India Vs Newzeland Test: ವಾಂಖೇಡೆ: ರೋಹಿತ್ ಶರ್ಮಾ ಪಡೆಗೆ ಅಗ್ನಿಪರೀಕ್ಷೆ
ಸರಣಿ ಸೋತ ಭಾರತಕ್ಕೆ ಪ್ರತಿಷ್ಠೆ ಉಳಿಸಿಕೊಳ್ಳುವ ಸವಾಲು
Team Udayavani, Nov 1, 2024, 5:25 AM IST
ಮುಂಬಯಿ: ಯಾರೂ ನಿರೀಕ್ಷಿಸಿರದ ರೀತಿಯಲ್ಲಿ 12 ವರ್ಷಗಳ ಬಳಿಕ ತವರಲ್ಲೇ ಟೆಸ್ಟ್ ಸರಣಿಯೊಂದನ್ನು ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿರುವ ಭಾರತ, ಶುಕ್ರವಾರ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅಂತಿಮ ಟೆಸ್ಟ್ ಆಡಲಿಳಿಯಲಿದೆ. ಈ ಪಂದ್ಯವ ನ್ನಾದರೂ ಗೆದ್ದು ಒಂದಿಷ್ಟು ಪ್ರತಿಷ್ಠೆ ಉಳಿಸಿಕೊಳ್ಳುವುದೊಂದೇ ರೋಹಿತ್ ಪಡೆಯ ಮುಂದಿರುವ ಮಾರ್ಗ.
ಸರ್ವಾಂಗೀಣ ಪ್ರದರ್ಶನ ಅಗತ್ಯ
ಇನ್ನೊಂದೆಡೆ ಬೆಂಗಳೂರು ಹಾಗೂ ಪುಣೆ ಟೆಸ್ಟ್‌ಗಳೆರಡರಲ್ಲೂ ಭಾರತವನ್ನು ಸೋಲಿನ ಕೋಣೆಗೆ ತಳ್ಳಿರುವ ನ್ಯೂಜಿ ಲ್ಯಾಂಡ್, ಮುಂಬಯಿಯಲ್ಲೂ ಗೆಲ್ಲುವ ಯೋಜನೆಯಲ್ಲಿದೆ. ಈ ಮೂಲಕ ಟೀಮ್ ಇಂಡಿಯಾವನ್ನು ಕ್ಲೀನ್ ಸ್ವೀಪ್ ಮಾಡುವುದು ಟಾಮ್ ಲ್ಯಾಥಂ ಪಡೆಯ ಯೋಜನೆ. ಆದರೆ ಭಾರತ ಯಾವ ಕಾರಣಕ್ಕೂ ಇಂಥದೊಂದು ಘೋರ ಸಂಕಟಕ್ಕೆ ಸಿಲುಕಬಾರದು. ಸರ್ವಾಂಗೀಣ ಪ್ರದರ್ಶನ ದೊಂದಿಗೆ ಗೆದ್ದು ಮರ್ಯಾದೆ ಉಳಿಸಿಕೊಳ್ಳು ವುದೊಂದೇ ನಮ್ಮವರ ಗುರಿ ಆಗಬೇಕು. ಹಾಗೆಯೇ ಇಲ್ಲಿ ಗೆದ್ದು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಉಳಿದುಕೊಳ್ಳಬೇಕಾದ ಒತ್ತಡ ಕೂಡ ಟೀಮ್ ಇಂಡಿಯಾದ ಮೇಲಿದೆ.
