India-New Zeland Test: ಚಿನ್ನಸ್ವಾಮಿ ಮೈದಾನಕ್ಕೆ 25ನೇ ಟೆಸ್ಟ್ ಪಂದ್ಯದ ಗರಿಮೆ
25ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳಿಗೆ ಆತಿಥ್ಯ ವಹಿಸಿದ ವಿಶ್ವದ 43ನೇ ಮೈದಾನ
Team Udayavani, Oct 15, 2024, 7:45 AM IST
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಮೈದಾನಕ್ಕೆ ಹಿರಿಮೆಯ ಗರಿಯೊಂದು ಸೇರ್ಪಡೆಯಾಗಲಿದೆ. ಅ.16ರಿಂದ ಆರಂಭಗೊಳ್ಳಲಿರುವ ಭಾರತ-ನ್ಯೂಜಿಲ್ಯಾಂಡ್ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಚಿನ್ನಸ್ವಾಮಿ ಮೈದಾನ 25 ಅಥವಾ ಅದಕ್ಕಿಂತ ಹೆಚ್ಚು ಭಾರತದ ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದ ದೇಶದ 5ನೇ ಕ್ರಿಕೆಟ್ ಮೈದಾನವಾಗಿ ಗುರುತಿಸಿಕೊಳ್ಳಲಿದೆ. ಅಲ್ಲದೆ 25ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳಿಗೆ ಆತಿಥ್ಯ ವಹಿಸಿದ ವಿಶ್ವದ 43ನೇ ಮೈದಾನವಾಗಿ ಚಿನ್ನಸ್ವಾಮಿ ದಾಖಲೆ ಪುಟ ಸೇರಲಿದೆ.
ಚಿನ್ನಸ್ವಾಮಿ ಮೈದಾನದಲ್ಲಿ 1974ರಿಂದ 2022ರ ವರೆಗೆ ಒಟ್ಟು 24 ಭಾರತದ ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 9 ಪಂದ್ಯಗಳನ್ನು ಗೆದ್ದಿದ್ದರೆ, ಪ್ರವಾಸಿ ತಂಡ 6 ಪಂದ್ಯಗಳನ್ನು ಗೆದ್ದಿದೆ. 9 ಪಂದ್ಯಗಳು ಡ್ರಾಗೊಂಡಿವೆ. ಆಸ್ಟ್ರೇಲಿಯ, ಪಾಕಿಸ್ಥಾನ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಅಫ್ಘಾನಿಸ್ಥಾನ ತಂಡಗಳಿಗೆ ಆತಿಥ್ಯ ವಹಿಸಿದ ಹಿರಿಮೆ ಚಿನ್ನಸ್ವಾಮಿಯದ್ದು.
ಮೊದಲು ಬ್ಯಾಟಿಂಗ್ ಮಾಡಿದ ತಂಡ 10 ಬಾರಿ ಗೆದ್ದಿದ್ದರೆ, ಟಾಸ್ ಗೆದ್ದ ತಂಡ 9 ಬಾರಿ ಗೆಲುವು ಸಾಧಿಸಿವೆ. ಈ ಮೈದಾನದಲ್ಲಿ ಭಾರತ ಗರಿಷ್ಠ 626, ಪ್ರವಾಸಿ ತಂಡ 570 ಗರಿಷ್ಠ ರನ್ ಬಾರಿಸಿದ ದಾಖಲೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Air Pollution: ಜ.1ರ ವರೆಗೆ ದೆಹಲಿಯಲ್ಲಿ ಪಟಾಕಿ ಮಾರಾಟ, ಬಳಕೆ, ಉತ್ಪಾದನೆಗೆ ನಿಷೇಧ
Cancer Cases: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು
Arrested: ವೃದ್ಧ ದಂಪತಿ ಮನೆಗೆ ನುಗ್ಗಿ ಒಡವೆ, ನಗದು ದರೋಡೆ; ಮೂವರ ಬಂಧನ
Bengaluru: ಮದ್ಯದ ಬಾಟಲಿಯಿಂದ ಹೊಡೆದು ಸ್ನೇಹಿತನ ಹತ್ಯೆ
Bengaluru: ಕಾಲೇಜಲ್ಲೇ ಮಹಿಳಾ ಪ್ರೊಫೆಸರ್ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.