ಜಲಾವೃತಗೊಂಡ ಗ್ರಾಮದಲ್ಲಿ ಸ್ವಾತಂತ್ರ್ಯ ಸಂಭ್ರಮ
ತೆಪ್ಪದಲ್ಲಿ ಹೋಗಿ ಸ್ವಾತಂತ್ರ್ಯ ದಿನಾಚರಣೆ
Team Udayavani, Aug 15, 2019, 8:40 PM IST
ಬಾಗಲಕೋಟೆ : ಎದೆಮಟ ನೀರು, ಧ್ವಜ ಕಟ್ಟೆಗೆ ಹೋಗಲೂ ಆಗದ ಪರಿಸ್ಥಿತಿಯಲ್ಲೂ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಜನರು ತೆಪ್ಪದ ಮೂಲಕ ಜಲಾವೃತಗೊಂಡ ಗ್ರಾಮಕ್ಕೆ ಹೋಗಿ ಧ್ವಜಾರೋಹಣ ನೆರವೇರಿಸಿ, ಸಾತಂತ್ರ್ಯ ದಿನ ಆಚರಿಸಿದರು.
ಗ್ರಾಮದ ಶೇಖರ ಪಾಟೀಲ ಮತ್ತು ಎನ್.ಎಂ. ಪಾಟೀಲ ನೇತೃತ್ವದಲ್ಲಿ ಸುಮಾರು 10ಕ್ಕೂ ಹೆಚ್ಚು ಜನರು ತಾವಿದ್ದ ಪರಿಹಾರ ಕೇಂದ್ರದಿಂದ ಜಲಾವೃತಗೊಂಡಿದ್ದ ತಮ್ಮೂರು ಶೂರ್ಪಾಲಿಗೆ ಎರಡು ತೆಪ್ಪದ ಮೂಲಕ ತೆರಳಿದ್ದಾರೆ. ಬಳಿಕ ಕಂಬಕ್ಕೆ ಧ್ವಜ ಕಟ್ಟಿ, ನಂತರ ಧ್ವಜಾರೋಹಣ ನೆರವೇರಿಸಿದರು. ಎಲ್ಲರೂ ಎರಡು ತೆಪ್ಪದಲ್ಲಿ ನಿಂತುಕೊಂಡು, ಧ್ವಜಾರೋಹಣ ವೇಳೆ ರಾಷ್ಟ್ರಗೀತೆ ಹಾಡಿದರು.
ಇಡೀ ಗ್ರಾಮ ಜಲಾವೃತಗೊಂಡು ಮನೆ ನೀರಿನಲ್ಲಿ ಮುಳುಗಿ ಪರಿಹಾರ ಕೇಂದ್ರದಲ್ಲಿ ಸಂಕಷ್ಟದಲ್ಲಿರುವ ಇವರೆಲ್ಲ ದೇಶಪ್ರೇಮ ಮೆರೆದು ಎದೆಮಟ್ಟ ನೀರಲ್ಲೂ ತೆರಳಿ ಸ್ವಾತಂತ್ಯ ದಿನ ಆಚರಿಸಿದ್ದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ನಿರಾಶ್ರಿತ ಮಹಿಳೆಯಿಂದ ಧ್ವಜಾರೋಹಣ :
ಜಿಲ್ಲೆಯ ಹಿರಪ್ಪಗಿ ಗ್ರಾಮದ ಆಯುಷ್ ಆಸ್ಪತ್ರೆ ಆವರಣದಲ್ಲಿ ಸ್ವಾತಂತ್ರ್ಯ ದಿನ ವಿಶೇಷವಾಗಿ ನಡೆಯಿತು. ಜಿಲ್ಲಾ ಆಯುಷ್ ಅಽಕಾರಿ ಡಾ.ಆರ್.ಜಿ. ಮೇತ್ರಿ, ವೈದ್ಯಾಽಕಾರಿ ಡಾ.ಚಂದ್ರಕಲಾ ರಜಪೂತ ಅವರ ನೇತೃತ್ವದಲ್ಲಿ ಪರಿಹಾರ ಕೇಂದ್ರದಲ್ಲಿದ್ದ ಸತ್ಯವ್ವ ಈರಪ್ಪ ಸಿಂಧೂರ ಎಂಬ ಮಹಿಳೆಯಿಂದ ಧ್ವಜಾರೋಹಣ ನೆರವೇರಿಸಲಾಯಿತು. 15 ದಿನಗಳಿಂದ ಮನೆ ನೀರಿನಲ್ಲಿ ಮುಳುಗಿ, ಪರಿಹಾರ ಕೇಂದ್ರದಲ್ಲಿದ್ದ ಈ ಮಹಿಳೆ ಸತ್ಯವ್ವ, ತನ್ನ ಜೀವಮಾನದಲ್ಲಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿ, ಭಾವುಕಾರದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.