ಪಾಕಿಸ್ತಾನ ವಿರುದ್ಧ 7ನೇ ಐತಿಹಾಸಿಕ ಗೆಲುವು ಸಾಧಿಸಿದ ಟೀಂ ಇಂಡಿಯಾ
Team Udayavani, Jun 17, 2019, 1:16 AM IST
ಮ್ಯಾಂಚೆಸ್ಟರ್: ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತದ ಗೆಲುವಿನ ಅಭಿಯಾನ 7ನೇ ಪಂದ್ಯಕ್ಕೆ ವಿಸ್ತರಿಸಿದೆ. ಕ್ರಿಕೆಟ್ ಜಗತ್ತು ಕುತೂಹಲದಿಂದ ವೀಕ್ಷಿಸಿದ ಈ ಹೋರಾಟದಲ್ಲಿ ಭಾರತ ಮತ್ತೆ ಆಲ್‌ರೌಂಡ್ ಪ್ರದರ್ಶನ ನೀಡಿ ತನ್ನ ಸಾಂಪ್ರ ದಾಯಿಕ ಎದುರಾಳಿಯನ್ನು ಮಣಿಸಲು ಯಶಸ್ವಿಯಾಗಿದೆ.
ಮಳೆಯೂ ಪಾಕಿಸ್ಥಾನ ನೆರವಿಗೆ ಬರಲಿಲ್ಲ. ಡಕ್‌ವರ್ತ್ ಲೂಯಿಸ್ ನಿಯಮದಡಿ ಭಾರತ 89 ರನ್ನುಗಳಿಂದ ಪಾಕಿಸ್ಥಾನದ ವಿರುದ್ಧ ಜಯಭೇರಿ ಬಾರಿಸಿದೆ.
ಆರಂಭಿಕ ರೋಹಿತ್ ಶರ್ಮ ಅವರ ಸ್ಫೋಟಕ ಶತಕ ಮತ್ತು ನಾಯಕ ಕೊಹ್ಲಿ ಅವರ ಬಿರುಸಿನ 77 ರನ್ನಿನಿಂದ ಭಾರತ 5 ವಿಕೆಟಿಗೆ 336 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪಾಕಿಸ್ಥಾನ ಮಳೆ ಬಂದು ಆಟ ನಿಂತಾಗ 35 ಓವರ್‌ಗಳಲ್ಲಿ 6 ವಿಕೆಟಿಗೆ 166 ರನ್ ಗಳಿಸಿ ಒದ್ದಾಡುತ್ತಿತ್ತು. ಆಬಳಿಕ ಡಿಎಲ್ ನಿಯಮದಡಿ 40 ಓವರ್‌ಗಳಲ್ಲಿ 302 ರನ್ ಗಳಿಸುವ ಗುರಿ ಪಡೆಯಿತು. ಆದರೆ ಪಾಕಿಸ್ಥಾನ 40 ಓವರ್‌ಗಳಲ್ಲಿ 212 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಅಸಾಧಾರಣ ನಿರ್ವಹಣೆ ನೀಡಿದ ಭಾರತೀಯ ತಂಡ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ತನ್ನ ಅಜೇಯ ಸಾಧನೆಯನ್ನು ಮುಂದು ವರಿಸಿದೆ.
11.000 ರನ್ ಕೊಹ್ಲಿ ದಾಖಲೆ
ಏಕದಿನದಲ್ಲಿ ಅತ್ಯಂತ ವೇಗವಾಗಿ 11,000 ರನ್ ಗಳಿಸಿದ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದರು. 222 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ ಅವರು 276 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದ ಸಚಿನ್ ತೆಂಡುಲ್ಕರ್ ದಾಖಲೆಯನ್ನು ನೆಲಸಮ ಮಾಡಿದರು.
ರೋಹಿತ್ 358 ಸಿಕ್ಸರ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಟಿ20, ಏಕದಿನ, ಟೆಸ್ಟ್) ಒಟ್ಟು 358 ಸಿಕ್ಸರ್ ಬಾರಿಸಿದ ರೋಹಿತ್ ಭಾರತೀಯ ದಾಖಲೆ ನಿರ್ಮಿಸಿದರು. ಈ ವೇಳೆ 355 ಸಿಕ್ಸರ್ ಬಾರಿಸಿದ ಧೋನಿ ದಾಖಲೆ ಮೀರಿದರು.
2ನೇ ಶತಕ
ಈ ಕೂಟದಲ್ಲಿ ರೋಹಿತ್ 2ನೇ ಶತಕ ಬಾರಿಸಿದರು. ಅಷ್ಟು ಮಾತ್ರವಲ್ಲ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಶತಕ ಬಾರಿಸಿದ 2ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಕೊಹ್ಲಿ ಪಾಕ್ ವಿರುದ್ಧ ಶತಕ ಬಾರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.