Independence: ರಾಷ್ಟ್ರವನ್ನು ಅರಾಜಕತೆಗೆ ಒಯ್ಯುವವರು ಇದ್ದಾರೆ ಎಚ್ಚರವಾಗಿರಿ: ಪ್ರಧಾನಿ
ಭಾರತದ ಪ್ರಗತಿಯು ಯಾರಿಗೂ ಅಪಾಯ ತಂದೊಡ್ಡಲ್ಲ
Team Udayavani, Aug 16, 2024, 12:33 AM IST
ಹೊಸದಿಲ್ಲಿ: ಭಾರತದ ಏಳಿಗೆಯನ್ನು ಸಹಿಸಲಾಗದ ಕೆಲವು ಜನರಿದ್ದು, ಅವರ ಮನಸ್ಸು ನಕಾರಾತ್ಮಕ ಯೋಚನೆಗಳಿಂದಲೇ ತುಂಬಿರುತ್ತದೆ. ಅಂತಹ ಜನ ರಿಂದ ದೇಶದ ಜನತೆ ಜಾಗೃತರಾಗಿರಬೇಕು ಎಂದು ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ಪರೋಕ್ಷ ದಾಳಿ ನಡೆಸಿದ್ದಾರೆ.
ಕೆಲವರು ನಕಾರಾತ್ಮಕ ಯೋಚನೆಗಳನ್ನೇ ಹೊಂದಿದ್ದು ಅವರು ದೇಶದ ಏಳಿಗೆ ಸಹಿಸುತ್ತಿಲ್ಲ. ಭಾರತವನ್ನು ಅರಾಜಕತೆ ಹಾಗೂ ವಿನಾಶದೆಡೆಗೆ ಕರೆದೊಯ್ಯಲು ಪ್ರಯತ್ನಿಸುತ್ತಿರುವವರಿಗೆ ದೇಶವನ್ನು ರಕ್ಷಿಸಬೇಕು ಎಂದಿದ್ದಾರೆ. ನಾವು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ. ಆದರೆ ಕೆಲವರು ಯಾವುದೇ ಲಾಭವಿಲ್ಲದಿದ್ದರೆ ದೇಶದ ಪ್ರಗತಿ ಬಗ್ಗೆ, ಒಳಿತಿನ ಬಗ್ಗೆ ಚಿಂತಿಸುವುದಿಲ್ಲ. ಇಂತಹ ನಿರಾಶಾವಾದಿಗಳಿಂದ ನಾವು ಜಾಗೃತ ರಾಗಿರಬೇಕು.
ದೇಶದಲ್ಲಿ ಆಂತರಿಕವಾಗಿ ಹಾಗೂ ಬಾಹ್ಯವಾಗಿ ಈಗಾಗಲೇ ಸಾಕಷ್ಟು ಸಮಸ್ಯೆಗಳಿದ್ದು, ಇವರಿಂದ ಅದು ಹೆಚ್ಚುತ್ತಲೇ ಹೋಗುತ್ತದೆ. ಆ ರೀತಿಯ ಕೆಲವು ಶಕ್ತಿಗಳಿಗೆ ನಾನು ಹೇಳುವುದಿಷ್ಟೇ, ಭಾರತದ ಪ್ರಗತಿಯು ಯಾರಿಗೂ ಅಪಾಯ ತಂದೊಡ್ಡಲ್ಲ. ವಿಶ್ವವು ಭಾರತದ ಪ್ರಗತಿಯನ್ನು ನೊಡಿ ಚಿಂತಿಸಬೇಕಿಲ್ಲ ಎಂದಿದ್ದಾರೆ.
