ಭಾರತದ ನಿರ್ವಹಣ ಕ್ರಮ ಅದ್ಭುತ

Team Udayavani, Apr 21, 2020, 6:30 AM IST

ಭಾರತದ ನಿರ್ವಹಣ ಕ್ರಮ ಅದ್ಭುತ

ಕುಂದಾಪುರ: ಕೋವಿಡ್-19 ತಡೆಗೆ ಭಾರತ ಸರಕಾರ ಅದ್ಭುತವಾದ ಉಪಕ್ರಮಗಳನ್ನು ಕೈಗೊಂಡಿದೆ. ಕಾನೂನು ಪಾಲನೆ ಬಹುತೇಕ ವಿದೇಶಗಳ ಮಾದರಿಯಲ್ಲಿಯೇ ನಡೆಯುತ್ತಿದೆ. ವಿದೇಶದಿಂದ ಬಂದವರ ವಿಚಾರದಲ್ಲೂ ಭಾರತದ ಅಧಿಕಾರಿಗಳ ನಿರ್ವಹಣೆಗೆ ತಲೆಬಾಗಲೇ ಬೇಕು ಎನ್ನುತ್ತಾರೆ ಮೂಲತಃ ಇಲ್ಲಿನ ಫೆರ್ರಿ ರಸ್ತೆಯ ಮಸೀದಿ ಬಳಿಯ ನಿವಾಸಿ, ಪ್ರಸ್ತುತ ದುಬಾೖಯ ಕಾಸೆ¾ಟಿಕ್‌ ಕಂಪೆನಿಯಲ್ಲಿ ಅಡ್ಮಿನ್‌ ಮ್ಯಾನೇಜರ್‌ ಆಗಿರುವ ಮಹ್ಮದ್‌ ನಝರ್‌ ಕುಂದಾಪುರ.

ದಶಕದಿಂದ ಗಲ್ಫ್ ನಲ್ಲಿದ್ದು ಇಲ್ಲಿ ಕಾನೂನು ಪಾಲನೆ ಎಷ್ಟು ಅನಿವಾರ್ಯ, ಎಷ್ಟು ಕಠಿನ, ಹೇಗೆ ಶಿಕ್ಷೆ ಎನ್ನುವ ಅರಿವಿದೆ. ಮಾ. 19ರಿಂದ ಮನೆಯೊಳಗೇ ಇದ್ದೇನೆ. ಮಾಳಿಗೆ ಇಳಿದು ಕೆಳಗೆ ಕೂಡ ಹೋಗಿಲ್ಲ. ಇಷ್ಟು ಸಣ್ಣ ದೇಶದಲ್ಲಿ ಪ್ರತಿದಿನ 400ರಂತೆ ಪ್ರಕರಣಗಳು ಹೆಚ್ಚುತ್ತಿರುವುದು ಭಯ ತರಿಸುತ್ತಿದೆ. ಇಲ್ಲಿನ ಆಡಳಿತದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ನೀಡುವುದು, ಕಡಿವಾಣ ಹಾಕುವುದು, ಕಠಿನ ಕಾನೂನು ಪಾಲನೆ ಸುಲಭ. ಆದರೆ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಜನಸಂಖ್ಯೆ, ವ್ಯಾಪ್ತಿ ಗಮನಿಸಿದರೆ ಕಷ್ಟ. ಇಲ್ಲಿ ದಿನಸಿ, ಮೆಡಿಕಲ್‌ಗೆ ಹೋಗಲು ಇ-ಪಾಸ್‌ ಬೇಕು. ಇಲ್ಲದೇ ಸಂಚರಿಸುವ ವಾಹನಗಳನ್ನು ರಾಡಾರ್‌ ಮೂಲಕ ಪತ್ತೆಹಚ್ಚಿ ಎಷ್ಟು ದಂಡ ಹಾಕುತ್ತಾರೆಂಬುದು ಊಹೆಗೂ ನಿಲುಕದು! ನಾನು ಮಧುಮೇಹ ಹೊಂದಿದ್ದು ಟೆಲಿ ಕೌನ್ಸೆಲಿಂಗ್‌ ಮೂಲಕ ತಪಾಸಣೆ ನಡೆಸಿ ಮನೆಗೇ ಔಷಧ ಸರಬರಾಜಾಗುತ್ತದೆ.

