ಮುಳುವಾದ ಆದೇಶಗಳ ಅಸಮರ್ಪಕ ಅನುಷ್ಠಾನ
ಇಟಲಿ ಎಡವಿದ ಕಥೆ ಉಳಿದವರಿಗೆ ಪಾಠ
Team Udayavani, Apr 7, 2020, 5:25 PM IST
ಮಣಿಪಾಲ: ಇಟಲಿ ಕೋವಿಡ್-19 ಸೋಂಕು ತಡೆ ವಿಚಾರದಲ್ಲಿ ಕೊಂಚ ತಡವಾಗಿ ಎಚ್ಚೆತ್ತು ಕೊಂಡಿದ್ದು, ತನ್ನ ಮೊಂಡುತನಕ್ಕೆ ಈಗ ಪಶ್ಚಾತಾಪ ಪಡುತ್ತಿದೆ. ಆದರೆ ಉಳಿದ ದೇಶಗಳು ಇಟಲಿಯ ಅನುಭವದಿಂದ ಕಲಿತು ಕೊಳ್ಳಬೇಕಾದದ್ದು ಬಹಳಷ್ಟಿದೆ. ಇಟಲಿಯ ತಪ್ಪುಗಳನ್ನು ಲೆಕ್ಕ ಹಾಕಿದರೆ, ಉಳಿದ ರಾಷ್ಟ್ರಗಳಿಗೆ ನಡೆಯುವ ಹಾದಿ ಸ್ಪಷ್ಟವಾಗುತ್ತದೆ.
ಸಾಮಾಜಿಕ ಅಂತರ ನಿಯಮಕ್ಕೆ ತಿಲಾಂಜಲಿ
ಸರಕಾರ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಸಾರ್ವಜನಿಕರು ಮತ್ತು ರಾಜಕೀಯ ನಾಯಕರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇಂತಹ ಆಘಾತಕಾರಿ ಘಟ್ಟದಲ್ಲೂ ರಾಜಕೀಯ ನಾಯಕರ ಒಂದು ಗುಂಪು ಕೋವಿಡ್-19 ಸೋಂಕಿನ ಲಕ್ಷಣಗಳ ಬಗ್ಗೆ ಅರಿವಿದ್ದರೂ ಹಸ್ತಲಾಘವ ನಡೆಸಿದರು. ಈ ಪೈಕಿ ಒಬ್ಬರಿಗೆ ಒಂದು ವಾರದ ನಂತರ ಸೋಂಕು ಕಾಣಿಸಿಕೊಂಡಿತ್ತು.
ಲಾಕ್‌ಡೌನ್ ಘೋಷಣೆಗೆ ವಿಳಂಬ
ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಆರಂಭವಾಗಿ ಅಧಿಕ ಮಟ್ಟದಲ್ಲಿ ವ್ಯಾಪಿಸುವ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವುದು ಅತ್ಯಂತ ಕಷ್ಟಕರ. ಈ ರೋಗವನ್ನು ತಡೆಗೆ ಮೊದಲೇ ಅತ್ಯಂತ ಕಠಿನ ಕ್ರಮ ಕೈಗೊಳ್ಳಬೇಕು. ಆದರೆ ಇಟಲಿ ಕೋವಿಡ್-19 ವೈರಸ್ ಕಾಣಿಸಿಕೊಂಡಾಗ ಸಣ್ಣ ಪ್ರಮಾಣದಲ್ಲಿ ತಡೆ ಕ್ರಮಗಳನ್ನು ಕೈಗೊಂಡಿತು. ಸಮಸ್ಯೆ ವ್ಯಾಪಕವಾಗಿ ಹರಡುತ್ತಾ ಹೋದಂತೆ, ಇನ್ನಷ್ಟು ಕ್ರಮಗಳನ್ನು ಕೈಗೊಂಡಿತಾದರೂ ಕಾಲ ಮಿಂಚಿ ಹೋಗಿತ್ತು. ಹೆಚ್ಚಿನ ಪ್ರಕರಣಗಳು ದಾಖಲಾದ ಪ್ರದೇಶವನ್ನು ರೆಡ್ ಝೋನ್ ಎಂದು ಗುರುತಿಸಿತು. ಆ ಪ್ರದೇಶದಲ್ಲೂ ತೀವ್ರತೆಯನ್ನು ಆಧರಿಸಿ ಲಾಕ್‌ಡೌನ್‌ಗಳನ್ನು ಘೋಷಿಸಿತು. ಅಂತಿಮವಾಗಿ ಇಡೀ ದೇಶಕ್ಕೆ ಲಾಕ್‌ಡೌನ್ ವಿಸ್ತರಿಸಲಾಯಿತು. ಆದರೆ ಈ ಕಾರ್ಯವನ್ನು ಮೊದಲೇ ಮಾಡಿದ್ದರೆ ಪರಿಸ್ಥಿತಿ ನಿಯಂತ್ರ ಣಗೊಳ್ಳುತ್ತಿತ್ತು ಎಂಬ ಮಾತು ಈಗ ಕೇಳಿ ಬರುತ್ತಿದೆ.