ರಾಜಕೀಯ ಹಿನ್ನೆಲೆ ಇಲ್ಲದ 1 ಲಕ್ಷ ಯುವ ಜನ ಬರಲಿ: ಮೋದಿ
ಹೊಸದಿಲ್ಲಿ: ಉತ್ತಮ ಜನಪ್ರತಿನಿಧಿಗಳನ್ನು ರೂಪಿಸುವ ನಿಟ್ಟಿನಲ್ಲಿ ರಾಜಕೀಯ ಹಿನ್ನೆಲೆ ಇಲ್ಲದೇ ಇರುವ 1 ಲಕ್ಷ ಯುವಕರು ರಾಜಕೀಯ ಪ್ರವೇಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಜಾತಿ ಆಧಾರಿತ ಮತ್ತು ಕುಟುಂಬ ರಾಜಕಾರಣವನ್ನು ದೇಶದ ರಾಜಕೀಯ ವ್ಯವಸ್ಥೆಯಿಂದ ಕಿತ್ತು ಹಾಕಲು ಸಾಧ್ಯವಾಗಲಿದೆ ಎಂದರು.
ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ, ಲೋಕಸಭೆ ಸೇರಿ ಯಾವುದೇ ಹಂತದಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಪೋಷಕರು ಇರಬಾರದು. ದೇಶದ ರಾಜ ಕೀಯ ವ್ಯವಸ್ಥೆ ಸ್ವತ್ಛಗೊಳಿಸುವ ನಿಟ್ಟಿನಲ್ಲಿ ರಾಜಕೀಯ ಹಿನ್ನೆಲೆ ಇರದ 1 ಲಕ್ಷ ಮಂದಿ ಯುವಕರು ರಾಜ ಕೀಯ ಪ್ರವೇಶ ಮಾಡಿ, ಜನರ ಪ್ರತಿನಿಧಿಗಳಾಗಬೇಕು. ಈ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಹೊಸ ಚಿಂತನೆ ಮತ್ತು ದೃಷ್ಟಿಕೋನಗಳನ್ನು ಹೊಂದಿರುವವರು ಜನರ ಪ್ರತಿನಿಧಿಗಳಾಗಬೇಕು ಎಂದರು.
98 ನಿಮಿಷ ಪ್ರಧಾನಿ ದೀರ್ಘ ಭಾಷಣ: ತಮ್ಮದೇ ದಾಖಲೆ ಮುರಿದ ಮೋದಿ
ಇದು ದೇಶದ ಪ್ರಧಾನಿ ಮಾಡಿದ ಇದುವರೆಗಿನ ಸುದೀರ್ಘ ಭಾಷಣವೂ ಹೌದು
ಕೆಂಪುಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಗುರುವಾರ 98 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. ಬೆಳಗ್ಗೆ 7.33ರಿಂದ ಬೆಳಗ್ಗೆ 9.12ರ ವರೆಗೆ ಅವರು ಮಾತನಾಡಿದ್ದಾರೆ. ದೇಶದ ಸ್ವಾತಂತ್ರೊéàತ್ಸವದಲ್ಲಿ ದೇಶದ ಪ್ರಧಾನಿಯೊಬ್ಬರು ಮಾಡಿದ ದೀರ್ಘ ಭಾಷಣ ಎಂಬ ಖ್ಯಾತಿಗೂ ಅದು ಪಾತ್ರವಾಗಿದೆ. 2016ರಲ್ಲಿ ಮೋದಿ 96 ನಿಮಿಷಗಳ ಭಾಷಣ ಮಾಡಿದ್ದರು.
ಅದೇ ಅತೀ ದೀರ್ಘಾವಧಿಯ ಭಾಷಣವಾಗಿತ್ತು. ಇದೀಗ ಆ ದಾಖಲೆಯನ್ನೂ ಪ್ರಧಾನಿ ಮೀರಿಸಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದರು, ಈ ವೇಳೆ 65 ನಿಮಿಷ ಭಾಷಣ ಮಾಡಿದ್ದರು. 1947ರಲ್ಲಿ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ 72 ನಿಮಿಷ, 1997ರಲ್ಲಿ ಐ.ಕೆ. ಗುಜ್ರಾಲ್ 71 ನಿಮಿಷ, 1954ರಲ್ಲಿ ನೆಹರೂ ಮತ್ತು 1966ರಲ್ಲಿ ಇಂದಿರಾ ಗಾಂಧಿಯವರು ತಲಾ 14 ನಿಮಿಷ ಮಾತನಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.