ಜಾಧವ್ ಪ್ರಕರಣದಲ್ಲಿ ಮತ್ತೆ ಪಾಕ್ ವಿರುದ್ಧ ಐಸಿಜೆ ಮೊರೆ ಹೋಗಲು ಭಾರತ ನಿರ್ಧಾರ
Team Udayavani, May 3, 2020, 12:16 AM IST
ನವದೆಹಲಿ: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪಿನ ಅನುಷ್ಠಾನಕ್ಕೆ ಆಗ್ರಹಿಸಿ ಭಾರತವು ಪಾಕ್ ವಿರುದ್ಧ ಮತ್ತೆ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಾಗಬಹುದು ಎಂದು ಜಾಧವ್ ಪ್ರಕರಣದ ವಕೀಲರಾದ ಹರೀಶ್ ಸಾಳ್ವೆ ಅವರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್, ವೃತ್ತಿ ಬದುಕಿಗೆ ವಿದಾಯ ಹೇಳಿದ ನಂತರ ಸ್ವಂತ ವ್ಯಾಪಾರದಲ್ಲಿ ನಿರತರಾಗಿದ್ದರು. ವ್ಯಾಪಾರ ನಿಮಿತ್ತ ಅವರು ಇರಾನ್‌ಗೆ ಹೋದಾಗ ಪಾಕಿಸ್ತಾನ ಅವರನ್ನು ಬಂಧಿಸಿತ್ತು. ಆದರೆ, ತಾನು ಜಾಧವ್‌ರನ್ನು ಇರಾನ್‌ನಿಂದಲ್ಲ, ಬದಲಾಗಿ ಅವರು ಪಾಕ್‌ನ ಬಲೂಚಿಸ್ತಾನದೊಳಗೆ ನುಗ್ಗಿದಾಗ ಭದ್ರತಾ ಪಡೆಗಳು ಅರೆಸ್ಟ್ ಮಾಡಿವೆ ಎಂದು ಪಾಕ್ ಹೇಳಿತು. ಜಾಧವ್ ಭಾರತದ ಗುಪ್ತಚರ ಇಲಾಖೆ ‘ರಾ’ ಏಜೆಂಟ್ ಆಗಿದ್ದು, ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾರೆ, ಬಲೂಚ್ ಮತ್ತು ಕರಾಚಿಯಲ್ಲಿನ ಮಿಲಿಟೆಂಟ್ಗಳನ್ನು ಒಗ್ಗೂಡಿಸಿ, ಪ್ರತ್ಯೇಕತಾವಾದ ಹರಡಿ ಅಶಾಂತಿ ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು, ಅದರಲ್ಲೂ ಮುಖ್ಯವಾಗಿ ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್‌ಗೆ ಹಾನಿ ಮಾಡುವ ಉದ್ದೇಶದಿಂದ ಭಾರತ ಅವರನ್ನು ಪಾಕ್‌ಗೆ ಕಳುಹಿಸಿತ್ತು ಎಂದು ಆರೋಪಿಸಿತು ಪಾಕಿಸ್ತಾನ. ಜಾಧವ್, ‘ಹುಸ್ಸೇನ್ ಮುಬಾರಕ್’ ಎಂಬ ನಕಲಿ ಪಾಸ್‌ಪೋರ್ಟ್ ಹೊಂದಿದ್ದಾರೆ ಎಂದೂ ಹೇಳಿತು. ಜಾಧವ್ ಬಂಧನಕ್ಕೊಳಗಾದ ಒಂದು ವರ್ಷದಲ್ಲೇ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಅವರಿಗೆ ಗಲ್ಲು ಶಿಕ್ಷೆಯ ತೀರ್ಪು ನೀಡಿತು.