ಮೊದಲೆರಡು ಟೆಸ್ಟ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿ, ಅದರಲ್ಲೂ ಸ್ಪಿನ್ ಎದುರಿಸುವ ಸಾಮರ್ಥ್ಯವೇ ನಮ್ಮ ವರಲ್ಲಿ ಇಲ್ಲ ಎಂಬುದು ಸಾಬೀತಾಗಿದೆ. ಬೆಂಗಳೂರಿನಲ್ಲಿ ವೇಗದ ದಾಳಿಗೆ ತತ್ತರಿಸಿದ್ದರು. ವಾಂಖೇಡೆ ಟ್ರ್ಯಾಕ್ ಸ್ಪಿನ್ನರ್‌ಗಳಿಗೆ ನೆರವಾಗುವ ಸಾಧ್ಯತೆ ಇದೆ. ಕಳೆದ ಸಲ ಇಲ್ಲಿ ಅಜಾಜ್ ಪಟೇಲ್ ಇನ್ನಿಂಗ್ಸ್‌ನ ಎಲ್ಲ 10 ವಿಕೆಟ್ ಉರುಳಿಸಿದ್ದನ್ನು ಮರೆಯುವಂತಿಲ್ಲ. ಎಲ್ಲ ಬಗೆಯ ಅಸ್ತ್ರಗಳೂ ನ್ಯೂಜಿಲ್ಯಾಂಡ್ ಬೌಲಿಂಗ್ ಬತ್ತಳಿಕೆಯಲ್ಲಿದೆ.
ಸೀನಿಯರ್‌ಗಳ ವೈಫಲ್ಯ
ಭಾರತದ ಸಂಕಟಕ್ಕೆ ಮುಖ್ಯ ಕಾರಣ ಸೀನಿಯರ್ ಬ್ಯಾಟರ್‌ಗಳ ವೈಫಲ್ಯ. ಮುಖ್ಯವಾಗಿ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ತೀವ್ರ ರನ್ ಬರಗಾಲ ಅನುಭವಿಸುತ್ತಿದ್ದಾರೆ. ಇದರಿಂದ ಜೈಸ್ವಾಲ್, ಗಿಲ್ ಮೇಲಿನ “ವರ್ಕ್‌ಲೋಡ್’ ಸಹಜವಾಗಿಯೇ ಹೆಚ್ಚಿದೆ. ನಿಂತು ಆಡುವ, ದೊಡ್ಡ ಜತೆಯಾಟ ನಡೆಸುವ ಕಾರ್ಯತಂತ್ರದಲ್ಲೂ ನಮ್ಮವರು ಎಡವುತ್ತಿದ್ದಾರೆ. ಟೆಸ್ಟ್ ಪಂದ್ಯವನ್ನು ಹೊಡಿಬಡಿ ಶೈಲಿಯಲ್ಲಿ ಬ್ಯಾಟಿಂಗ್ ನಡೆಸುವುದು ಕೂಡ ಸೋಲಿಗೆ ಮೂಲವಾಗಿದೆ.
ಭಾರತದ ಬೌಲಿಂಗ್ ವಿಭಾಗ ದಲ್ಲಿ ಒಂದು ಬದಲಾವಣೆ ಗೋಚರಿಸ ಬಹುದು. ರವೀಂದ್ರ ಜಡೇಜ ಬದಲು ಅಕ್ಷರ್ ಪಟೇಲ್ ಆಡುವ ಸಾಧ್ಯತೆ ಇದೆ. ಹಾಗೆಯೇ ಮುಂಬರುವ ಆಸ್ಟ್ರೇಲಿಯ ಪ್ರವಾಸವನ್ನು ಗಮನದಲ್ಲಿರಿಸಿ ಜಸ್‌ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸುದ್ದಿಯೂ ಹರಿದಾಡುತ್ತಿದೆ. ಆದರೆ ಬುಮ್ರಾಗೆ ಸೂಕ್ತ ಬದಲಿ ಆಯ್ಕೆ ಯಾರು ಎಂಬುದು ದೊಡ್ಡ ಪ್ರಶ್ನೆ.
