ಚೀನಾ ಉದ್ಧಟತನ: ಮಾತುಕತೆ ವಿಫಲ ; ಪರಿಹಾರ ನಿಟ್ಟಿನಲ್ಲಿ ನಡೆದಿದ್ದ 13ನೇ ಸುತ್ತಿನ ಮಾತುಕತೆ
Team Udayavani, Oct 11, 2021, 11:15 PM IST
ನವದೆಹಲಿ: ಪೂರ್ವ ಲಡಾಖ್ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ 13ನೇ ಸುತ್ತಿನ ಮಾತುಕತೆಯು ಚೀನಾದ ಉದ್ಧಟತನ ಹಾಗೂ ಹಠಮಾರಿ ಧೋರಣೆಯಿಂದಾಗಿ ವಿಫಲವಾಗಿದೆ. ಭಾರತವು ಮುಂದಿಟ್ಟ “ರಚನಾತ್ಮಕ ಸಲಹೆ’ಗಳನ್ನು ಚೀನಾ ಸೇನಾಧಿಕಾರಿಗಳು ನಿರಾಕರಿಸಿದ್ದಾರೆ.
ಪೀಪಲ್ಸ್ ಲಿಬರೇಷನ್ ಆರ್ಮಿಯ ಅಧಿಕಾರಿಗಳು ಪೂರ್ವಗ್ರಹ ಪೀಡಿತ ಮನಸ್ಥಿತಿಯೊಂದಿಗೇ ಮಾತುಕತೆಗೆ ಬಂದಿದ್ದರು. ಅವರ ವರ್ತನೆ ನೋಡಿದರೆ, ಈ ಮಾತುಕತೆ ಫಲಪ್ರದವಾಗುವುದಿಲ್ಲ ಎಂದು ಮೊದಲೇ ನಿರ್ಧರಿಸಿಯೇ ಬಂದಂತಿತ್ತು ಎಂದು ಸೇನೆ ತಿಳಿಸಿದೆ.
ಯಾವುದೇ ಸಲಹೆ ಸ್ವೀಕರಿಸಲಿಲ್ಲ:
ಭಾನುವಾರ ಚುಶುಲ್-ಮೋಲ್ಡೋ ಗಡಿ ಪಾಯಿಂಟ್‌ನಲ್ಲಿ ನಡೆದ ಎಂಟೂವರೆ ಗಂಟೆಗಳ ಮಾತುಕತೆ ಕುರಿತು ಸೋಮವಾರ ವಿವರಣೆ ನೀಡಿದ ಭಾರತೀಯ ಸೇನೆ, “ಪೂರ್ವ ಲಡಾಖ್‌ನ ಕೆಲವು ಪ್ರದೇಶಗಳಲ್ಲಿ ಇನ್ನೂ ಉಭಯ ಸೇನೆಗಳ ನಡುವೆ ಬಿಕ್ಕಟ್ಟು ಮುಂದಿವರಿದಿದ್ದು, ಅದನ್ನು ಪರಿಹರಿಸುವ ಸಲುವಾಗಿ ಈ ಮಾತುಕತೆ ನಡೆಸಲಾಗಿತ್ತು. ಎಲ್‌ಎಸಿಯಲ್ಲಿ ಬಿಕ್ಕಟ್ಟು ತಲೆದೋರಲು ಒಪ್ಪಂದ ಉಲ್ಲಂ ಸಿ, ಯಥಾಸ್ಥಿತಿಯನ್ನು ಬದಲಿಸಲು ಚೀನಾ ನಡೆಸುತ್ತಿರುವ ಏಕಪಕ್ಷೀಯ ಪ್ರಯತ್ನವೇ ಕಾರಣ. ಗಡಿಯಲ್ಲಿ ಶಾಂತಿ ನೆಲೆಸಬೇಕೆಂದರೆ ಚೀನಾವೇ ಸೂಕ್ತ ಹೆಜ್ಜೆಯಿಡಬೇಕು ಎಂದು ನಾವು ಸಲಹೆ ನೀಡಿದೆವು. ಆದರೆ, ನಾವು ನೀಡಿರುವ ಯಾವುದೇ ಸಲಹೆಯನ್ನೂ ಚೀನಾ ಒಪ್ಪಲಿಲ್ಲ’ ಎಂದು ಹೇಳಿದೆ.
ಇದನ್ನೂ ಓದಿ :ಗಾಂಧೀಜಿ, ಜೆಪಿ ತಂದುಕೊಟ್ಟ ಸ್ವಾತಂತ್ರ್ಯ ನಶಿಸಿ ಹೋಗುತ್ತಿದೆ : ಮಾಜಿ ಪ್ರಧಾನಿ ಎಚ್ ಡಿಡಿ
ಹಾಟ್‌ಸ್ಪ್ರಿಂಗ್, ದೆಮ್‌ಚೋಕ್, ದೆಪ್ಸಾಂಗ್‌ನಿಂದ ಸೇನೆ ಹಿಂಪಡೆಯಬೇಕು ಎಂಬ ನಿಲುವಿನಿಂದ ಹಿಂದೆ ಸರಿಯಬೇಕು ಎಂಬ ಬಗ್ಗೆ ಚೀನಾದ ನಿಯೋಗ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಸೇನೆ ನವದೆಹಲಿಯಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ತಿಂಗಳು ತವಾಂಗ್‌ನಲ್ಲಿ ಚೀನಾದ 200 ಸೈನಿಕರನ್ನು ಭಾರತೀಯ ಸೇನೆ ವಶಕ್ಕೆ ಪಡೆದು ಬಿಡುಗಡೆ ಮಾಡಿದ ಘಟನೆಯೇ ಚೀನಾ ಆಕ್ರೋಶಕ್ಕೆ ಕಾರಣ. ಹೀಗಾಗಿಯೇ ಅಲ್ಲಿನ ಸೇನಾಧಿಕಾರಿಗಳು ವ್ಯಗ್ರರಾಗಿ ಮಾತುಕತೆ ವೇಳೆ ವರ್ತಿಸಿರುವ ಸಾಧ್ಯತೆಗಳು ಇವೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ. ಇನ್ನೊಂದೆಡೆ, ಮಾತುಕತೆ ವಿಫಲವಾಗಲು ಭಾರತವೇ ಕಾರಣ ಎಂದು ಆರೋಪಿಸಿರುವ ಚೀನಾ, ಭಾರತದ ಬೇಡಿಕೆಗಳು ಅವಾಸ್ತವಿಕ ಹಾಗೂ ವಿಚಾರಹೀನವಾದದ್ದು ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.