ಯಾವುದೇ ಪ್ರಧಾನಿ ಭಾರತ-ಪಾಕ್ ವಿಷಯವನ್ನು ವೈಯಕ್ತಿಕ ಲಾಭಕ್ಕೆ ಬಳಸಿಲ್ಲ: HDK
Team Udayavani, Apr 20, 2019, 11:50 AM IST
ಬೆಂಗಳೂರು : ‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಭಾರತ-ಪಾಕ್ ಪರಿಸ್ಥಿತಿಯನ್ನು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
‘ಮೋದಿ ತಮ್ಮ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಭಾರತ-ಪಾಕ್ ವಿಷಯವನ್ನು ಉಲ್ಲೇಖೀಸಿ ಮಾತನಾಡುವುದು ತಪ್ಪು. ಅನೇಕ ಪ್ರಧಾನಿಗಳು ಈ ದೇಶವನ್ನು ಆಳಿದ್ದಾರೆ; ಅನೇಕ ಬಾರಿ ಭಾರತ – ಪಾಕ್ ಸಂಘರ್ಷ ನಡೆದಿವೆ. ಆದರೆ ಈ ಹಿಂದಿನ ಯಾವುದೇ ಪ್ರಧಾನಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಆ ವಿಷಯವನ್ನು ತಮ್ಮ ಭಾಷಣದ ಬಂಡವಾಳವಾಗಿ ಮಾಡಿಕೊಂಡಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.
‘ಪ್ರಧಾನಿ ಮೋದಿ ಅವರು ತಮ್ಮ ಚುನಾವಣಾ ಭಾಷಣದಲ್ಲಿ ಪದೇ ಪದೇ ಬಾಲಾಕೋಟ್ ವಾಯು ದಾಳಿಯನ್ನು ಉಲ್ಲೇಖೀಸುತ್ತಾರೆ ಮತ್ತು ಆ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ತಾನೇ ಖುದ್ದು ಪಾಕ್ ಗಡಿಗೆ ಹೋಗಿ ಬಾಂಬ್ ಹಾಕಿ ಬಂದವರಂತೆ ಅವರು ಮಾತನಾಡುತ್ತಾರೆ. ನಿಜಕ್ಕಾದರೆ ಭಾರತ ಮತ್ತು ಪಾಕಿಸ್ಥಾನ ನಡುವೆ ಯಾವುದೇ ಸಂಘರ್ಷ, ಕದನ ಇಲ್ಲ; ದೇಶದ ಒಳಗೂ ಯಾವುದೇ ಬಾಂಬ್ ದಾಳಿ ನಡೆದಿಲ್ಲ; ಅಂಥದ್ದೇನೂ ಆಗಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.
‘ನನ್ನ ತಂದೆ ಎಚ್ ಡಿ ದೇವೇಗೌಡ ಅವರು 1995ರಲ್ಲಿ 10 ತಿಂಗಳ ಕಾಲ ದೇಶದ ಪ್ರಧಾನಿಯಾಗಿದ್ದಾಗ ಈ ದೇಶದಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ನಡೆದಿದ್ದವಾ ? ಭಾರತ-ಪಾಕ್ ಗಡಿಯಲ್ಲಿ ಅಂಥದ್ದೇನಾದರೂ ನಡೆದಿತ್ತಾ ? ನನ್ನ ತಂದೆ ಪ್ರಧಾನಿಯಾಗಿದ್ದಾಗ ಇಡಿಯ ದೇಶ ಶಾಂತಿಯಿಂದಿತ್ತು’ ಎಂದು ಕುಮಾರಸ್ವಾಮಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.