ಪಿಚ್ ರಿಪೋರ್ಟ್
ಭಾರತ-ನ್ಯೂಜಿಲ್ಯಾಂಡ್ ನಡುವಿನ ಆರಂಭಿಕ 2 ಪಂದ್ಯಗಳು ಬೆಂಗಳೂರು, ಪುಣೆಯ ಕಪ್ಪು ಮಣ್ಣಿನ ಪಿಚ್‌ನಲ್ಲಿ ನಡೆದಿದ್ದವು. ಮುಂಬಯಿಯಲ್ಲಿ 3ನೇ ಪಂದ್ಯ ಕೆಂಪುಮಣ್ಣಿನ ಪಿಚ್‌ನಲ್ಲಿ ನಡೆಯಲಿದೆ. ಬಿಸಿಸಿಐಯ ಬೇಡಿಕೆಯಂತೆ ಇದೂ ಕೂಡ ಸಂಪೂರ್ಣವಾಗಿ ಸ್ಪಿನ್ ಸ್ನೇಹಿ ಪಿಚ್ ಆಗಿರುವ ಸಾಧ್ಯತೆ ಹೆಚ್ಚಿದೆ. ಪಂದ್ಯದ ಮೊದಲ ಗಂಟೆಯಿಂದಲೇ ಪಿಚ್ ಸ್ಪಿನ್‌ಗೆ ಪೂರಕವಾಗುವ ಸಾಧ್ಯತೆಯಿದೆ. ಹಿಂದಿನ ವರದಿಗಳ ಪ್ರಕಾರ ಅಂಕಣದಲ್ಲಿ ತುಸು ಹುಲ್ಲಿದ್ದು, ಮೊದಲ ದಿನ ವೇಗಿಗಳು ಹಾಗೂ ಬ್ಯಾಟರ್‌ಗಳಿಗೆ ನೆರವಾಗಲಿದೆ ಎನ್ನಲಾಗಿತ್ತು. ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಆರಿಸಿಕೊಂಡ ತಂಡವೇ ಹೆಚ್ಚು ಪಂದ್ಯಗಳನ್ನು ಗೆದ್ದಿದೆ.
“ಭಾರತ ಸ್ಪಿನ್ ಎದುರು ಸಾಮರ್ಥ್ಯ ಕಳೆದುಕೊಂಡಿಲ್ಲ. ಆದರೆ ಟಿ20 ಕ್ರಿಕೆಟ್ ವಿಶ್ವಾದ್ಯಂತ ಹೆಚ್ಚಿರುವುದರಿಂದ ಆಟಗಾರರಲ್ಲಿ ರಕ್ಷಣಾತ್ಮಕವಾಗಿ ಆಡುವ ಸ್ವಭಾವ ಕಡಿಮೆಯಾಗಿದೆ. ಇದನ್ನು ಸರಿಪಡಿಸುತ್ತಿದ್ದೇವೆ. ಮುಂದೆ ಪರಿಣಾಮ ಗೊತ್ತಾಗಲಿದೆ’
– ಗೌತಮ್ ಗಂಭೀರ್, ಭಾರತದ ಕೋಚ್
ವಾಂಖೇಡೆಯಲ್ಲಿ ಭಾರತ-ನ್ಯೂಜಿಲ್ಯಾಂಡ್
ಮುಂಬಯಿಯ “ವಾಂಖೇಡೆ ಸ್ಟೇಡಿ ಯಂ’ನಲ್ಲಿ ಭಾರತ-ನ್ಯೂಜಿಲ್ಯಾಂಡ್ ಈವರೆಗೆ 3 ಟೆಸ್ಟ್‌ಗಳಲ್ಲಿ ಎದುರಾಗಿವೆ. ಭಾರತ ಎರಡನ್ನು ಗೆದ್ದರೆ, ನ್ಯೂಜಿಲ್ಯಾಂಡ್ ಒಂದರಲ್ಲಿ ಜಯ ಸಾಧಿಸಿದೆ.