ಹೆಮ್ಮೆಯಾಗುತ್ತಿದೆ
ಭಾರತದಲ್ಲಿ ಕಾನೂನು ಉಲ್ಲಂ ಸುವವರ ವಾಹನ ಮುಟ್ಟುಗೋಲು, ಆನ್‌ಲೈನ್‌ ಪಾಸ್‌, ಅಂಗಡಿಗಳಿಗೆ ಸಮಯ ನಿಗದಿ, ಟೆಲಿ ಕೌನ್ಸೆಲಿಂಗ್‌ ಮೂಲಕ ರೋಗಿಯ ತಪಾಸಣೆ, ಸಾಮಾಜಿಕವಾಗಿ ಅಂತರ ಕಾಪಾಡುವಿಕೆ, ಕಟ್ಟುನಿಟ್ಟಿನ ಕ್ವಾರಂಟೈನ್‌, ಲಾಕ್‌ಡೌನ್‌ ಪಾಲನೆ ನಡೆಯುತ್ತಿರುವುದನ್ನು ನೋಡುವಾಗ ಹೆಮ್ಮೆಯಾಗುತ್ತಿದೆ. ವಿದೇಶದ ಮಾದರಿಯಲ್ಲಿ ಭಾರತದಲ್ಲೂ ನಿಯಮಗಳ ಅನುಷ್ಠಾನವಾಗುತ್ತಿರುವುದು ಊಹೆಗೂ ನಿಲುಕದ್ದು.

ಜೀವವನ್ನು ಪಣಕ್ಕಿಟ್ಟು ತಾಳ್ಮೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬಂದಿಯೂ ಅಭಿನಂದನಾರ್ಹರು.
ನನ್ನ ಗೆಳೆಯ ಕೋಟೇಶ್ವರ ಅಂಕದಕಟ್ಟೆಯ ಅನಿಲ್‌ ಕುಮಾರ್‌ ಅವರು ವಿದೇಶದಿಂದ ಊರಿಗೆ ಹೋಗಿದ್ದು 14 ದಿನಗಳ ಕ್ವಾರಂಟೈನ್‌ ಮುಗಿಸಿದ್ದಾರೆ. ಈ ಅವಧಿಯಲ್ಲಿ ಪಂಚಾಯತ್‌ ಅಧಿಕಾರಿಗಳು, ಇಲಾಖೆಯವರು ಅವರ ಬಗ್ಗೆ ತೋರಿದ ಕಾಳಜಿ, ಒದಗಿಸಿದ ಸೌಕರ್ಯಗಳು ಅತ್ಯದ್ಭುತ. ಇಂತಹ ಸ್ಪಂದನೆಯನ್ನು ಖಂಡಿತ ನಿರೀಕ್ಷಿಸಿರಲಿಲ್ಲ ಎನ್ನುವ ಗೆಳೆಯನ ಮಾತು ಕೇಳಿ ಹೃದಯತುಂಬಿ ಬಂತು. ಭಾರತದ ಕುರಿತು ಹೆಮ್ಮೆ ಪಡಲು ಇನ್ನೇನು ಬೇಕು ಎನ್ನುತ್ತಾರೆ ಮಹ್ಮದ್‌ ನಝರ್‌.

ಲಾಕ್‌ಡೌನ್‌ ನಿಯಮವನ್ನು ಪಾಲಿಸುವ ಮೂಲಕ ಕೋವಿಡ್-19 ಓಡಿಸಲು ಎಲ್ಲರೂ ಬದ್ಧರಾಗಬೇಕು. ಮನೆಯಲ್ಲೇ ಇರುವುದು, ಸಾಮಾಜಿಕವಾಗಿ ದೈಹಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ನಮ್ಮ ಒಳಿತಿಗಾಗಿ.
-ಮಹ್ಮದ್‌ ನಝರ್‌, ದುಬಾೖ

ಟಾಪ್ ನ್ಯೂಸ್

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

2

Kundapura: ಒಂದು ಕರೆಗಾಗಿ 3-4 ಕಿ.ಮೀ. ನಡೆಯಬೇಕು!

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

4-katapady

ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.