗಮಿಸಿದ ಬಂಟ್ವಾಳ ನಗರ ಪೊಲೀಸರು, ನಿಮಗೆ ಪ್ರತಿಭಟನೆ ಮಾಡುವುದಕ್ಕೆ ಅವಕಾಶವಿದೆ. ಆದರೆ ಸರಕಾರಿ ಕಚೇರಿಗೆ ಬೀಗ ಹಾಕುವುದಕ್ಕೆ ಅವಕಾಶವಿಲ್ಲ ಎಂದು ಬೀಗ ತೆರವಿಗೆ ಸೂಚನೆ ನೀಡಿದರು. ಬಳಿಕ ಪ್ರತಿಭಟನಾಕಾರರು ಬೀಗ ತೆರೆದು ಸ್ಥಳಕ್ಕೆ ಸಹಾಯಕ ಕಮೀಷನರ್ ಆಗಮಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬುಡಾ ಸದಸ್ಯ ಸಚಿನ್ ಮೆಲ್ಕಾರ್ ಮಾತ ನಾಡಿ, ಮೆಲ್ಕಾರಿನ ಅಂಗಡಿಗಳ ತೆರವಿಗೆ ನ್ಯಾಯಾಲಯದ ಆದೇಶವಿದ್ದರೂ, ಪುರಸಭೆ ಮುಖ್ಯಾ ಧಿಕಾರಿ ಆದೇಶ ಪಾಲನೆ ಮಾಡುತ್ತಿಲ್ಲ. ಶಾಸಕರು, ಎಸಿಯವರಿಗೆ ದೂರು ನೀಡಿದ್ದೇವೆ ಎಂದು ಹೇಳಿದರೆ ಉಢಾಪೆ ಉತ್ತರ ನೀಡುತ್ತಾರೆ. ಅವರು ಯಾಕೆ ಅನ ಧಿಕೃತ ಅಂಗಡಿಗಳಿಗೆ ಬೀಗ ಹಾಕುತ್ತಿಲ್ಲ ಎಂಬ ವಿಚಾರವನ್ನು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.
ಅನಧಿಕೃತ ಅಂಗಡಿಗಳ ತೆರವಿನ ಕುರಿತು ಸ್ಥಳೀಯರು ದ.ಕ. ಜಿಲ್ಲಾ ಧಿಕಾರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕೆಲವು ಸಮಯಗಳ ಹಿಂದೆ ಮಂಗಳೂರು ಸಹಾಯಕ ಕಮೀ ಷನರ್ ಮದನ್ ಮೋಹನ್ ಸಿ. ಸ್ಥಳ ಪರಿಶೀಲನೆ ನಡೆಸಿ ಪರವಾನಿಗೆ ಇಲ್ಲದ ಅಂಗಡಿಗಳನ್ನು ತೆರವು ಮಾಡುವ ಕುರಿತು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಬಂಟ್ವಾಳ ನಗರ ಠಾಣಾ ಇನ್ಸ್‌ಪೆಕ್ಟರ್ ವಿವೇಕಾನಂದ, ಪಿಎಸ್‌ಐ ಅವಿನಾಶ್ ಪ್ರತಿ ಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ರೂಪೇಶ್ ಆಚಾರ್ಯ, ಲೋಹಿತ್, ಗುರುರಾಜ್ ಬಂಟ್ವಾಳ, ಪ್ರದೀಪ್ ಅಜ್ಜಿಬೆಟ್ಟು, ಖಾಲಿದ್ ನಂದಾವರ, ಪ್ರಸನ್ನ ಮೆಲ್ಕಾರ್, ಸುದರ್ಶನ್ ಮೆಲ್ಕಾರ್, ಸುರೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಸ್ಥಳಕ್ಕೆ ಎಸಿ ಭೇಟಿ
ಬಂಟ್ವಾಳ ಪುರಸಭೆ ಕಚೇರಿಗೆ ಮಂಗಳೂರು ಸಹಾಯಕ ಕಮೀಷನರ್ ಮದನ್ ಮೋಹನ್ ಸಿ. ಭೇಟಿ ನೀಡಿ ನ್ಯಾಯಾಲಯದ ಆದೇಶಗಳನ್ನು ಪರಿಶೀಲನೆ ನಡೆಸಿದರು. ಜತೆಗೆ ಪ್ರಕರಣದ ಕುರಿತು ವಾದಿಸುತ್ತಿರುವ ನ್ಯಾಯವಾದಿಗಳ ಜತೆ ಮಾತುಕತೆ ನಡೆಸಿದರು. ಅನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.