ಗಾಲ್ವನ್‌ನಲ್ಲಿ ಭಾರತ-ಚೀನಾ ಯೋಧರ ಮುಖಾಮುಖೀ
Team Udayavani, May 23, 2021, 9:14 PM IST
ನವದೆಹಲಿ: ಭಾರತ ಮತ್ತು ಚೀನಾ ಯೋಧರ ನಡುವೆ ಈ ತಿಂಗಳ ಮೊದಲ ವಾರದಲ್ಲಿ ಪೂರ್ವ ಲಡಾಖ್‌ನ ಗಾಲ್ವನ್‌ನಲ್ಲಿ ಸಣ್ಣ ಪ್ರಮಾಣದ ಘರ್ಷಣೆ ಉಂಟಾಗಿದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖೀಸಿ “ದ ಹಿಂದೂ’ ಪತ್ರಿಕೆ ವರದಿ ಮಾಡಿದೆ.
ಗಾಲ್ವನ್ ಕಣಿವೆಯ ಗಸ್ತು ತಿರುಗದೇ ಇರುವ “ವೈ ಜಂಕ್ಷನ್’ ಪ್ರದೇಶದಲ್ಲಿ 2 ಪಡೆಗಳು ಮುಖಾಮುಖೀಯಾಗಿವೆ. ಆದರೆ ಈ ಸಂದರ್ಭದಲ್ಲಿ ಘರ್ಷಣೆ ಏರ್ಪಟ್ಟಿಲ್ಲ.
ಒಟ್ಟು 3 ಕಿಮೀ ವ್ಯಾಪ್ತಿಗೆ ಗಸ್ತು ತಿರುಗದೇ ಇರುವ ಪ್ರದೇಶ ಎಂದು 2020ರ ಜೂ.15ರ ಘರ್ಷಣೆ ಬಳಿಕ ನಿರ್ಧರಿಸಲಾಗಿತ್ತು. ಆದರೂ, ಆಗಾಗ ಈ ಪ್ರದೇಶದಲ್ಲಿ 2 ಸೇನೆಗಳು ಬೇರೆ ಬೇರೆ ಸಮಯದಲ್ಲಿ ಗಸ್ತು ತಿರುಗುತ್ತಿದ್ದವು. ಈ ಪ್ರದೇಶದ ಪೈಕಿ 1.5 ಕಿಮೀ ಒಳಗೆ ಎರಡೂ ಸೇನೆಗಳು ಮುಖಾಮುಖೀಯಾಗಿವೆ.
ಇದನ್ನೂ ಓದಿ :ತೌಖ್ತೇ : ಗೋವಾದ ಕಾಣಕೋಣ ಗಾಲಜೀಬಾಗ್ ಬೀಚ್ ನಲ್ಲಿ ಆಮೆಗಳ 335 ಮೊಟ್ಟೆಗಳಿಗೆ ಹಾನಿ
ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಹಾಲಿ ತಿಂಗಳ ಮೊದಲ ವಾರದಲ್ಲಿ ಒಂದೇ ದಿನ ಒಂದೇ ಸಮಯಕ್ಕೆ 2 ಸೇನೆಗಳು “ವೈ ಜಂಕ್ಷನ್ ಪ್ರದೇಶಕ್ಕೆ ಒಂದೇ ಸಮಯಕ್ಕೆ ಆಗಮಿಸಿವೆ. ಈ ಹಂತದಲ್ಲಿ ಅಲ್ಪ ಪ್ರಮಾಣ ಚಕಮಕಿ ಉಂಟಾಗಿದ್ದರೂ, ಕೂಡಲೇ 2 ಸೇನೆಗಳು ತಮ್ಮ ತಮ್ಮ ನೆಲೆಗೆ ವಾಪಸಾಗಿವೆ. ಅವರ ಪ್ರಕಾರ ಗಸ್ತು ತಿರುಗಬಾರದು ಎಂದು ನಿಗದಿ ಮಾಡಲಾಗಿರುವ ಪ್ರದೇಶದ ವ್ಯಾಪ್ತಿಯಲ್ಲಿಯೇ ಚೀನಾ ಸೇನೆಯ ಶಿಬಿರಗಳು ಇನ್ನೂ ಇವೆ ಎಂದು ಆ ಅಧಿಕಾರಿ ಹೇಳಿದ್ದಾರೆ. 2020ರ ಜೂ.15ರಂದು ನಡೆದಿದ್ದ ಭೀಕರ ಘರ್ಷಣೆಯಲ್ಲಿ ದೇಶದ 20 ಮಂದಿ ವೀರ ಯೋಧರು ಪ್ರಾಣಾರ್ಪಣೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.