Indipendence Day: 78ರ ಸ್ವಾತಂತ್ರ್ಯ ದಿನಕ್ಕೆ ವಿಕಸಿತ ಭಾರತ ಮುನ್ನುಡಿ
ಮೋದಿಯಿಂದ ಸತತ 11ನೇ ಬಾರಿ ಧ್ವಜಾರೋಹಣ ದಿಲ್ಲಿಯ ಸ್ವಾತಂತ್ರೋತ್ಸವದಲ್ಲಿ 1000 ಮಂದಿ ರೈತರು ಭಾಗಿ, ಹರ್ ಘರ್ ತಿರಂಗಾ ಅಭಿಯಾನ
Team Udayavani, Aug 15, 2024, 6:25 AM IST
ಹೊಸದಿಲ್ಲಿ: 78ನೇ ಸ್ವಾತಂತ್ರೋತ್ಸವಕ್ಕೆ ಇಡೀ ದೇಶ ಸಂಭ್ರಮದಿಂದ ಸಿದ್ಧಗೊಳ್ಳುತ್ತಿದೆ. ದೇಶದ ಪ್ರಮುಖ ಕಾರ್ಯಕ್ರಮ ನಡೆಯುವ ದಿಲ್ಲಿಯ ಕೆಂಪು ಕೋಟೆಯನ್ನು ತ್ರಿವರ್ಣ ಧ್ವಜದ ಬಣ್ಣದಿಂದ ಅಲಂಕರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸತತ 11ನೇ ಬಾರಿ ಧ್ವಜಾರೋಹಣ ಮಾಡಲಿದ್ದಾರೆ. ಈ ಮೂಲಕ ಅತೀಹೆಚ್ಚು ಬಾರಿ ಧ್ವಜಾರೋಹಣ ಮಾಡಿದ ಪ್ರಧಾನಿಗಳ ಸಾಲಿನಲ್ಲಿ 3ನೇ ಸ್ಥಾನ ಪಡೆದುಕೊಳ್ಳಲಿದ್ದಾರೆ.
“ವಿಕಸಿತ ಭಾರತ’ ಥೀಮ್‌ನಡಿಯಲ್ಲಿ ಈ ಬಾರಿಯ ಸ್ವಾತಂತ್ರೊéàತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. 1947ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು ಎಂದು ಕೇಂದ್ರ ಸರಕಾರ ಗುರಿ ನಿಗದಿಪಡಿಸಿದ್ದು, ಈ ಹಿನ್ನೆಲೆಯಲ್ಲಿ ಇದೇ ಥೀಮ್‌ನಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸ್ವಾತಂತ್ರೋತ್ಸವದ ಅರಿವು ಮೂಡಿಸಲು ಜಾರಿ ಮಾಡಲಾಗಿರುವ ಹರ್‌ಘರ್ ತಿರಂಗಾ ಅಭಿಯಾನ ದಡಿಯಲ್ಲೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಲ್ಲಿನ ಶಾಸಕಾಂಗದ ಮುಖ್ಯಸ್ಥರು ಧ್ವಜಾರೋಹಣ ನಡೆಸಲಿದ್ದಾರೆ.
6,000 ಮಂದಿ ವಿಶೇಷ ಆಹ್ವಾನಿತರು
ಸಮಾಜದ 4 ಸ್ಥಂಭಗಳು ಎಂದು ಪ್ರಧಾನಿ ಮೋದಿ ಉಲ್ಲೇಖೀಸುವ ರೈತರು, ಯುವಕರು, ಮಹಿಳೆಯರು ಮತ್ತು ಬಡವರು ಸೇರಿದಂತೆ ಈ ಬಾರಿ ದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ 6000 ಮಂದಿಯನ್ನು ಆಹ್ವಾನಿಸಲಾಗಿದೆ. ಇವರೆಲ್ಲರೂ ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇಂದು ಬೆಳಗ್ಗೆ 7.30ಕ್ಕೆ ಪ್ರಧಾನಿ ಭಾಷಣ
ಕೆಂಪುಕೋಟೆಗೆ ಆಗಮಿಸುವ ಪ್ರಧಾನಿ ಮೋದಿಯನ್ನು ರಕ್ಷಣ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಲಿದ್ದಾರೆ. ಬಳಿಕ ರಕ್ಷಣ ಕಾರ್ಯದರ್ಶಿ ಪ್ರಧಾನಿಗೆ ಕಮಾಂಡಿಂಗ್ ಆಫೀಸರ್ ಮತ್ತು ದಿಲ್ಲಿ ಲೆಫ್ಟಿನೆಂಟ್ ಗವರ್ನ ರ್‌ರನ್ನು ಪರಿಚಯಿಸಲಿದ್ದಾರೆ. ಇದಾದ ಬಳಿಕ ಪ್ರಧಾನಿ ಗೌರವವಂದನೆ ಸ್ವೀಕರಿಸಲಿದ್ದಾರೆ.
