ಆರ್ಥಿಕ ಪುನರುತ್ಥಾನದಲ್ಲಿ ಭಾರತದ ಪಾತ್ರ ಹಿರಿದು
"ಗ್ಲೋಬಲ್ ವೀಕ್ 2020'ರಲ್ಲಿ ಮೋದಿ ಬಣ್ಣನೆ
Team Udayavani, Jul 10, 2020, 6:00 AM IST
ಹೊಸದಿಲ್ಲಿ: ಕೋವಿಡ್ ಕುಸಿದಿರುವ ಜಾಗತಿಕ ಆರ್ಥಿಕತೆಯ ಪುನರುತ್ಥಾನದಲ್ಲಿ ಭಾರತದ ಪಾತ್ರ ಮಹತ್ವದ್ದು. ಈ ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತೀಯ ಔಷಧ ವಿಜ್ಞಾನದ ತಾಕತ್ತೇನು ಎಂಬುದು ಜಗತ್ತಿಗೇ ಗೊತ್ತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಭಾರತವೂ ದೈತ್ಯ ಶಕ್ತಿ ಯಾಗಿ ರುವುದರಿಂದ ಇಂಥ ಸಂದರ್ಭದಲ್ಲಿ ವಿಶ್ವದ ಆರ್ಥಿಕ ಸ್ಥಿತಿಯ ಪುನರುತ್ಥಾನವನ್ನು ಭಾರತದೊಂದಿಗೆ ತಳುಕು ಹಾಕುವುದು ಔಚಿತ್ಯಪೂರ್ಣ. ಈ ಸಾಂಕ್ರಾ ಮಿಕ ಕಾಲಘಟ್ಟವು ಭಾರತದ ಫಾರ್ಮಸಿ ಕ್ಷೇತ್ರದ ಶಕ್ತಿಯನ್ನು ವಿಶ್ವಕ್ಕೆ ಮನದಟ್ಟು ಮಾಡಿಕೊಟ್ಟಿದೆ. ಕಡಿಮೆ ಬೆಲೆಯಲ್ಲಿ ಪರಿಣಾಮಕಾರಿ ಔಷಧಗಳನ್ನು ತಯಾರಿಸುವ ಬಗೆ ಯನ್ನು ವಿಶ್ವಕ್ಕೆ ತೋರಿಸಿಕೊಡುವ ಮೂಲಕ ಭಾರತವು ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಹೊಸ ದಿಕ್ಕನ್ನು ತೋರಿಸಿ ಕೊಟ್ಟಿದೆ ಎಂದು ಪ್ರಧಾನಿ ಮೋದಿ “ಇಂಡಿಯಾ ಗ್ಲೋಬಲ್ ವೀಕ್ 2020′ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಈ ಸಮ್ಮೇಳನದಲ್ಲಿ ಸುಮಾರು 5 ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಭಾರತೀಯ ಪ್ರತಿಭೆಗಳ ಮಹತ್ವವನ್ನು ಕೊಂಡಾಡಿದ ಅವರು, ಭಾರತೀಯ ತಂತ್ರಜ್ಞಾನ ಕ್ಷೇತ್ರ ವನ್ನಾಗಲಿ, ತಂತ್ರಜ್ಞರನ್ನಾಗಲಿ ವಿಶ್ವದ ಯಾವುದೇ ದೇಶ ವಾದರೂ ಮರೆಯಲು ಸಾಧ್ಯವೇ? ದಶಕಗಳಿಂದ ಭಾರತೀಯ ತಂತ್ರಜ್ಞರು ಜಾಗತಿಕ ತಂತ್ರಜ್ಞಾನ ರಂಗದಲ್ಲಿ ತಮ್ಮದೇ ಹೆಗ್ಗುರುತುಗಳನ್ನು ಸ್ಥಾಪಿಸಿದ್ದಾರೆ. ಭಾರತವು ಅಂಥ ಅಗಾಧ ಪ್ರತಿಭೆಗಳ ಮಹಾಭಂಡಾರವಾಗಿದ್ದು, ಜಗತ್ತಿಗೆ ಉತ್ತಮೋ ತ್ತಮ ತಂತ್ರಜ್ಞರನ್ನು ನೀಡುತ್ತ ಬಂದಿದೆ ಎಂದಿದ್ದಾರೆ.
