Indipendence: 3 ಕ್ರಿಮಿನಲ್ ಕಾಯ್ದೆ ಜಾರಿ ಸ್ವಾತಂತ್ರ್ಯ ವೀರರಿಗೆ ಸಂದ ಗೌರವ: ರಾಷ್ಟ್ರಪತಿ
78ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ದ್ರೌಪದಿ ಮುರ್ಮು ಭಾಷಣ
Team Udayavani, Aug 14, 2024, 11:42 PM IST
ಹೊಸದಿಲ್ಲಿ: 3 ನೂತನ ಕ್ರಿಮಿನಲ್ ಕಾನೂನುಗಳನ್ನು ದೇಶಾದ್ಯಂತ ಜಾರಿಗೊಳಿಸುವ ಮೂಲಕ ವಸಹಾತು ಶಾಹಿ ಯುಗದ ಮತ್ತೂಂದು ಅವಶೇಷವನ್ನು ಭಾರತ ತೆಗದುಹಾಕಿದೆ. ಈ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಿಸಲಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
78ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಬುಧವಾರ ದೇಶವನ್ನುದ್ದೇಶಿಸಿ ಅವರು ಭಾಷಣ ಮಾಡಿದರು. ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರನ್ನೂ ಸ್ಮರಿಸಿದರು. ಇದೇ ವೇಳೆ ದೇಶದ ಹಲವು ಸಾಧನೆಗಳನ್ನು ಕೊಂಡಾಡಿ, 2021 ರಿಂದ 2024ರ ಅವಧಿಯಲ್ಲಿ ಸರಾಸರಿ ಶೇ.8ರ ವಾರ್ಷಿಕ ಬೆಳವಣಿಗೆಯೊಂದಿಗೆ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದು ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ವಿಶ್ವದ 5ನೇ ಅತೀದೊಡ್ಡ ಆರ್ಥಿಕತೆಯಾಗಿರುವ ಭಾರತ ಶೀಘ್ರದಲ್ಲೇ 3 ಅತೀದೊಡ್ಡ ಆರ್ಥಿಕತೆಗಳ ಪೈಕಿ ಒಂದಾಗಲಿದೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಭವನದ ಅಮೃತ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶ
ರಾಷ್ಟ್ರಪತಿ ಭವನದ ಅಮೃತ ಉದ್ಯಾನ ವನ್ನು ಸೆ.16ರ ವರೆಗೆ ಸಾರ್ವಜನಿಕರ ಭೇಟಿಗೆ ಮುಕ್ತ ಗೊಳಿಸಲಾಗಿದೆ. ಬುಧವಾರ ನಡೆದ ಕಾರ್ಯ ಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅದನ್ನು ಉದ್ಘಾಟಿಸಿದ್ದಾರೆ. ಆ.29ರಂದು ರಾಷ್ಟ್ರೀಯ ಕ್ರೀಡಾ ದಿನದ ಭಾಗವಾಗಿ ಕ್ರೀಡಾಪಟುಗಳಿಗೆ ಮತ್ತು ಸೆ.5ರಂದು ಶಿಕ್ಷಕರ ದಿನದ ಪ್ರಯುಕ್ತ ಶಿಕ್ಷಕರಿಗೆ ಪ್ರವೇಶ ಮೀಸಲಿಡಲಾಗಿದೆ. ಉದ್ಯಾನದ ಪ್ರವೇಶ ಉಚಿತವಾಗಿದ್ದು, ನೋಂದಣಿ ಅತ್ಯಗತ್ಯವಾಗಿದೆ. ಭೇಟಿ ನೀಡುವವರು ರಾಷ್ಟ್ರಪತಿ ಭವನದ ಜಾಲತಾಣ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.