ಈ ಬಾರಿ ಗೌರವ ವಂದನೆ ಕಾರ್ಯಕ್ರಮವನ್ನು ಭಾರತೀಯ ನೌಕಾಪಡೆ ನಡೆಸಿಕೊಡಲಿದೆ. ಗೌರವ ವಂದನೆಯ ಬಳಿಕ ಮೋದಿ ಕೆಂಪು ಕೋಟೆಯ ವೇದಿಕೆಯನ್ನು ಏರಿ ಧ್ವಜಾರೋಹಣ ನಡೆಸಲಿದ್ದಾರೆ. ಬಳಿಕ 21 ಸುತ್ತಿನ ಗನ್ ಸಲ್ಯೂಟ್ ಸಲ್ಲಿಸಲಾಗುತ್ತದೆ. ಧ್ವಜಾರೋಹಣವಾಗುತ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ಹೂವಿನ ಪಕಳೆಗಳನ್ನು ಚೆಲ್ಲಲಾಗುತ್ತದೆ. ಬೆಳಗ್ಗೆ 7.30ಕ್ಕೆ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕಾಶ್ಮೀರದಲ್ಲಿ 2.5 ಕಿ.ಮೀ., ಚೆನಾಬ್ ರೈಲ್ವೇ ಬ್ರಿಡ್ಜ್ ಮೇಲೆ 750 ಮೀ. ಧ್ವಜ ಮೆರವಣಿಗೆ
ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಅತೀದೊಡ್ಡ ಧ್ವಜ ಮೆರವಣಿಗೆಯನ್ನು ನಡೆಸಲಾಗುತ್ತಿದೆ. ಬರೋಬ್ಬರಿ 2.5 ಕಿ.ಮೀ. ಉದ್ದದ ರಾಷ್ಟ್ರಧ್ವಜವನ್ನು ಮೆರವಣಿಗೆ ಮಾಡಲಾಗುತ್ತಿದೆ. ಇದು ಕೇಂದ್ರ ಸರಕಾರದ ಹರ್‌ಘರ್ ತಿರಂಗಾ ಅಭಿಯಾನದ ಭಾಗವಾಗಿದ್ದು, ಬಾರಾಮುಲ್ಲಾದಲ್ಲಿ ನಡೆಯಲಿದೆ. ಇದಲ್ಲದೇ 750 ಮೀ. ಉದ್ದದ ರಾಷ್ಟ್ರಧ್ವಜವನ್ನು ಚೆನಾಬ್ ನದಿ ಸೇತುವೆಯ ಮೇಲೆ ಮೆರವಣಿಗೆ ಮಾಡಲಾಗುತ್ತದೆ.
ಸಮುದ್ರದಾಳದಲ್ಲಿ ರಾಷ್ಟ್ರಧ್ವಜ
ಸ್ವಾತಂತ್ರೊéàತ್ಸವದ ಹಿಂದಿನ ದಿನ ಭಾರತೀಯ ಕರಾವಳಿ ಕಾವಲು ಪಡೆ ಸಮುದ್ರದಾಳದಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶನ ಮಾಡಿದೆ. ಜತೆಗೆ ಲಡಾಕ್‌ನ ಲೇಹ್‌ನಲ್ಲಿ ಭಾರತೀಯ ಸೇನೆ ಧ್ವಜಾರೋಹಣ ನಡೆಸಿದೆ.
ಆ.25ಕ್ಕೆ 11 ಲಕ್ಷ ಲಖ್‌ಪತಿ ದೀದಿಯರಿಗೆ ಪ್ರಮಾಣ ಪತ್ರ
ಹೊಸದಿಲ್ಲಿ: “ಲಖ್‌ಪತಿ ದೀದಿ’ ಯೋಜನೆಯ 11 ಲಕ್ಷ ಫಲಾನುಭವಿಗಳಿಗೆ ಆ.25ರಂದು ಪ್ರಧಾನಿ ನರೇಂದ್ರ ಮೋದಿ ಪ್ರಮಾಣಪತ್ರ ವಿತರಿಸಲಿದ್ದಾರೆ ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ 11 ಲಕ್ಷ ಮಹಿಳೆಯರಿಗೆ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಈ ಯೋಜನೆಯ ಫಲಾನುಭವಿಗಳು ಸ್ವಾತಂತ್ರೊéàತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.