ಬೇಡಿ ಸಾರಥ್ಯದಲ್ಲಿ ಗೆಲುವು
ಮೊದಲ ಟೆಸ್ಟ್ ನಡೆದದ್ದು 1976ರಲ್ಲಿ. ಇದನ್ನು ಬಿಷನ್ ಸಿಂಗ್ ಬೇಡಿ ನಾಯಕತ್ವದ ಭಾರತ 162 ರನ್ನುಗಳಿಂದ ಗೆದ್ದಿತ್ತು. 304 ರನ್ ಗೆಲುವಿನ ಗುರಿ ಪಡೆದ ಗ್ಲೆನ್ ಟರ್ನರ್ ಪಡೆ, ಸ್ಪಿನ್ ತ್ರಿವಳಿಗಳ ದಾಳಿಗೆ ಸಿಲುಕಿ 141ಕ್ಕೆ ಕುಸಿಯಿತು. ಬೇಡಿ 5, ಚಂದ್ರಶೇಖರ್ ಮತ್ತು ವೆಂಕಟರಾಘವನ್ ತಲಾ 2 ವಿಕೆಟ್ ಕೆಡವಿದರು. ಮೊದಲ ಸರದಿಯಲ್ಲೂ ಈ ಮೂವರು 9 ವಿಕೆಟ್ ಉರುಳಿಸಿದ್ದರು. ಸುನೀಲ್ ಗಾವಸ್ಕರ್ (119) ಮತ್ತು ಜಾನ್ ಪಾರ್ಕರ್ (104) ಈ ಪಂದ್ಯದ ಶತಕವೀರರು.
ಭಾರತಕ್ಕೆ ಸೋಲು
1988ರ ಸರಣಿಯ ವಾಂಖೇಡೆ ಟೆಸ್ಟ್ ಪಂದ್ಯವನ್ನು ನ್ಯೂಜಿಲ್ಯಾಂಡ್ 136 ರನ್ನುಗಳಿಂದ ಜಯಿಸಿತು. ಗೆಲುವಿಗೆ 282 ರನ್ ಗುರಿ ಪಡೆದ ದಿಲೀಪ್ ವೆಂಗ್‌ಸರ್ಕಾರ್ ನಾಯಕತ್ವದ ಭಾರತ 145ಕ್ಕೆ ಸರ್ವಪತನ ಕಂಡಿತು. ಜಾನ್ ಬ್ರೇಸ್‌ವೆಲ್ 6, ರಿಚರ್ಡ್ ಹ್ಯಾಡ್ಲಿ 4 ವಿಕೆಟ್ ಉರುಳಿಸಿ ಭಾರತವನ್ನು ಕಾಡಿದರು. ಹ್ಯಾಡ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಹಾರಿಸಿ ಒಟ್ಟು 10 ವಿಕೆಟ್ ಸಾಧನೆಗೈದರು.
ಅಜಾಜ್ 10 ವಿಕೆಟ್ ಸಾಧನೆ
2021ರಲ್ಲಿ ಭಾರತ-ನ್ಯೂಜಿಲ್ಯಾಂಡ್ ಇಲ್ಲಿ ಕೊನೆಯ ಸಲ ಮುಖಾಮುಖೀ ಯಾದಾಗ ಪ್ರವಾಸಿ ತಂಡದ, ಮುಂಬಯಿ ಮೂಲದ ಸ್ಪಿನ್ನರ್ ಅಜಾಜ್ ಪಟೇಲ್ ಮೊದಲ ಸರದಿಯ ಎಲ್ಲ 10 ವಿಕೆಟ್ ಉರುಳಿಸಿ ಇತಿಹಾಸ ನಿರ್ಮಿಸಿದ್ದರು (47.5-12-119-10). ಆದರೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ನ್ಯೂಜಿಲ್ಯಾಂಡ್ (62 ಮತ್ತು 167) 372 ರನ್ನುಗಳ ಬೃಹತ್ ಸೋಲನ್ನು ಹೊತ್ತುಕೊಂಡಿತು. ಮಾಯಾಂಕ್ ಅಗರ್ವಾಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ ರನ್ ಪ್ರವಾಹ ಹರಿಸಿದ್ದರು (150 ಮತ್ತು 62). ಅನಂತರ ವಾಂಖೇಡೆಯಲ್ಲಿ ನಡೆ ಯುತ್ತಿರುವ ಮೊದಲ ಟೆಸ್ಟ್ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.