Test match: ಭಾರತ “ಎ’ ಮತ್ತೆ ಬ್ಯಾಟಿಂಗ್ ವೈಫಲ್ಯ
Team Udayavani, Nov 7, 2024, 11:56 PM IST
ಮೆಲ್ಬರ್ನ್: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಭಾರತ “ಎ’ ತಂಡ ಶೋಚನೀಯ ಬ್ಯಾಟಿಂಗ್ ವೈಫಲ್ಯ ಕಂಡಿದೆ. ಆಸ್ಟ್ರೇಲಿಯ “ಎ’ ವಿರುದ್ಧ ಗುರುವಾರ ಮೊದಲ್ಗೊಂಡ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ 161ಕ್ಕೆ ಆಲೌಟ್ ಆಗಿದೆ. ಜವಾಬು ನೀಡಲಾರಂಭಿಸಿದ ಆತಿಥೇಯ ತಂಡ 2 ವಿಕೆಟಿಗೆ 53 ರನ್ ಮಾಡಿದೆ.
ಭಾರತದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ್ದು ಧ್ರುವ ಜುರೆಲ್ ಮಾತ್ರ. ಏಕಾಂಗಿಯಾಗಿ ಹೋರಾಡಿದ ಅವರು 80 ರನ್ ಹೊಡೆದರು (186 ಎಸೆತ, 6 ಬೌಂಡರಿ, 2 ಸಿಕ್ಸರ್). ಆದರೆ ಕೆ.ಎಲ್. ರಾಹುಲ್ ಮಿಂಚಲು ವಿಫಲರಾ ದರು. ಇನ್ನಿಂಗ್ಸ್ ಆರಂಭಿಸಿದ ಅವರು ಕೇವಲ 4 ರನ್ ಮಾಡಿ ಔಟಾದರು. ಅಭಿಮನ್ಯು ಈಶ್ವರನ್ ಮತ್ತು ಸಾಯಿ ಸುದರ್ಶನ್ ಖಾತೆಯನ್ನೇ ತೆರೆಯಲಿಲ್ಲ. ನಾಯಕ ಋತು ರಾಜ್ ಗಾಯಕ್ವಾಡ್ ಗಳಿಕೆ ಕೇವಲ 4 ರನ್. ಹೀಗೆ 3 ಓವರ್ ಆಗುವಷ್ಟರಲ್ಲಿ 11 ರನ್ನಿಗೆ ಭಾರತದ 4 ವಿಕೆಟ್ ಉರುಳಿತು.
ದೇವದತ್ತ ಪಡಿಕ್ಕಲ್ (26) ಮತ್ತು ಧ್ರುವ ಜುರೆಲ್ (80) ಸೇರಿಕೊಂಡು ಕುಸಿತಕ್ಕೆ ಸ್ವಲ್ಪ ಮಟ್ಟಿಗೆ ತಡೆಯೊಡ್ಡಿದರು. ಮೈಕಲ್ ನೆಸರ್ (27ಕ್ಕೆ 4) ಮತ್ತು ಬ್ಯೂ ವೆಬ್‌ಸ್ಟರ್ (19ಕ್ಕೆ 3) ಆಸ್ಟ್ರೇಲಿಯದ ಯಶಸ್ವಿ ಬೌಲರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.