ಆತ್ಮವಿಶ್ವಾಸ, ಪರಿಶ್ರಮದಿಂದ ಆತ್ಮನಿರ್ಭರ ಭಾರತ

ಆರೆಸ್ಸೆಸ್‌ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

Team Udayavani, May 18, 2020, 6:00 AM IST

ಆತ್ಮವಿಶ್ವಾಸ, ಪರಿಶ್ರಮದಿಂದ ಆತ್ಮನಿರ್ಭರ ಭಾರತ

ಬೆಂಗಳೂರು: ಆರ್ಥಿಕತೆ ಸಹಿತ ಅನ್ನ, ಅರಿವು, ವಸ್ತ್ರ ಮತ್ತು ವಸತಿಯಲ್ಲಿ ಪೂರ್ಣ ಸ್ವಾವ ಲಂಬನೆ ಪಡೆಯಲು ಜನ ಮನವು ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ಬೆಳೆದಾಗ “ಆತ್ಮ ನಿರ್ಭರ ಭಾರತ’ ನಿರ್ಮಾಣ ಸಾಧ್ಯ…

-ಇದು ಆರೆಸ್ಸೆಸ್‌ ಸಹ ಸರಕಾರ್ಯ ವಾಹ ದತ್ತಾತ್ರೇಯ ಹೊಸಬಾಳೆಯವರ ಅಭಿಪ್ರಾಯ. ಸಮರ್ಥ ಭಾರತ ಸಂಘ ಟನೆ ಹಮ್ಮಿಕೊಂಡಿರುವ ಫೇಸ್‌ಬುಕ್‌ ಲೈವ್‌ ಉಪನ್ಯಾಸ ಸರಣಿಯಲ್ಲಿ ರವಿವಾರ ಅವರು ಆತ್ಮ ನಿರ್ಭರ ಭಾರತ – ಸಮರ್ಥ ಭಾರತ ಕುರಿಕು ಮಾತನಾಡಿದ್ದಾರೆ.

ನಮಗೆ ನಾವು ಭಾರವಾಗದೆ ಸ್ವಾವಲಂಬಿ ಗಳಾಗುವ ಪರಿಕಲ್ಪನೆಯು ಇಡೀ ಸಮಾಜಕ್ಕೆ ಬರಬೇಕು. ರಾಷ್ಟ್ರವು ಸ್ವಾವಲಂಬನೆ ಸಾಧಿಸ ಬೇಕಾದರೆ ಮತ್ತು ಸ್ವಯಂಪೂರ್ಣವಾಗ ಬೇಕಾದರೆ ನಾವೆಲ್ಲರೂ ಸ್ವಾವಲಂಬಿಗಳಾಗಬೇಕು. ಅದು ಸದಾ ಸುಖ ನೀಡುತ್ತದೆ. ನಮ್ಮ ಆವಶ್ಯಕತೆಗಳನ್ನು ನಾವೇ ತುಂಬಿಕೊಳ್ಳಬೇಕು. ದೇಶವೇ ಆತ್ಮವಾದಾಗ ಇನ್ನೊಂದು ದೇಶದ ಮೇಲೆ ಅವಲಂಬನೆ ತಪ್ಪುತ್ತದೆ. ಎಲ್ಲರಲ್ಲೂ ಸ್ವಾಭಿಮಾನ, ಸಂಘಟನೆ, ಸಶಕ್ತತೆ ತುಂಬಿಕೊಂಡಾಗ ರಾಷ್ಟ್ರವನ್ನು ಆತ್ಮ ನಿರ್ಭರ ಮಾಡಬಹುದು ಎಂದಿದ್ದಾರೆ ದತ್ತಾತ್ರೇಯ ಹೊಸಬಾಳೆ.

ಅನ್ನ, ಅರಿವು, ವಸ್ತ್ರ ಮತ್ತು ವಸತಿಯಲ್ಲಿ ಸ್ವಾವಲಂಬನೆ ಸಾಧಿಸಲು ನಮ್ಮಲ್ಲಿ ಸಂಪನ್ಮೂಲದ ಕೊರತೆಯಿಲ್ಲ. ಕೃಷಿ ಮತ್ತು ಔಷಧ, ಹಾಲು, ಹಣ್ಣು, ತರಕಾರಿಯಲ್ಲೂ ಸ್ವಾವಲಂಬನೆ ಸಾಧಿಸಬೇಕು. ದೇಶ ಪ್ರತಿ ಮಗು, ಪ್ರತಿ ಮನೆಗೂ ಹಾಲುಸಿಗುವಂತೆ ಮಾಡಲು ದೇಸಿ ಗೋವಿನ ತಳಿಗಳನ್ನು ಕಾಪಾಡಿ,ವೃದ್ಧಿಸುವ ಅಭಿಯಾನ ನಡೆ ಯಬೇಕು ಎಂದು ಹೇಳಿದರು.

