Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
ಆಡಳಿತ ವ್ಯವಸ್ಥೆ ಕಾರ್ಯಕ್ಷಮತೆ ಪರೀಕ್ಷೆಗೆ ಒಡ್ಡಿದ ಒನ್ ಹೆಲ್ತ್ ಮಿಷನ್
Team Udayavani, Nov 4, 2024, 7:15 AM IST
ಶಿವಮೊಗ್ಗ: ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ ಮಹಾಮಾರಿಯಿಂದ ಎಚ್ಚೆತ್ತಿರುವ ಕೇಂದ್ರ ಸರಕಾರ “ಒನ್ ಹೆಲ್ತ್ ಮಿಷನ್’ ಅಡಿ ಆಡಳಿತ ವ್ಯವಸ್ಥೆ ಕಾರ್ಯಕ್ಷಮತೆಯನ್ನು ಪರೀಕ್ಷೆಗೆ ಒಡ್ಡಿದೆ. ಈ ಮೂಲಕ ಮುಂದೆ ಬರಬಹುದಾದ ತುರ್ತು ಪರಿಸ್ಥಿತಿಗೆ ಸಿದ್ಧವಾಗುತ್ತಿದೆ. ಕೇಂದ್ರ ಸರಕಾರದ ಒನ್ ಹೆಲ್ತ್ ಮಿಷನ್ ಈಚೆಗೆ ನಡೆಸಿದ ವಿಷಾಣು ಯುದ್ಧ ಅಭ್ಯಾಸ್ ಕರ್ನಾಟಕಕ್ಕೂ ಅನಿವಾರ್ಯವಾಗಿದೆ.
ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುತ್ತಿರುವ ರಾಜ್ಯಕ್ಕೆ ಈ ವಿಷಾಣು ಯುದ್ಧಾಭ್ಯಾಸ ಅನೇಕ ಸವಾಲುಗಳಿಗೆ ಉತ್ತರ ನೀಡಲಿದೆ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟ ಹಾದು ಹೋಗಿರುವುದರಿಂದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ವೈರಾಣು ಮತ್ತು ಸೂಕ್ಷ್ಮ ರೋಗಾಣುಗಳಿಂದ ಹರಡುವ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ.
50-60 ವರ್ಷ ಕಳೆದರೂ ಕೆಲ ಕಾಯಿಲೆಗಳಿಗೆ ಪರಿಹಾರವೇ ಸಿಕ್ಕಿಲ್ಲ. ಆಗಾಗ್ಗೆ ಸೊ#ಧೀಟಗೊಳ್ಳುವ ಇಂತಹ ಸಾಂಕ್ರಾಮಿಕ ಕಾಯಿಲೆಗಳು ಆಡಳಿತ ವ್ಯವಸ್ಥೆಗೆ ಸವಾಲಾಗಿದೆ ಪರಿಣಮಿಸಿವೆ. ಕೋವಿಡ್ ಮಹಾಮಾರಿ ಭಾರತಕ್ಕೆ ದೊಡ್ಡ ಪಾಠವನ್ನೇ ಕಲಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ ಸಾ ಧಿಸಬೇಕಿರೋದು ಬೆಟ್ಟದಷ್ಟಿದೆ.
ದೇಶದಲ್ಲಿ ಯಾವುದೇ ರೀತಿಯ ಕಾಡು ಪ್ರಾಣಿಗಳು, ಸಾಕು ಪ್ರಾಣಿಗಳು, ಮನುಷ್ಯರಲ್ಲಿ ಹೊಸ ಕಾಯಿಲೆಗಳು ಕಂಡುಬಂದು ಆರೋಗ್ಯ ಎರ್ಮೆಜೆನ್ಸ್ ಉದ್ಭವಿಸಿದರೆ ಅದಕ್ಕೆಂದೇ ರಾಷ್ಟ್ರಮಟ್ಟದಲ್ಲಿ ಎನ್‌ಜೆಒಆರ್‌ಟಿ (ನ್ಯಾಷನಲ್ ಜಾಯಿಂಟ್ ಔಟ್ ಬ್ರೇಕ್ ರೆಸ್ಪಾನ್ಸ್ ಟೀಮ್) ತಂಡ ರಚನೆಯಾಗಿದೆ. ಈ ತಂಡದಲ್ಲಿ ಐಸಿಎಂಆರ್, ಎನ್‌ಸಿಡಿಸಿ, ಡಿಎಎಚ್‌ಡಿ (ಡಿಪಾರ್ಟ್‌ಮೆಂಟ್ ಆಫ್ ಅನಿಮಲ್ ಹಸ್ಬೆಂಡರಿ ಆ್ಯಂಡ್ ಡೈರಿಯಿಂಗ್), ಎಂಒಇಎಫ್ ಆ್ಯಂಡ್ ಸಿಸಿ (ಮಿನಿಸ್ಟರ್ ಆಫ್ ಎನ್ವಿರಾನ್‌ಮೆಂಟ್, ಫಾರೆಸ್ಟ್ ಆ್ಯಂಡ್ ಕ್ಲೈಮೆಟ್ ಚೇಂಜ್), ಐಸಿಎಆರ್ (ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ವರ್ ರಿಸರ್ಚ್) ಅ ಧಿಕಾರಿಗಳು ಇರುತ್ತಾರೆ.
