India-Australia Test: ಬುಮ್ರಾ ಶ್ರೇಷ್ಠ ಪೇಸ್ ಬೌಲರ್: ಟ್ರ್ಯಾವಿಸ್ ಹೆಡ್ ಪ್ರಶಂಸೆ
ಅಡಿಲೇಡ್ ಓವಲ್‌ನಲ್ಲಿ ಅಭ್ಯಾಸ ಆರಂಭಿಸಿದ ಆಸ್ಟ್ರೇಲಿಯ ತಂಡ
Team Udayavani, Dec 3, 2024, 7:20 AM IST
ಅಡಿಲೇಡ್: ಪರ್ತ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಕಾಡಿದ ಜಸ್‌ಪ್ರೀತ್ ಬುಮ್ರಾ ಅವರನ್ನು ಟ್ರ್ಯಾವಿಸ್ ಹೆಡ್ ಭಾರೀ ಪ್ರಶಂಸಿಸಿದ್ದಾರೆ. ಇವರ ಕುರಿತು ತನ್ನ ಮೊಮ್ಮಕ್ಕಳಿಗೆ ಹೆಮ್ಮೆಯಿಂದ ಹೇಳಬೇಕು ಎಂದಿದ್ದಾರೆ.
“ಜಸ್‌ಪ್ರೀತ್ ಬುಮ್ರಾ ವಿಶ್ವದ ಗ್ರೇಟೆಸ್ಟ್ ಪೇಸ್ ಬೌಲರ್. ಇವರನ್ನು ಎದುರಿಸುವುದೇ ದೊಡ್ಡ ಸವಾಲು. ಆದರೆ ನಾನು ಇವರ ಎಸೆತಗಳನ್ನು ಎದುರಿಸಿ ಆಡಿರುವ ಸಂಗತಿಯನ್ನು ಮುಂದೊಂದು ದಿನ ನನ್ನ ಮೊಮ್ಮಕ್ಕಳಲ್ಲಿ ಹೇಳಬೇಕಿದೆ’ ಎಂಬುದಾಗಿ ಹೆಡ್ ಹೇಳಿದರು.
ಪರ್ತ್‌ನಲ್ಲಿ ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ಖ್ವಾಜಾ, ಸ್ಮಿತ್, ಲಬುಶೇನ್ ಮೊದಲಾದವರೆಲ್ಲ ಪರದಾಡುತ್ತಿದ್ದಾಗ ಹೆಡ್ ಅರ್ಧ ಶತಕ ಬಾರಿಸಿ ಮಿಂಚಿದ್ದರು (89). ಇದು ದ್ವಿತೀಯ ಇನ್ನಿಂಗ್ಸ್‌ನಲ್ಲಿ ದಾಖಲಾಗಿತ್ತು. ಜತೆಗೆ ಇದು ಪರ್ತ್‌ನಲ್ಲಿ ಆಸ್ಟ್ರೇಲಿಯ ಕಡೆಯಿಂದ ದಾಖಲಾದ ಏಕೈಕ ಅರ್ಧ ಶತಕವೂ ಆಗಿತ್ತು. ಈ ಕುರಿತು ಎದುರಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಡ್, “ನನಗೆ ಯಾರೂ ಬ್ಯಾಟಿಂಗ್ ಟಿಪ್ಸ್ ಹೇಳಿಕೊಡುವುದಿಲ್ಲ. ಎಲ್ಲರೂ ಅವರವರ ಶೈಲಿಯಲ್ಲಿ ಆಡುತ್ತಾರೆ. ನಮ್ಮ ಪಾಲಿಗೆ ಇದೊಂದು ಕೆಟ್ಟ ವಾರವಾಗಿತ್ತು. ಇನ್ನೂ 4 ಅವಕಾಶಗಳು ನಮ್ಮ ಮುಂದಿವೆ’ ಎಂದರು.
ತಂಡದಲ್ಲಿ ಒಡಕಿಲ್ಲ:
ಪರ್ತ್ ಟೆಸ್ಟ್ ಬಳಿಕ ಜೋಶ್ ಹೇಝಲ್‌ವುಡ್ ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿತ್ತು. ಆಸ್ಟ್ರೇಲಿಯ ತಂಡದ ಬ್ಯಾಟರ್ ಹಾಗೂ ಬೌಲರ್ ನಡುವೆ ಒಡಕು ಮೂಡಿದೆ ಎಂಬಂತೆ ಇದನ್ನು ಅರ್ಥೈಸಲಾಗಿತ್ತು. ಆದರೆ ಹೆಡ್ ಇದನ್ನು ತಳ್ಳಿಹಾಕಿದರು.
ಆಸೀಸ್ ಅಭ್ಯಾಸ ಆರಂಭ
ಅಡಿಲೇಡ್: “ಬೋರ್ಡರ್-ಗಾವಸ್ಕರ್’ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಆತಿಥೇಯ ಆಸ್ಟ್ರೇಲಿಯ ಆಟಗಾರರು ಸೋಮವಾರ “ಅಡಿಲೇಡ್ ಓವಲ್’ನಲ್ಲಿ ಅಭ್ಯಾಸ ಆರಂಭಿಸಿದರು.
ಪರ್ತ್ ಟೆಸ್ಟ್ ಪಂದ್ಯವನ್ನು 295 ರನ್ನುಗಳಿಂದ ಹೀನಾಯವಾಗಿ ಸೋತಿರುವ ಆಸ್ಟ್ರೇಲಿಯ, ಅಡಿಲೇಡ್‌ನ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದೆ. ಅಲ್ಲಿ ರನ್ ಬರಗಾಲ ಅನುಭವಿಸಿದ್ದ, ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ ನೆಟ್ಸ್‌ನಲ್ಲಿ ಸುದೀರ್ಘ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದು ಕಂಡುಬಂತು.
ಕ್ಯಾನ್‌ಬೆರಾದಲ್ಲಿ ಅಭ್ಯಾಸ ಪಂದ್ಯವನ್ನು ಆಡಿದ ಭಾರತದ ಕ್ರಿಕೆಟಿಗರು ಅಡಿಲೇಡ್‌ಗೆ ಆಗಮಿಸಿ ವಿಶ್ರಾಂತಿ ಪಡೆದರು. ಮಂಗಳವಾರ ಅಭ್ಯಾಸಕ್ಕೆ ಇಳಿಯಲಿದ್ದಾರೆ. ಅಡಿಲೇಡ್ ಟೆಸ್ಟ್ ಶುಕ್ರವಾರ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cap Auction: ಬ್ರಾಡ್‌ಮನ್ ಕ್ಯಾಪ್ 2.11 ಕೋಟಿ ರೂ.ಗೆ ಹರಾಜು
Cricket: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20: ಕರ್ನಾಟಕವನ್ನು ಬಗ್ಗುಬಡಿದ ಬರೋಡ
Hockey: ವನಿತಾ ಜೂ. ಏಷ್ಯಾ ಕಪ್ ಹಾಕಿ: ಭಾರತ ತಂಡ ಮಸ್ಕತ್‌ಗೆ
Pro Kabaddi: ಬೆಂಗಳೂರು ಬುಲ್ಸ್-ಗುಜರಾತ್ ಜೈಂಟ್ಸ್ ಪಂದ್ಯ ಟೈ
Mangaluru: ವಿವಿ ಅಂತರ್ ಕಾಲೇಜು ಆ್ಯತ್ಲೆಟಿಕ್ಸ್: ಸತತ 22 ಬಾರಿ ಆಳ್ವಾಸ್ ಚಾಂಪಿಯನ್
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.