ಪಾಕ್ ಪಠ್ಯದಲ್ಲಿ ಭಾರತ, ಹಿಂದೂ ವಿರೋಧಿ ವಿಷ !
8, 9ನೇ ತರಗತಿ ಪಠ್ಯಗಳಲ್ಲಿ ಗಾಂಧೀಜಿ ಕೇವಲ ಹಿಂದೂ ಪರ ನಾಯಕನೆಂಬಂತೆ ವರ್ಣನೆ
Team Udayavani, Mar 10, 2023, 7:40 AM IST
ಇಸ್ಲಾಮಾಬಾದ್: ಭಯೋತ್ಪಾದನೆ, ಕುತಂತ್ರ, ಪಿತೂರಿಗಳಿಂದ ಸದಾ ಭಾರತದ ವಿರುದ್ಧ ವಿಷಕಾರುವ ನೆರೆಯ ಪಾಕಿಸ್ತಾನದ ಇನ್ನೊಂದು ಮುಖ ಬಯಲಾಗಿದೆ. ಅದು ತನ್ನ ಪಠ್ಯಪುಸ್ತಕಗಳಲ್ಲಿ ಮಹಾತ್ಮಾ ಗಾಂಧೀಜಿ ವಿರುದ್ಧವೂ ಸುಳ್ಳು ಮಾಹಿತಿಗಳನ್ನು ನೀಡಿದೆ. ಈ ಮೂಲಕ ಮಕ್ಕಳ ಮನಸ್ಸಿನಲ್ಲೂ ಭಾರತ ಹಾಗೂ ಹಿಂದೂಗಳ ವಿರುದ್ಧ ವಿಷಬೀಜ ಬಿತ್ತಲು ಮುಂದಾಗಿದೆ. ಈ ಮಾಹಿತಿ ನ್ಯೂಸ್ 18 ವರದಿಯೊಂದರಲ್ಲಿ ಪ್ರಕಟವಾಗಿದೆ.
ಅಲ್ಲಿನ ನ್ಯಾಷನಲ್ ಬುಕ್ ಫೆಡರೇಶನ್ ಪ್ರಕಟಿಸಿರುವ ಪಾಕ್‌ನ 8 ಮತ್ತು 9ನೇ ತರಗತಿ ಪಠ್ಯಪುಸ್ತಕಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧೀಜಿ ಕೇವಲ ಒಬ್ಬ ಹಿಂದೂ ಹಿತಾಸಕ್ತಿಯಿದ್ದ ನಾಯಕ ಮಾತ್ರ, ಅವರಿಗೆ ಮುಸ್ಲಿಮರ ಮೇಲೆ ಕಾಳಜಿಯಿರಲಿಲ್ಲ ಎಂದು ವರ್ಣಿಸಲಾಗಿದೆ. ಅಲ್ಲದೇ ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ಗಾಂಧಿ ಮತ್ತು ಅವರ ಬೆಂಬಲಿಗರು ಹಿಡಿದ ನಂತರ ಹಿಂದೂಪರ ನಿಲುವನ್ನೇ ಹೆಚ್ಚಾಗಿ ಹೊಂದಿದ್ದರು. ಮುಸ್ಲಿಮರ ಹಕ್ಕುಗಳ ಬಗ್ಗೆ ಗೌರವವಿರಲಿಲ್ಲ. ಇದರಿಂದ ದ್ವೇಷ, ಅಸೂಯೆ, ಸಣ್ಣತನಗಳು ಶುರುವಾದವು ಎಂದು ಪಠ್ಯದಲ್ಲಿದೆ.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯ ಬಗ್ಗೆ ಇರುವ 8ನೇ ತರಗತಿ ಪಠ್ಯದಲ್ಲಿ, ಹಲವರು ಭಾರತ ರಾಷ್ಟ್ರೀಯವಾದವನ್ನು ಬೆಂಬಲಿಸಲು ಕಾಂಗ್ರೆಸ್ ಸೇರಿದರು. ಅದು ಮುಖ್ಯವಾಗಿ ಹಿಂದೂ ಧರ್ಮವನ್ನೇ ಆದ್ಯತೆಯಾಗಿಟ್ಟುಕೊಂಡಿತ್ತು. ಆದ್ದರಿಂದ ಕಾಂಗ್ರೆಸ್ ಇಡೀ ಭಾರತದ ರಾಷ್ಟ್ರೀಯ ಧ್ವನಿಯಾಗುವುದರ ಬದಲು, ಬಹುತೇಕ ಹಿಂದೂ ಪರ ಪಕ್ಷವಾಗಿತ್ತು ಎಂದು ಹೇಳಲಾಗಿದೆ. ಒಟ್ಟಾರೆ ಹಲವು ಅಂತೆಕಂತೆಗಳನ್ನು ಪಠ್ಯದಲ್ಲಿ ತುಂಬಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.