ಲೀಡ್ಸ್ ನಲ್ಲಿ ಲಂಕಾ ಮಣಿಸಲು ವಿರಾಟ್ ಸೈನ್ಯ ರೆಡಿ: ಭಾರತ ತಂಡದಲ್ಲಿ ಎರಡು ಬದಲಾವಣೆ
ಶಮಿ, ಚಾಹಲ್ ಬದಲು ಜಡೇಜಾ, ಕುಲದೀಪ್
Team Udayavani, Jul 6, 2019, 2:34 PM IST
ಲೀಡ್ಸ್: ವಿಶ್ವಕಪ್ ಕೂಟದಲ್ಲಿ ತಮ್ಮ ಕೊನೆಯ ಲೀಗ್ ಪಂದ್ಯವಾಡಲು ಟೀಂ ಇಂಡಿಯಾ ಮತ್ತು ದ್ವೀಪ ರಾಷ್ಟ್ರ ಶ್ರೀಲಂಕಾ ಸಜ್ಜಾಗಿವೆ. ಇಲ್ಲಿನ ಹೇಡಿಂಗ್ಲೆ ಮೈದಾನದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ.
ಲಂಕಾ ವಿರುದ್ದದ ಈ ಹಣಾಹಣಿಗೆ ಭಾರತ ಎರಡು ಬದಲಾವಣೆ ಮಾಡಿದೆ. ಶಮಿ ಮತ್ತು ಚಾಹಲ್ ವಿಶ್ರಾಂತಿ ನೀಡಿದ್ದು ಅವರ ಬದಲಿಗೆ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲಂಕಾ ಕೂಡ ಒಂದು ಬದಲಾವಣೆ ಮಾಡಿಕೊಂಡಿದ್ದು, ಜೆಫ್ರಿ ವ್ಯಂಡಾರ್ಸೆ ಬದಲು ತಿಸೇರಾ ಪೆರೇರಾ ಸ್ಥಾನ ಪಡೆದಿದ್ದಾರೆ
ಈಗಾಗಲೇ ಸೆಮಿ ಫೈನಲ್ ಟಿಕೆಟ್ ಈಗಾಗಲೇ ಫಿಕ್ಸ್ ಮಾಡಿಕೊಂಡಿರುವ ವಿರಾಟ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಇರಾದೆ ಹೊಂದಿದೆ. ಭಾರತ ಇಂದಿನ ಪಂದ್ಯ ಗೆದ್ದು, ಆಸೀಸ್ ವಿರುದ್ಧ ದಕ್ಷಿಣ ಆಪ್ರಿಕಾ ಗೆದ್ದರೆ ಭಾರತ ಮೊದಲ ಸ್ಥಾನಕ್ಕೆ ಏರಲಿದೆ.
ಆದರೆ ಶ್ರೀಲಂಕಾ ಇಂದಿನ ಪಂದ್ಯವನ್ನು ಗೆದ್ದು ಗೌರವದಿಂದ ಕೂಟ ಮುಗಿಸುವ ಆಕಾಂಕ್ಷೆಯೊಂದೆ ಬಾಕಿ ಉಳಿದಿದೆ. ಕೂಟದ ಮೊದಲಾರ್ಧವನ್ನು ತೀರಾ ಕಳಪೆಯಾಗಿ ಆಡಿದ್ದ ಲಂಕಾ ಕೊನೆಯ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಹಿರಿಯ ಆಟಗಾರ ಲಸಿತ್ ಮಾಲಿಂಗ ಇಂದು ಬಹುತೇಕ ತನ್ನ ಕೊನೆಯ ವಿಶ್ವ ಕಪ್ ಪಂದ್ಯವಾಡುವುದರಿಂದ ಮಾಲಿಂಗಾಗೆ ಉತ್ತಮ ವಿಶ್ವಕಪ್ ವಿದಾಯ ನೀಡುವುದು ಕರುಣರತ್ನೆ ಬಳಗದ ಗುರಿ.
ತಂಡಗಳು
ಭಾರತ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ರಿಷಭ್ ಪಂತ್, ಮಹೇಂದ್ರ ಸಿಂಗ್ ಧೋನಿ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯಾ, , ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, , ಜಸ್ಪ್ರೀತ್ ಬುಮ್ರಾ.
ಶ್ರೀಲಂಕಾ: ದಿಮ್ಮುತ ಕರುಣರತ್ನೆ, ಕುಸಾಲ್ ಪೆರೇರಾ, ಅವಿಷ್ಕಾ ಫೆರ್ನಾಂಡೋ, ಆಂಜೆಲೋ ಮ್ಯಾಥ್ಯೂಸ್, ಲಹಿರು ತಿರುಮನ್ನೆ, ಇಸುರು ಉದಾನೆ, ಧನಂಜಯ್ ಡಿಸಿಲ್ವ, ತಿಸ್ಸರ ಪೆರೇರಾ , ಕಸುನ್ ರಜಿತಾ, ಲಸಿತ್ ಮಾಲಿಂಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.