ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Team Udayavani, Apr 25, 2024, 2:08 AM IST
ಪುತ್ತೂರು: ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಧಾರಣೆ ಏರುಮುಖದತ್ತ ಸಾಗಿತ್ತು. ಇದೀಗ ಚುನಾವಣೆ ಮುಕ್ತಾಯದ ಬಳಿಕವೂ ಧಾರಣೆ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಯನ್ನು ಮಾರುಕಟ್ಟೆ ಮೂಲಗಳು ವ್ಯಕ್ತಪಡಿಸಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಚುನಾವಣೆ ದಿನಾಂಕ ಘೋಷಣೆಯ ಮೊದಲು ಅಂದರೆ ಫೆಬ್ರವರಿಯಲ್ಲಿ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 325ರಿಂದ 340 ರೂ., ಹಳೆ ಅಡಿಕೆ (ಸಿ) 400ರಿಂದ 410 ರೂ., ಹಳೆ ಅಡಿಕೆ (ಡ) 425ರಿಂದ 435 ರೂ. ಇತ್ತು. ಚುನಾವಣ ನೀತಿಸಂಹಿತೆ ಘೋಷಣೆಯ ಬಳಿಕ ಧಾರಣೆ ಏರುಮುಖದತ್ತ ಸಾಗಿತ್ತು.
ಎಪ್ರಿಲ್ ಎರಡನೇ ವಾರದಲ್ಲಿ ಹೊಸ ಅಡಿಕೆ ಕೆ.ಜಿ.ಗೆ 350-365 ರೂ., ಸಿಂಗಲ್ ಚೋಲ್ 420-435 ರೂ., ಡಬ್ಬಲ್ ಚೋಲ್ 435-450 ರೂ. ತನಕ ದಾಖಲಾಗಿದೆ. ಅಂದರೆ ಹೊಸ ಅಡಿಕೆ ಕೆ.ಜಿ.ಗೆ 25 ರೂ., ಸಿಂಗಲ್ ಚೋಲ್ 25 ರೂ., ಡಬ್ಬಲ್ ಚೋಲ್ 15 ರೂ. ನಷ್ಟು ಹೆಚ್ಚಳ ಕಂಡಿದೆ.
ಮತ್ತಷ್ಟು ಏರಿಕೆ ಸಾಧ್ಯತೆ
ಶಿವಮೊಗ್ಗ, ಚನ್ನಗಿರಿ, ಚಿತ್ರದುರ್ಗ, ತೀರ್ಥಹಳ್ಳಿ ಮೊದಲಾದೆಡೆ ಬೇರೆ ಬೇರೆ ವಿಧದ ಅಡಿಕೆ ಧಾರಣೆ ಏರಿಕೆ ಕಂಡಿದೆ. ಕೆಂಪಡಿಕೆ ಧಾರಣೆ ಏರುಮುಖದತ್ತ ಸಾಗಿದೆ. ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ 15 ದಿನಗಳಿಂದ ಸ್ಥಿರವಾಗಿದೆ. ಚುನಾವಣೆ ಮುಗಿದ ಬಳಿಕ ನಗದು ವ್ಯವಹಾರ ಹೆಚ್ಚಾಗುವ ಕಾರಣ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಳವಾಗಲಿದೆ. ಜತೆಗೆ ಅಡಿಕೆಗೂ ಬೇಡಿಕೆ ಇರುವುದರಿಂದ ಸಹಜವಾಗಿ ಧಾರಣೆ ಏರಿಕೆ ಕಾಣಲಿದೆ ಎನ್ನುವುದು ಮಾರುಕಟ್ಟೆಯ ಲೆಕ್ಕಚಾರ.
ಮಂಗಳೂರು ಚಾಲಿ ಅಡಿಕೆ ಧಾರಣೆ ಇಳಿಕೆ ಕಂಡಿಲ್ಲ. ಚುನಾವಣೆ ಬಳಿಕ ಏರುವ ಸಾಧ್ಯತೆ ಇದೆ. ಕೆಂಪಡಿಕೆ ಧಾರಣೆ ಏರುಮುಖದತ್ತ ಸಾಗಿದೆ.
– ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷ, ಕ್ಯಾಂಪ್ಕೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.