ಐಸಿಜೆ ಮೆಟ್ಟಿಲೇರಿದ ಭಾರತ
ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಭಾರತ ಐಸಿಜೆ ಮೆಟ್ಟಿಲೇರಿತು. ತಾನು ಅನೇಕ ಬಾರಿ ಬೇಡಿಕೆಯಿಟ್ಟರೂ ಜಾಧವ್‌ಗೆ ಪಾಕಿಸ್ತಾನ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ಕೊಟ್ಟಿಲ್ಲ, ಇದು ವಿಯೆನ್ನಾ ಒಪ್ಪಂದದ ಆರ್ಟಿಕಲ್ 36ರ ಉಲ್ಲಂಘನೆಯಾಗಿದೆ ಎಂದು ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ನೇತೃತ್ವದ ಭಾರತೀಯ ತಂಡ ವಾದಿಸಿತು. ಅಲ್ಲದೇ ಜಾಧವ್‌ಗೆ ತಮಗಿರುವ ಹಕ್ಕುಗಳ ಬಗ್ಗೆಯೂ ಪಾಕಿಸ್ತಾನ ಮಾಹಿತಿ ನೀಡದೇ ಇದ್ದದ್ದನ್ನು ಭಾರತ ಪ್ರಶ್ನಿಸಿತು.
ಮಾರ್ಚ್ 25, 2016: ಕುಲಭೂಷಣ್ ಬಂಧನದ ಬಗ್ಗೆ ಭಾರತಕ್ಕೆ ಪಾಕಿಸ್ತಾನದಿಂದ ಅಧಿಕೃತ ಸೂಚನೆ ದೊರೆಯಿತು. ಆಗ ಭಾರತ, ಅಂತಾರಾಷ್ಟ್ರೀಯ ರಾಜತಾಂತ್ರಿಕ ನಿಯಮಗಳ ಅನ್ವಯ ಕುಲಭೂಷಣ್‌ಗೆ ರಾಜತಾಂತ್ರಿಕ ಸಂಪರ್ಕ ಒದಗಿಸಬೇಕೆಂದು ಪಾಕಿಸ್ತಾನಕ್ಕೆ ವಿನಂತಿಸಿತು. ಆ ವರ್ಷದಲ್ಲಿ ಭಾರತ 16 ಬಾರಿ ಈ ರೀತಿಯ ಬೇಡಿಕೆಯಿಟ್ಟಿತಾದರೂ, ಪಾಕಿಸ್ತಾನ ಮಾತ್ರ ನಿರಾಕರಿಸಿಬಿಟ್ಟಿತು.
ಏಪ್ರಿಲ್ 10, 2017: ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ಕುಲಭೂಷಣ್ ಜಾಧವ್ ಪಾಕ್‌ನಲ್ಲಿ ಬೇಹುಗಾರಿಕೆ ಮತ್ತು ಭಯೋತ್ಪಾದನೆಗೆ ಪ್ರಚೋದನೆ ನೀಡಿರುವುದು ಸಾಬೀತಾಗಿದೆ ಎಂದ ಪಾಕ್ ಮಿಲಿಟರಿ ನ್ಯಾಯಾಲಯ, ಮರಣದಂಡನೆ ಶಿಕ್ಷೆ ವಿಧಿಸಿತು. (ಅಲ್ಲದೇ, ಜಾಧವ್ ಭಾರತೀಯ ನೌಕಾಪಡೆಯಲ್ಲಿ ನಿವೃತ್ತಿ ಪಡೆದಿಲ್ಲ, ಅವರು ಸಕ್ರಿಯ ಅಧಿಕಾರಿಯಾಗಿದ್ದಾರೆ ಎಂದೂ ಹೇಳಿತು ಪಾಕ್)
ಮೇ8, 2017: ಪಾಕಿಸ್ತಾನವು ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಒದಗಿಸದೇ ವಿಯೆನ್ನಾ ಒಪ್ಪಂದದ ಉಲ್ಲಂಘನೆ ಮಾಡಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದ(ಐಸಿಜೆ) ಮೆಟ್ಟಿಲೇರಿತು ಭಾರತ.