ಸೀಮಿತ ನಿಯಮಗಳು
ಭಾಗಶಃ ಲಾಕ್‌ಡೌನ್ ಘೋಷಿಸಿದಾಗ ದೇಶದಲ್ಲಿ ಕಡಿಮೆ ನಿರ್ಬಂಧ ಇರುವ ಪ್ರದೇಶಗಳಿಗೆ ಜನರು ಪ್ರಯಾಣಿಸ ತೊಡಗಿದರು. ಈ ಸೀಮಿತ ಲಾಕ್‌ಡೌನ್‌ಗಳು ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣವಾಯಿತು. ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ಪ್ರಯಾಣಿಸುವರ ಜತೆ ಸೋಂಕೂ ಸಹ ಹರಡಿರಬಹುದು ಎಂದು ಹಾವರ್ಡ್ ಸಂಶೋಧಕರು ಹೇಳಿದ್ದಾರೆ. ಉತ್ತರ ಇಟಲಿಯನ್ನು ಮುಚ್ಚುವ ಆದೇಶವು ಜನರಿಗೆ ತಿಳಿಯುತ್ತಿದ್ದಂತೆಯೇ ದಕ್ಷಿಣ ಇಟಲಿಗೆ ಭಾರಿ ಸಂಖ್ಯೆಯ ಜನರು ತೆರಳಿದ್ದು, ಈ ಬೆಳವಣಿಗೆಯಿಂದ ಇಲ್ಲಿಯೂ ವೈರಸ್‌ನ ಹಬ್ಬಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವ ಇಟಲಿಯ ಜನರ ನಡೆಯಿಂದಾಗಿ ಸಮಸ್ಯೆ ಭೀಕರ ಸ್ವರೂಪ ತಾಳಿತು ಎಂಬುದು ಸಂಶೋಧಕರ ಅಭಿಪ್ರಾಯ.
ಯಶಸ್ವಿಯಾದ ವೆನಟೋ ವ್ಯಾಪಕ ಪರೀಕ್ಷೆ
ಗುಣಲಕ್ಷಣ ಕಾಣಿಸಿಕೊಂಡವರು ಮತ್ತು ಗುಣಲಕ್ಷಣ ಕಾಣಿಸಿಕೊಳ್ಳದವರಲ್ಲಿ ವ್ಯಾಪಕ ಪ್ರಮಾಣದಲ್ಲಿ ಪರೀಕ್ಷೆ ನಡೆಸಲಾಯಿತು.
ಸ್ವಯಂ ಟ್ರೇಸಿಂಗ್
ಯಾರಾದರೂ ಒಬ್ಬರಿಗೆ ರೋಗ ಕಾಣಿಸಿಕೊಂಡಲ್ಲಿ, ಅವರೊಂದಿಗೆ ವಾಸಿಸುತ್ತಿರುವ ಎಲ್ಲರೂ, ಅವರು ಪಾಸಿಟಿವ್ ಆಗಿರಲಿ ಅಥವಾ ನೆಗೆಟಿವ್ ಆಗಿರಲಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕು.
ಮನೆಯಲ್ಲೇ ಟೆಸ್ಟಿಂಗ್
ಕೋವಿಡ್-19 ಶಂಕಿತರ ಮನೆಗೆ ಆರೋಗ್ಯ ಕಾರ್ಯಕರ್ತರು ತೆರಳಿ ಅವರ ಸ್ಯಾಂಪಲ್‌ಗಳನ್ನು ಸಂಗ್ರಹಿಸುತ್ತಾರೆ. ಇದರಿಂದ ಅವರು ಆಸ್ಪತ್ರೆಗೆ ಪ್ರಯಾಣಿಸುವಾಗ ಇತರರಿಗೆ ಹರಡಿಸುವ ಅಪಾಯ ಇರುವುದಿಲ್ಲ. ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯರು, ನರ್ಸ್‌ಗಳು, ನರ್ಸಿಂಗ್ ಹೋಮ್‌ಗಳಲ್ಲಿನ ದಾದಿಯರು, ದಿನಸಿ ಅಂಗಡಿ ಸಿಬಂದಿ ಮತ್ತು ಔಷಧ ಅಂಗಡಿಯಲ್ಲಿ ಕೆಲಸ ಮಾಡು ವವರ ಮೇಲೂ ಬಗ್ಗೆ ನಿಗಾ ಇಡಲಾಯಿತು. ಅವರಿಗೆ ರೋಗ ಹರಡುವುದನ್ನು ತಡೆಯಲು ರಕ್ಷಣಾ ಸಲಕರಣೆ ಗಳನ್ನು ಒದಗಿಸಲಾಯಿತು.
