ಎಲ್ಲ ಕಾಲದಲ್ಲೂ ಭಾರತ-ರಷ್ಯಾ ಸಂಬಂಧ ಗಟ್ಟಿ : ಪ್ರಧಾನಿ ನರೇಂದ್ರ ಮೋದಿ
Team Udayavani, Sep 4, 2021, 7:40 AM IST
ಹೊಸದಿಲ್ಲಿ: ಭಾರತ ಮತ್ತು ರಷ್ಯಾದ ಬಾಂಧವ್ಯವು ಎಲ್ಲ ಕಾಲದಲ್ಲೂ ಗಟ್ಟಿಯಾಗಿ ಉಳಿದುಕೊಂಡಿದೆ. ಎರಡೂ ದೇಶಗಳು ಒಗ್ಗಟ್ಟಾಗಿದ್ದರೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಷ್ಯಾದ ವ್ಲಾಡಿವೋಸ್ಟೋಕ್ ನಗರದಲ್ಲಿ ಶುಕ್ರವಾರ ನಡೆದ ಪೂರ್ವ ಆರ್ಥಿಕ ಫೋರಂ (ಇಇಎಫ್)ನ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, “ಲಸಿಕೆ ಕಾರ್ಯಕ್ರಮ ಸೇರಿದಂತೆ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಎರಡೂ ದೇಶಗಳ ನಡುವಿನ ಸಹಕಾರವು ಅತ್ಯುತ್ತಮವಾಗಿತ್ತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಅಭಿವೃದ್ಧಿಯ ಧ್ಯೇಯ ಹೊಂದಿದ್ದಾರೆ. ಅವರ ಆಶಯವನ್ನು ಈಡೇರಿಸುವಲ್ಲಿ ಭಾರತವು ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿದೆ’ ಎಂದಿದ್ದಾರೆ.
ಭಾರತದಲ್ಲಿ ಬದ್ಧತೆಯಿರುವ, ಪ್ರತಿಭಾನ್ವಿತ ಜನಸಂಖ್ಯೆಯಿದೆ. ರಷ್ಯಾದ ಪೂರ್ವ ಹಾಗೂ ಆಗ್ನೇಯ ಭಾಗದಲ್ಲಿ ಅಪಾರ ಸಂಪನ್ಮೂಲಗಳಿವೆ. ರಷ್ಯಾದ ಪೂರ್ವಭಾಗದ ಅಭಿವೃದ್ಧಿಗೆ ಭಾರತದ ಪ್ರತಿಭೆಗಳು ತಮ್ಮಿಂದಾದ ಕೊಡುಗೆಗಳನ್ನು ನೀಡಬಹುದಾಗಿದೆ ಎಂದೂ ಮೋದಿ ಹೇಳಿದ್ದಾರೆ.
ಭಾರತದ ಇತಿಹಾಸ ಮತ್ತು ನಾಗರಿಕತೆಯಲ್ಲಿ “ಸಂಗಮ’ ಎಂಬ ಪದಕ್ಕೆ ವಿಶೇಷ ಅರ್ಥವಿದೆ. ನದಿಗಳು, ಜನರು, ಚಿಂತನೆಗಳು ಬಂದು ಕೂಡುವ ಜಾಗವನ್ನು ಸಂಗಮ ಎನ್ನುತ್ತೇವೆ. ಈಗ ರಷ್ಯಾದ ವ್ಲಾಡಿವೋಸ್ಟೋಕ್ ಕೂಡ ಯುರೇಷಿಯಾ ಮತ್ತು ಪೆಸಿಫಿಕ್‌ನ ನೈಜ “ಸಂಗಮ’ ಸ್ಥಳವಾಗಿದೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.