ವನಿತಾ ಟಿ20 ಕ್ರಿಕೆಟ್: ನ್ಯೂಜಿಲ್ಯಾಂಡ್ ವಿರುದ್ಧ ಮುಗ್ಗರಿಸಿದ ಭಾರತ
Team Udayavani, Feb 9, 2022, 5:00 AM IST
ಕ್ವೀನ್ಸ್‌ಟೌನ್: ನ್ಯೂಜಿಲ್ಯಾಂಡ್ ಕ್ರಿಕೆಟ್ ಪ್ರವಾಸವನ್ನು ಭಾರತದ ವನಿತೆಯರು ಸೋಲಿನೊಂದಿಗೆ ಆರಂಭಿಸಿದ್ದಾರೆ. ಬುಧವಾರ ನಡೆದ ಟಿ20 ಪಂದ್ಯವನ್ನು 18 ರನ್ನಿನಿಂದ ಕಳೆದುಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 5 ವಿಕೆಟಿಗೆ 155 ರನ್ ಗಳಿಸಿದರೆ, ಭಾರತ 8 ವಿಕೆಟಿಗೆ 137 ರನ್ ಮಾಡಿತು.
ಸ್ಮೃತಿ ಮಂಧನಾ ಗೈರು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಇವರ ಬದಲು ಇನ್ನಿಂಗ್ಸ್ ಆರಂಭಿಸಿದ ಯಾಸ್ತಿಕಾ ಭಾಟಿಯಾ ಎಸೆತಕ್ಕೊಂದರಂತೆ 26 ರನ್ ಮಾಡಿದರು (2 ಬೌಂಡರಿ, 1 ಸಿಕ್ಸರ್). ನಾಯಕಿ ಹರ್ಮನ್‌ಪ್ರೀತ್ ಸಿಂಗ್ ಮತ್ತು ಕೀಪರ್ ರಿಚಾ ಘೋಷ್ (ತಲಾ 12 ರನ್), ಶಫಾಲಿ ವರ್ಮ (13 ರನ್) ಸಿಡಿಯಲು ವಿಫಲರಾದರು. ಎಸ್. ಮೇಘನಾ ದಿಟ್ಟ ಹೋರಾಟವೊಂದನ್ನು ನಡೆಸಿ 30 ಎಸೆತಗಳಿಂದ 37 ರನ್ ಹೊಡೆದರು (6 ಬೌಂಡರಿ). ಇದು ಪಂದ್ಯದಲ್ಲೇ ಸರ್ವಾಧಿಕ ಗಳಿಕೆಯಾಗಿತ್ತು.
ನ್ಯೂಜಿಲ್ಯಾಂಡಿನ ಸವಾಲಿನ ಮೊತ್ತಕ್ಕೆ ಕಾರಣರಾದವರು ಆರಂಭಿಕರಾದ ಸುಝೀ ಬೇಟ್ಸ್ (36) ಮತ್ತು ಸೋಫಿ ಡಿವೈನ್ (31). ಇವರು ಮೊದಲ ವಿಕೆಟಿಗೆ 7.5 ಓವರ್‌ಗಳಿಂದ 60 ರನ್ ಒಟ್ಟುಗೂಡಿಸಿದರು.
ಇದನ್ನೂ ಓದಿ:ಬೆಂಗಳೂರು ಓಪನ್ ಟೆನಿಸ್: ಮೆಚ್ಚಿನ ಆಟಗಾರರಿಗೆ ಸೋಲಿನ ಆಘಾತ
ಇದು ಸರಣಿಯ ಏಕೈಕ ಟಿ20 ಪಂದ್ಯವಾಗಿದ್ದು, ಇನ್ನು 5 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಶನಿವಾರ ಮೊದಲ ಮುಖಾಮುಖೀ ಏರ್ಪಡಲಿದೆ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-5 ವಿಕೆಟಿಗೆ 155 (ಬೇಟ್ಸ್ 36, ಡಿವೈನ್ 31, ಟಹುಹು 27, ಗ್ರೀನ್ 26, ಪೂಜಾ 16ಕ್ಕೆ 2, ದೀಪ್ತಿ 26ಕ್ಕೆ 2). ಭಾರತ-8 ವಿಕೆಟಿಗೆ 137 (ಮೇಘನಾ 37, ಯಾಸ್ತಿಕಾ 26, ಜೆಸ್ ಕೆರ್ 20ಕ್ಕೆ 2, ಅಮೇಲಿಯಾ ಕೆರ್ 25ಕ್ಕೆ 2, ಹ್ಯಾಲಿ ಜೆನ್ಸೆನ್ 25ಕ್ಕೆ 2). ಪಂದ್ಯಶ್ರೇಷ್ಠ: ಲೀ ಟಹುಹು.
ಸ್ಮೃತಿ ಮಂಧನಾ ಕ್ವಾರಂಟೈನ್
ಅವಧಿ ವಿಸ್ತರಣೆ
ನ್ಯೂಜಿಲ್ಯಾಂಡ್‌ನಲ್ಲಿ ಸ್ಮೃತಿ ಮಂಧನಾ ಸೇರಿದಂತೆ ಭಾರತದ ಮೂವರು ಕ್ರಿಕೆಟಿಗರ ಕ್ವಾರಂಟೈನ್ ಅವಧಿ ವಿಸ್ತರಣೆಗೊಂಡಿದೆ. ಹೀಗಾಗಿ ಮಂಧನಾ ಬುಧವಾರದ ಟಿ20 ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಯಿತು. ಮೊದಲ ಏಕದಿನ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಯೂ ಇಲ್ಲ. ಉಳಿದಿಬ್ಬರೆಂದರೆ ಮೇಘನಾ ಸಿಂಗ್ ಮತ್ತು ರೇಣುಕಾ ಸಿಂಗ್.
ನ್ಯೂಜಿಲ್ಯಾಂಡಿಗೆ ಬಂದಿಳಿದ ಭಾರತದ ಆಟಗಾರ್ತಿಯರೆಲ್ಲ “ಮ್ಯಾನೇಜ್x ಐಸೊಲೇಶನ್ ಕ್ವಾರಂಟೈನ್’ನಲ್ಲಿದ್ದರು (ಎಂ.ಐ.ಕ್ಯೂ). ಆದರೆ ಈ ಮೂವರ ಎಂ.ಐ.ಕ್ಯೂ. ವಿಸ್ತರಣೆ ಯಾಕಾಯಿತು ಎಂಬ ಕುರಿತು ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಟಿ20 ಪಂದ್ಯಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಯಾಸ್ತಿಕಾ ಭಾಟಿಯಾ ಈ ವಿಷಯ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.