ಲಾಂಬಾರ್ಡಿಯ ವೈಫಲ್ಯಕ್ಕೆ ಕಾರಣಗಳು
ಇದೇ ಮಾದರಿಯನ್ನು ಲಾಂಬಾರ್ಡಿಯಲ್ಲಿ ಜಾರಿ ಮಾಡಲಾಯಿತು. ಆದರೆ ಈ ಎಲ್ಲ ಕ್ರಮಗಳನ್ನು ಪರಿಣಾಮಕಾರಿಯಾಗಿ ಮತ್ತು ಸಕ್ರಿಯವಾಗಿ ಅನುಷ್ಠಾನಗೊಳ್ಳಲಿಲ್ಲ. ಪರೀಕ್ಷೆ, ಸ್ವಯಂ ಟ್ರೇಸಿಂಗ್, ಮನೆಯಲ್ಲೇ ಆರೈಕೆ ಮತ್ತು ಕಾರ್ಯ ಕರ್ತರ ಮೇಲೆ ಸರಿಯಾಗಿ ನಿಗಾ ವಹಿಸಲಿಲ್ಲ. ಪರಿಣಾಮ ಇಲ್ಲಿನ ಆಸ್ಪತ್ರೆಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರೆ, ವೆನೆಟೋ ನಗರ ಚೇತರಿಸಿಕೊಳ್ಳುತ್ತಿದೆ.
ಲಾಂಬಾರ್ಡಿ ಮತ್ತು ವೆನಟೋ ಅಕ್ಕಪಕ್ಕದ ನಗರಗಳಾ ದರೂ 2 ನಗರಗಳ ಕೊರೊನಾ ಚಿತ್ರಣ ವಿಭಿನ್ನ. ಲಾಂಬಾ ರ್ಡಿ ಯಲ್ಲಿ 10 ಮಿಲಿಯನ್ ಜನರಿದ್ದು, ಇಲ್ಲಿ 35 ಸಾವಿರ ಕೋವಿಡ್ 19 ಪ್ರಕರಣಗಳು ಕಂಡು ಬಂದಿವೆ. 5 ಸಾವಿರ ಜನರು ಸಾವನ್ನಪ್ಪಿದ್ದಾರೆ. ವೆನೆಟೋದಲ್ಲಿ 5 ಮಿಲಿ ಯನ್ ಜನರಿದ್ದಾರೆ. ಆದರೆ, ಇಲ್ಲಿ ಕೇವಲ 7 ಸಾವಿರ ಪ್ರಕರಣ ಗ ಳು ಕಂಡು ಬಂದಿವೆ. 300ಕ್ಕೂ ಕಡಿಮೆ ಜನರು ಸಾವನ್ನಪ್ಪಿದ್ದಾರೆ.
ಪರಿಣಾಮಕಾರಿ ಅನುಷ್ಠಾನ
2 ವಿಭಿನ್ನ ಪ್ರದೇಶಗಳಲ್ಲಿ ಒಂದೇ ಮಾದರಿ ಸೂಚನೆಗಳನ್ನು ನೀಡಿದರೂ ಪರಿಣಾಮಕಾರಿ ಅನುಷ್ಠಾನದಿಂದ ವಿಭಿನ್ನ ಫಲಿ ತಾಂಶ ಬಂದಿದೆ. ಒಂದು ಲೆಕ್ಕದಲ್ಲಿ ಇದು ಒಳ್ಳೆಯ ಪಾಠವಾಗಿದ್ದು, ಕಠಿಣತೆ ಮುಂದಿನ ಒಳಿತಿಗೆ ಭದ್ರ ಬುನಾದಿ ಆಗುತ್ತದೆ ಎಂಬುದನ್ನು ಮನದಟ್ಟು ಮಾಡಿಸುವಂತಿದೆ.
ಎಚ್ಚರಿಕೆಯಿಂದ ಹೆಜ್ಜೆ ಇಡಲಿಲ್ಲ
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತದೆ. ಇದರ ಸಂಪರ್ಕಕ್ಕೆ ಬಂದ ವರಿಗೆ ತತ್‌ಕ್ಷಣ ಅದರ ಗುಣ ಲಕ್ಷಣ ಗೋಚರಿಸದು. ಒಂದು ವಾರ ಅಥವಾ ಎರಡು ವಾರಗಳ ನಂತರ ಸೋಂಕಿನ ಗುಣ ಲಕ್ಷಣಗಳು ಸ್ಪಷ್ಟವಾಗಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದೆಲ್ಲ ತಿಳಿದಿದ್ದರೂ ಇಟಲಿಯ ರಾಜಕೀಯ ನಾಯಕರು ಲಘುವಾಗಿ ಪರಿಗಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.