ದೇಶದ ಯಾವುದೇ ಭಾಗದಲ್ಲಿ ಯಾವುದೇ ಕಾಯಿಲೆ ಉಲ½ಣಗೊಂಡರೆ ಎನ್‌ಜೆಒಆರ್‌ಟಿಗೆ ಸಂದೇಶ ರವಾನೆಯಾಗುತ್ತದೆ. ತಕ್ಷಣ ಈ ತಂಡ ಅಲರ್ಟ್ ಆಗುತ್ತದೆ. ಯಾವುದೇ ರಾಜ್ಯದ, ಇಲಾಖೆಗಳ ಅನುಮತಿಗೆ ಕಾಯದೆ ಕಾರ್ಯಾಚರಣೆಗೆ ಇಳಿಯಲು ಈ ತಂಡಕ್ಕೆ ಅವಕಾಶ ಇದೆ.
ಪಶ್ಚಿಮ ಘಟ್ಟಗಳಲ್ಲಿ ಕಾಣಿಸಿಕೊಂಡಿರುವ ಅನೇಕ ಕಾಯಿಲೆಗಳಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ. ಕೆಎಫ್‌ಡಿ ಹಂದಿಗೋಡು, ಜೀಕಾ, ಮಲೇರಿಯಾ, ಆಂಥ್ರಾಕ್ಸ್ ಸೇರಿ ಅನೇಕ ಕಾಯಿಲೆಗಳಿಗೆ ನಮ್ಮ ಆಡಳಿತ ವ್ಯವಸ್ಥೆ ಸರಿಯಾಗಿ, ಸರಿಯಾದ ಸಮಯದಲ್ಲಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಗಳಿವೆ. ಅದಕ್ಕೆಲ್ಲ ಇದು ಪರಿಹಾರ ಒದಗಿಸಬಹುದು.
“ಕರ್ನಾಟಕದ ಸಹ್ಯಾದ್ರಿ ಬೆಟ್ಟಗಳಲ್ಲಿ ಪ್ರಾಣಿಜನ್ಯ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಯಾರೂ ಅಧ್ಯಯನ ಮಾಡಿಲ್ಲ. ಈಗಾಗಲೇ ಕೆಎಫ್‌ಡಿ, ಜೀಕಾ ಸೇರಿ ಅನೇಕ ಕಾಯಿಲೆಗಳು ಕಾಣಿಸಿಕೊಂಡಿವೆ. ಇನ್ನೂ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ರೀತಿ ಅಭ್ಯಾಸ ನಮಗೆ ಬೇಕಿದೆ.”
– ಡಾ| ಎಸ್.ಎಲ್. ಹೋತಿ, ಐಸಿಎಂಆರ್‌ನ ಖ್ಯಾತ ವಿಜ್ಞಾನಿ
ಏನಿದು ವಿಷಾಣು ಯುದ್ಧಾಭ್ಯಾಸ್?
ಏಕಾಏಕಿ ಬರುವ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ನಮ್ಮ ಆರೋಗ್ಯ ವ್ಯವಸ್ಥೆ ಎಷ್ಟರ ಮಟ್ಟಿಗೆ ಶಕ್ತವಾಗಿದೆ ಎಂದು ಪರಿಶೀಲಿಸಲು ಈಚೆಗೆ ಕೇಂದ್ರ ಸರ್ಕಾರದ ಒನ್ ಹೆಲ್ತ್ ಮಿಷನ್ ಅಡಿಯಲ್ಲಿ ವಿಷಾಣು ಯುದ್ಧ ಅಭ್ಯಾಸ್ ಮಾಡಲಾಯಿತು. ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿ ಆ.27ರಿಂದ 31ರವರೆಗೆ ಈ ರೀತಿಯ ಮೋಕ್ ಡ್ರಿಲ್ (ಸಾಂಕ್ರಾಮಿಕ ರೋಗ ಸ್ಫೋಟ ಪತ್ತೆ ಅಣಕು ಪರೀಕ್ಷೆ) ಅನ್ನು ಈಚೆಗೆ ನಡೆಸಲಾಗಿತ್ತು.
ಈ ಡ್ರಿಲ್‌ನಲ್ಲಿ ಕಾಯಿಲೆ ಬಂದ ಪ್ರದೇಶದಲ್ಲಿ ಯಾವ ರೀತಿ ಸ್ಯಾಂಪಲ್ ಪಡೆಯುವುದು, ಅದನ್ನು ಹೇಗೆ ಲ್ಯಾಬ್‌ಗ ತಲುಪಿಸುವುದು, ಎಷ್ಟು ಸಮಯದೊಳಗೆ ವರದಿ ಬಂತು, ರೋಗಿಗೆ ಹೇಗೆ ಉಪಚರಿಸಲಾಯಿತು, ಔಷ ಧಿ, ಆಸ್ಪತ್ರೆ ಲಭ್ಯವಿದೆಯೇ, ವಿವಿಧ ಇಲಾಖೆಯ ಜವಾಬ್ದಾರಿ ಏನು ಎಂಬ ಅನೇಕ ಅಂಶಗಳನ್ನು ಪರಿಶೀಲಿಸಲಾಗಿದೆ. ಆಡಳಿತ ಯಂತ್ರ ಯಾವ ಹಂತದಲ್ಲಿ ಸವಾಲುಗಳು ಎದುರಾಗುತ್ತವೆ ಎಂಬುದನ್ನು ನೋಟ್ ಮಾಡಿಕೊಳ್ಳಲಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನ್ಯಾಷನಲ್ ಒನ್ ಹೆಲ್ತ್ ಮಿಷನ್ ಕಾರ್ಯೋನ್ಮುಖವಾಗಿದೆ.
–ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.