ಸಮಸ್ಯೆಗಳನ್ನು ಬಾಹ್ಯ ಬೆಂಬಲವಿಲ್ಲದೆ ಪರಿಹರಿಸಿ ಕೊಳ್ಳುವ ಛಾತಿಯನ್ನು ಭಾರತೀಯರು ಅನಾದಿ ಕಾಲದಿಂದ ರೂಢಿಸಿಕೊಂಡಿದ್ದಾರೆ. ಪ್ರಸ್ತುತ ಕೊರೊನಾ ಪಿಡುಗಿನ ವಿರುದ್ಧ ಭಾರತ ಸೆಣಸುತ್ತಲಿದೆ. ಜನರ ಆರೋಗ್ಯವನ್ನು ಕಾಪಾಡುತ್ತಲೇ ನಾವು ದೇಶದ ಆರ್ಥಿಕ ಆರೋಗ್ಯ ವೃದ್ಧಿಗೂ ಶ್ರಮಿಸಬೇಕಿದೆ ಎಂದಿದ್ದಾರೆ.
ಆರ್ಥಿಕಾಭಿವೃದ್ಧಿಗೆ ಸರಕಾರವು ಪ್ಯಾಕೇಜುಗಳನ್ನು ಘೋಷಿಸಿದ ಬೆನ್ನಿಗೇ ಆರ್ಥಿಕತೆ ಚಿಗುರೊಡೆಯುತ್ತಿದೆ. ಇದು ಅತಿಶಯೋಕ್ತಿಯಲ್ಲ, ಭಾರತೀಯರ ಶ್ರಮದ ಫಲ ಎಂದಿದ್ದಾರೆ.
ಭಾರತದಲ್ಲಿ ಹೂಡಿಕೆಗೆ ಆಹ್ವಾನ
ಭಾರತದಲ್ಲಿ ಹೂಡಿಕೆ ಮಾಡುವ ಸುವರ್ಣಾವ ಕಾಶ ತೆರೆದುಕೊಂಡಿದೆ. ಹೂಡಿಕೆ ಮಾಡಲು ಭಾರತ ನೀಡುವಷ್ಟು ಅನುಕೂಲ ಮತ್ತು ಅವಕಾಶಗಳನ್ನು ವಿಶ್ವದ ಯಾವುದೇ ರಾಷ್ಟ್ರ ನೀಡುತ್ತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶದಲ್ಲಿ ಆರು ವರ್ಷಗಳಲ್ಲಿ ಉದ್ಯಮ ಶೀಲತೆಯನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿ, ಉದ್ಯಮಸ್ನೇಹಿ ವಾತಾವರಣ, ತೆರಿಗೆಗಳಲ್ಲಿ ಗಣನೀಯ ಸುಧಾರಣೆ ಇವೇ ಮುಂತಾದ ಕ್ರಮ ಗಳನ್ನು ಜಾರಿಗೊಳಿಸಲಾಗಿದೆ.
ಇತ್ತೀಚೆಗೆ ಸಾಂಕ್ರಾಮಿಕದಿಂದಾಗಿ ಕಂಗೆಟ್ಟಿದ್ದ ಭಾರತೀಯ ಕೈಗಾರಿಕೆಗಳಿಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳಿಗೆ ಸೂಕ್ತವಾದ ಪ್ಯಾಕೇಜು ಗಳನ್ನು ಸರಕಾರ ಪ್ರಕಟಿಸಿದೆ. ರಕ್ಷಣ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಿಸಲಾಗಿದೆ. ಬಾಹ್ಯಾ ಕಾಶ ತಂತ್ರಜ್ಞಾನ ಕ್ಷೇತ್ರದಲ್ಲೂ ಖಾಸಗಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಸದ್ಬಳಕೆ ಮಾಡಿ ಕೊಂಡು ವಿದೇಶಿ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.