ವನಿತಾ ತಂಡದ ಇಂಗ್ಲೆಂಡ್ ಪ್ರವಾಸ : ಟೆಸ್ಟ್ , ಏಕದಿನ ತಂಡಕ್ಕೆ ಕರೆ ಪಡೆದ ಶಫಾಲಿ
Team Udayavani, May 15, 2021, 6:40 AM IST
ಹೊಸದಿಲ್ಲಿ: ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ಮೊದಲ ಬಾರಿಗೆ ಭಾರತದ ಟೆಸ್ಟ್ ಹಾಗೂ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆಂದು ಆರಿಸಲಾದ ತಂಡದಲ್ಲಿ 17 ವರ್ಷದ ಶಫಾಲಿಗೆ ಅವಕಾಶ ಲಭಿಸಿದೆ. ಅವರು ಈ ವರೆಗೆ 22 ಟಿ20 ಪಂದ್ಯಗಳನ್ನಷ್ಟೇ ಆಡಿದ್ದಾರೆ.
ಸರಣಿಯಲ್ಲಿ ಒಂದು ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಾಗುವುದು. ಟೆಸ್ಟ್ ಹಾಗೂ ಏಕದಿನ ತಂಡಗಳನ್ನು ಮಿಥಾಲಿ ರಾಜ್, ಟಿ20 ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸುವರು. ಮುಂದಿನ ಫೆಬ್ರವರಿಯಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಸರಣಿಯಾಗಿದೆ.
ಶಿಖಾ ಪಾಂಡೆ ವಾಪಸ್
ತವರಿನ ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಅವಕಾಶ ವಂಚಿತರಾಗಿದ್ದ ಅನುಭವಿ ಪೇಸ್ ಬೌಲರ್ ಶಿಖಾ ಪಾಂಡೆ ತಂಡಕ್ಕೆ ವಾಪಸಾಗಿದ್ದಾರೆ. ತನಿಯಾ ಭಾಟಿಯಾ ಜತೆಗೆ ಹೆಚ್ಚುವರಿ ಕೀಪರ್ ಆಗಿ ಜಾರ್ಖಂಡ್‌ನ ಇಂದ್ರಾಣಿ ರಾಯ್ ಅವರನ್ನು ಆರಿಸಲಾಗಿದೆ. ಇಂದ್ರಾಣಿ ಈ ತಂಡದ ಏಕೈಕ ಹೊಸ ಮುಖವಾಗಿದ್ದಾರೆ.
ವನಿತಾ ತಂಡದ ಕೋಚ್ ಆಗಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ರಮೇಶ್ ಪೊವಾರ್ ಅವರಿಗೆ ಆರಂಭದಲ್ಲೇ ಅಗ್ನಿಪರೀಕ್ಷೆ ಎದುರಾಗಿದೆ.
ಟೆಸ್ಟ್ , ಏಕದಿನ ತಂಡ
ಮಿಥಾಲಿ ರಾಜ್ (ನಾಯಕಿ), ಸ್ಮತಿ ಮಂಧನಾ, ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಪೂನಂ ರಾವತ್, ಪ್ರಿಯಾ ಪುನಿಯ, ದೀಪ್ತಿ ಶರ್ಮ, ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮ, ಸ್ನೇಹಾ ರಾಣಾ, ತನಿಯಾ ಭಾಟಿಯಾ, ಇಂದ್ರಾಣಿ ರಾಯ್, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಪೂನಂ ಯಾದವ್, ಏಕ್ತಾ ಬಿಷ್ಟ್, ರಾಧಾ ಯಾದವ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.