ಮೇ18, 2017: ಕುಲಭೂಷಣ್ ಜಾಧವ್‌ರನ್ನು ಗೂಢಚಾರಿ ಎಂದು ಕರೆದ ಪಾಕಿಸ್ತಾನದ ನಡೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತೀವ್ರವಾಗಿ ಖಂಡಿಸಿತು ಭಾರತ. ಅಲ್ಲದೇ, ಜಾಧವ್‌ಗೆ ಅವರ ಹಕ್ಕುಗಳ ಬಗ್ಗೆಯೂ ತಿಳಿಸದೇ, ಪಾಕಿಸ್ತಾನ ಸಾಮಾನ್ಯ ನಿಯಮಗಳನ್ನೂ ಉಲ್ಲಂಘಿಸಿದೆ ಎಂದು ವಾದಿಸಿತು.
ಮೇ18, 2017: ಅಂತಾರಾಷ್ಟ್ರೀಯ ನ್ಯಾಯಾಲಯವು ತಾನು ಅಂತಿಮ ತೀರ್ಪು ನೀಡುವವರೆಗೂ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಪಾಕಿಸ್ತಾನಕ್ಕೆ ಆದೇಶಿಸಿತು.
ಡಿಸೆಂಬರ್ 25, 2017: ನಿರಂತರವಾಗಿ ರಾಜತಾಂತ್ರಿಕ ಸಂಪರ್ಕವನ್ನು ನಿರಾಕರಿಸಿದ್ದ ಪಾಕಿಸ್ತಾನ, ಕೊನೆಗೆ ಜಾಧವ್‌ರ ತಾಯಿ ಮತ್ತು ಮಡದಿಗೆ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತು. ಆದರೆ ಅವರ ನಡುವೆ ಗಾಜಿನ ಗೋಡೆಯನ್ನು ಅಳವಡಿಸಿ, ಅವರೆಲ್ಲ ಇಂಟರ್ಕಾಮ್ ಮೂಲಕವೇ ಪರಸ್ಪರ ಮಾತುಕತೆ ನಡೆಸುವಂತೆ ಮಾಡಿತು ಪಾಕ್. ಈ ಭೇಟಿಯ ವೇಳೆ ಜಾಧವ್‌ರ ಪತ್ನಿ ಮತ್ತು ತಾಯಿಗೆ ಪಾಕ್ ಕಿರುಕುಳ ಕೊಟ್ಟಿತೆಂದು ಭಾರತದಿಂದ ತೀವ್ರ ಆಕ್ರೋಶ ಹೊರಹೊಮ್ಮಿತು.
ಜುಲೈ 2018: ಪಾಕಿಸ್ತಾನ ಮತ್ತು ಭಾರತ ಎರಡನೇ ಸುತ್ತಿನ ಲಿಖೀತ ಹೇಳಿಕೆಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಸಲ್ಲಿಸಿದವು. ಈ ವಿಚಾರವು ವಿಯೆನ್ನಾ ಕನ್ವೆಷನ್‌ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಾಕ್ ವಾದಿಸಿತು.
ಫೆಬ್ರವರಿ 2019: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಾಲ್ಕು ದಿನಗಳ ವಿಚಾರಣೆ ನಡೆಯಿತು. ಸರಿಯಾಗಿ ಅದೇ ಅವಧಿಯಲ್ಲೇ ಪುಲ್ವಾಮಾ ಉಗ್ರ ದಾಳಿಯಲ್ಲಿ 40 ಸೈನಿಕರು ಮೃತಪಟ್ಟು ಭಾರತ-ಪಾಕ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು.
ಜುಲೈ 4,2019: ತಾನು ಈ ಪ್ರಕರಣದ ಕುರಿತ ತೀರ್ಪನ್ನು ಜುಲೈ 17ರಂದು ನೀಡುವುದಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿತು.
ಜುಲೈ 17,2019: ಭಾರತ ಪರ ತೀರ್ಪು ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.