ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ ನಿರ್ಧಾರ ಸಭೆಗೆ ಭಾರತ ಗೈರು
ಉಕ್ರೇನ್ ಬಿಕ್ಕಟ್ಟು ಪರಿಹಾರಕ್ಕೆ ಮಾತುಕತೆ ಮಾತ್ರ ಪರಿಹಾರ: ಭಾರತ
Team Udayavani, Mar 1, 2022, 7:50 AM IST
ವಿಶ್ವಸಂಸ್ಥೆ/ಕೀವ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಿಂದ ಭಾರತದ ಸತತ ಎರಡನೇ ಬಾರಿಗೆ ಗೈರು ಹಾಜರಾಗಿದೆ. ಉಕ್ರೇನ್ ವಿರುದ್ಧದ ಯುದ್ಧ ಪ್ರಕರಣ ಬಗೆಹರಿಸಲು ಕೇವಲ ರಾಜತಾಂತ್ರಿಕ ಮತ್ತು ಮಾತುಕತೆಯ ದಾರಿಯೇ ಸೂಕ್ತ ಎಂದು ಭಾರತ ಮತ್ತೊಮ್ಮೆ ಪ್ರತಿಪಾದಿಸಿದೆ. ಉಕ್ರೇನ್ ವಿರುದ್ಧ ಯುದ್ಧ ಮತ್ತು ಅಣ್ವಸ್ತ್ರ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುವ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶ ನೀಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪುಟಿನ್ ಆದೇಶದ ಹಿನ್ನೆಲೆಯಲ್ಲಿ ತಕ್ಷಣವೇ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಕರೆಯಬೇಕೇ ಎಂಬ ಬಗ್ಗೆ ಚರ್ಚೆ ನಡೆಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ನಡೆದಿತ್ತು. ಭಾರತ, ಚೀನಾ ಮತ್ತು ಯುಎಇ ಸಭೆಯಿಂದ ದೂರ ಉಳಿದವು. ರಷ್ಯಾ ಮಾತ್ರ ಸಾಮಾನ್ಯ ಅಧಿವೇಶನ ನಡೆಸಬೇಕು ಎಂಬ ನಿರ್ಣಯದ ವಿರುದ್ಧವಾಗಿ ಮತ ಹಾಕಿದೆ.
ಅಲ್ಬೇನಿಯಾ, ಬ್ರೆಜಿಲ್, ಫ್ರಾನ್ಸ್, ಗೆಬಾನ್, ಘಾನಾ, ಐರ್ಲೆಂಡ್, ಕೀನ್ಯಾ, ಮೆಕ್ಸಿಕೋ, ನಾರ್ವೇ, ಯು.ಕೆ., ಅಮೆರಿಕ ಸಾಮಾನ್ಯ ಸಭೆ ನಡೆಯಬೇಕು ಎಂದು ಮತ ಹಾಕಿವೆ.
ಶುಕ್ರವಾರ ಭದ್ರತಾ ಮಂಡಳಿ ಸಭೆಯಲ್ಲಿ ರಷ್ಯಾ ವಿರುದ್ಧದ ಖಂಡನಾ ನಿರ್ಣಯದಿಂದಲೂ ಭಾರತದ ನಿಯೋಗ ದೂರ ಉಳಿದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತದ ಶಾಶ್ವತ ರಾಯಭಾರಿ ಟಿ.ಎಸ್.ತಿರುಮೂರ್ತಿ ಉಕ್ರೇನ್‌ನಲ್ಲಿನ ಪರಿಸ್ಥಿತಿ ತೀರಾ ಕಳವಳಕಾರಿಯಾಗಿದೆ. ಅಲ್ಲಿ ಕೂಡಲೇ ದಾಳಿ ನಿಲ್ಲಬೇಕು ಮತ್ತು ಬಿಕ್ಕಟ್ಟು ಪರಿಹಾರಕ್ಕೆ ಮಾತುಕತೆಯೇ ಸೂಕ್ತ ಎಂದಿದ್ದಾರೆ.
ಇದನ್ನೂ ಓದಿ:ಕಾಫಿರ್ ರನ್ನು ಕೊಂದರೆ ಸ್ವರ್ಗ ಪ್ರಾಪ್ತಿ?: ಮುಸ್ಲಿಂ ವಿದ್ವಾಂಸರಿಗೆ ಸಿ.ಟಿ.ರವಿ ಪ್ರಶ್ನೆ
ದಶಕಗಳಲ್ಲೇ ಮೊದಲು:
193 ಮಂದಿ ಸದಸ್ಯರು ಇರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅತ್ಯಂತ ತುರ್ತು ಎಂಬ ಕಾರಣಕ್ಕಾಗಿ ದಶಕಗಳ ಬಳಿಕ ಇದೇ ಮೊದಲ ಬಾರಿಗೆ ನಡೆಯಲಿದೆ.
ನಿಮ್ಮವರ ಸುರಕ್ಷತೆಗಾಗಿ ನಮಗೆ ಬೆಂಬಲ ನೀಡಿ
“ನಮ್ಮ ದೇಶದಲ್ಲಿರುವ ನಿಮ್ಮವರ ಸುರಕ್ಷತೆಗಾಗಿ ನಮಗೆ ಬೆಂಬಲ ನೀಡಿ’. ಹೀಗೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಉಕ್ರೇನ್ ಪ್ರತಿನಿಧಿ ಸರ್ಗಿ ಕೆಸ್ಟೆಲಿಸ್ಟಾ ಹೇಳಿದ್ದಾರೆ.
ಭಾರತದ ಶಾಶ್ವತ ರಾಯಭಾರಿ ಟಿ.ಎಸ್.ತಿರುಮೂರ್ತಿ ನೇತೃತ್ವದ ನಿಯೋಗ ಸಭೆಯಿಂದ ಹೊರನಡೆದ ಬಳಿಕ ಮಾತನಾಡಿದ ಸರ್ಗಿ ಕೆಸ್ಟೆಲಿಸ್ಟಾ, “ಕೆಲವೇ ರಾಷ್ಟ್ರಗಳು ರಷ್ಯಾ ನಮ್ಮ ಮೇಲೆ ಸಾರಿರುವ ಯುದ್ಧಕ್ಕೆ ಬೆಂಬಲ ನೀಡುತ್ತಿವೆ. ಇದು ನಿಜಕ್ಕೂ ಬೇಸರದ ವಿಚಾರ. ಉಕ್ರೇನ್‌ನಲ್ಲಿ ಇರುವ ಭಾರತದ ವಿದ್ಯಾರ್ಥಿಗಳ ಸುರಕ್ಷತೆ ಗಮನದಲ್ಲಿ ಇರಿಸಿಕೊಂಡು ಬೆಂಬಲ ನೀಡಬೇಕು’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.