ಸ್ವಾವಲಂಬನೆ
ಯಾವುದೇ ರಾಷ್ಟ್ರವು ಇನ್ನೊಂದು ರಾಷ್ಟ್ರದ ಆಕ್ರಮಣಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರಕ್ಷಣೆ ಮತ್ತು ಭದ್ರತೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಇಂಧನ, ಆಹಾರ ಭದ್ರತೆ ಮತ್ತು ವಿಜ್ಞಾನ,ಅನ್ವಯಿಕ ವಿಜ್ಞಾನ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಅತೀ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವ್ಯವಸ್ಥೆ, ಸಂಸ್ಥೆಗಳು ಬದಲಾಗಬೇಕು
ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಅನೇಕ ವ್ಯವಸ್ಥೆ ಮತ್ತು ಸಂಸ್ಥೆಗಳು ಬ್ರಿಟಿಷ್‌ ವಸಾಹತಿನಂತಿವೆ. ಇದರಿಂದ ಮುಕ್ತಿ ಹೊಂದಬೇಕು. ಶಿಕ್ಷಣ, ನ್ಯಾಯಾಂಗ, ಆಡಳಿತ ವ್ಯವಸ್ಥೆ ಮತ್ತು ಚುನಾವಣ ಪದ್ಧತಿಯಲ್ಲಿ ಬದಲಾವಣೆ ತರಬೇಕು. ಇವೆಲ್ಲವೂ ಭಾರತೀಯ ಜನಮನಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕು ಎಂದಿದ್ದಾರೆ ಹೊಸಬಾಳೆ.

ಸಂಶೋಧನೆ ಅಗತ್ಯ
ಪುರಾತನ ಗ್ರಂಥಗಳನ್ನು ಪುನರ್‌ ಅಭಿವ್ಯಕ್ತಿಗೊಳಿಸುವ ಸಂಶೋಧನೆಗಳು ನಡೆಯಬೇಕು. ನಮ್ಮಲ್ಲಿರುವ ಜ್ಞಾನ ರಾಶಿಯನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ನೀಡಬೇಕು ಎಂದು ಹೇಳಿದ್ದಾರೆ.

ಏಕತೆ ಅಗತ್ಯ
ಐಎಎಸ್‌-ಐಪಿಎಸ್‌ ನಡುವಿನ ಗುದ್ದಾಟ, ವೈದ್ಯ ಪದ್ಧತಿಯ ನಡುವಿನ ಗುದ್ದಾಟ ನಿಲ್ಲಬೇಕು. ವಿವೇಕಾನಂದರು ಹೇಳಿದಂತೆ ಒಳ್ಳೆಯ ಸಂಗತಿ ಎಲ್ಲಿಂದ ಬಂದರೂ ಸ್ವೀಕರಿಸುವಂತಿರಬೇಕು. ಎಲ್ಲೂ ಒಡಕು ಇರಬಾರದು; ಏಕತೆ ಅಗತ್ಯ ಎಂದು ಹೇಳಿದ್ದಾರೆ.

ಭಾರತವೇ ಮಾದರಿ
ಸಂಕಷ್ಟ ಸಂದರ್ಭಗಳಲ್ಲಿ ಜಪಾನ್‌, ಇಸ್ರೇಲ್‌ ನಿದರ್ಶನಗಳನ್ನು ನೀಡುವ ವಾಡಿಕೆಯಿದೆ. ಆದರೆ ಈಗ ಭಾರತವನ್ನೇ ಉದಾಹರಣೆ ನೀಡಬಹುದು. ಕೊರೊನಾ ನಿರ್ವಹಣೆಯಲ್ಲಿ ದೇಶವು ಸಂಘಟಿತ ವಾಗಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ. ಜನ ಮತ್ತು ಸರಕಾರ ಒಂದಾಗಿ ಈ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ್ದೇವೆ. ಇನ್ನು ಮುಂದೆಯೂ ಇಡೀ ಸಮಾಜಹೀಗೆ ಎದ್ದುನಿಲ್ಲಬೇಕು ಎಂದಿದ್ದಾರೆ ಹೊಸಬಾಳೆ.

1947ರಲ್ಲಿ ದೇಶ ವಿಭಜನೆಯಾದ ಅನಂತರ ಅದೆಷ್ಟೋ ಬಾರಿ ಭಾರತವು ಏಕತೆ, ಒಗ್ಗಟ್ಟುಗಳಿಗೆ ಆಘಾತವಾಗುವ ಸಂದರ್ಭ ಎದುರಿಸಿದೆ. ದೇಶದ ಜನರ ಆಂತರಿಕ ಒಗ್ಗಟ್ಟು, ನಮ್ಮ ಪೂರ್ವಜರ ಋಣ, ಸಮರ್ಥ ನಾಯಕತ್ವದಿಂದ ಭಾರತ ಇಂದಿಗೂ ಏಕವಾಗಿ ಉಳಿದಿದೆ. ಇದು ಮುಂದೆಯೂ ಗಟ್ಟಿಯಾಗಿ ಇರಲಿದೆ.
-ದತ್ತಾತ್ರೇಯ ಹೊಸಬಾಳೆ,
ಆರೆಸ್ಸೆಸ್‌ ಸಹ ಸರಕಾರ್ಯವಾಹ

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.