Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಅಕ್ರಮ, ಅಜೀಂ ಪ್ರೇಮ್‌ಜೀ ಫೌಂಡೇಶನ್ ನಡೆಸಿದ ಪರಿಶೀಲನೆ ವೇಳೆ ಅಕ್ರಮ ಬಯಲು
Team Udayavani, Nov 8, 2024, 7:40 AM IST
ಬೆಂಗಳೂರು: ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ವಾರದ ಆರು ದಿನಗಳಲ್ಲಿ ಮೊಟ್ಟೆ ನೀಡುವ ಕಾರ್ಯಕ್ರಮದಲ್ಲಿ ಭಾರೀ ಅಕ್ರಮ ಬೆಳಕಿಗೆ ಬಂದಿದೆ. ಮಕ್ಕಳಿಗೆ ಮೊಟ್ಟೆಯನ್ನು ನೀಡದೆ, ಮೊಟ್ಟೆ ತಿನ್ನದ ಮಕ್ಕಳಿಗೆ ಆದ್ಯತೆಯ ಮೇರೆಗೆ ಬಾಳೆಹಣನ್ನೂ ನೀಡದೆ ಕೇವಲ ಶೇಂಗಾ ಚಿಕ್ಕಿ ನೀಡಿರುವ ಹಲವು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಮೊಟ್ಟೆ ನೀಡುವ ಕಾರ್ಯಕ್ರಮದ ಮೇಲೆ ಹೆಚ್ಚಿನ ನಿಗಾ ಇಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ.
ಪಿಎಂ ಪೋಷಣ್ ಯೋಜನೆಯಡಿ ರಾಜ್ಯ ಸರಕಾರವು ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ವಾರಕ್ಕೆ 2 ದಿನ ಮೊಟ್ಟೆ ನೀಡುತ್ತಿದೆ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಮತ್ತು ಚಿಕ್ಕಿ ನೀಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅಜಿಂ ಪ್ರೇಮ್‌ಜೀ ಪ್ರತಿಷ್ಠಾನ (ಎಪಿಎಫ್)ವು 3 ವರ್ಷಗಳ ಕಾಲ ಮಕ್ಕಳಿಗೆ ವಾರದ 6 ದಿನ ಮೊಟ್ಟೆ ನೀಡಲು ಮುಂದೆ ಬಂದಿದೆ. ಇದರಿಂದ 40 ಲಕ್ಕಕ್ಕೂ ಹೆಚ್ಚು ಮಕ್ಕಳಿಗೆ ವಾರದ 6 ದಿನ ಮಧ್ಯಾಹ್ನದ ಬಿಸಿಯೂಟದ ಜತೆಗೆ ಒಂದು ಮೊಟ್ಟೆ ಲಭ್ಯವಾಗುತ್ತಿದೆ. ಅಂದರೆ ವರ್ಷಕ್ಕೆ 300 ಮೊಟ್ಟೆಗಳನ್ನು ನೀಡಲಾಗುತ್ತದೆ. 100 ಮೊಟ್ಟೆಗಳ ವೆಚ್ಚವನ್ನು ಸರಕಾರ ಭರಿಸಿದರೆ 200 ಮೊಟ್ಟೆಗಳ ವೆಚ್ಚವನ್ನು ಎಪಿಎಫ್ ಭರಿಸುತ್ತದೆ.
ಈ ಕಾರ್ಯಕ್ರಮ ಕಳೆದ ಸೆಪ್ಟಂಬರ್‌ನಿಂದ ಜಾರಿಯಾಗಿದೆ. ಆದರೆ ಹಲವು ಶಾಲೆಗಳಲ್ಲಿ ಮೊಟ್ಟೆ ವಿತರಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೊಟ್ಟೆಯ ಬದಲು ಚಿಕ್ಕಿ ನೀಡಿ ಅದರಲ್ಲೂ ನಿಗದಿತ ತೂಕಕ್ಕಿಂತ ಕಡಿಮೆ ತೂಕದ ಚಿಕ್ಕಿ ನೀಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲು ನಾಲ್ಕು ವಿಭಾಗದ 357 ಶಾಲೆಗಳಿಗೆ ಭೇಟಿ ನೀಡಿದ ಎಪಿಎಫ್ 66 ಶಾಲೆಗಳಲ್ಲಿ ಮೊಟ್ಟೆಯನ್ನು ಈವರೆಗೆ ವಿತರಿಸಿಲ್ಲ ಎಂಬುದನ್ನು ಪತ್ತೆ ಹಚ್ಚಿದ್ದು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ತಾನು ಭೇಟಿ ನೀಡಿದ ಶಾಲೆಗಳಲ್ಲಿ ಶೇ. 64 ಮೊಟ್ಟೆ ಸ್ವೀಕರಿಸುವ ವಿದ್ಯಾರ್ಥಿಗಳಿದ್ದರೂ ಅವರಿಗೆ ಮೊಟ್ಟೆ ನೀಡದೆ ಚಿಕ್ಕಿ, ಬಾಳೆಹಣ್ಣು ನೀಡಲಾಗಿದೆ. ಹಾಗೆಯೇ ಮೊಟ್ಟೆ ತಿನ್ನದ ಮಕ್ಕಳಿಗೆ ಮೊದಲ ಆದ್ಯತೆಯಾಗಿ ಬಾಳೆಹಣ್ಣು ನೀಡಬೇಕಾಗಿತ್ತು, ಆದರೆ ಬಾಳೆಹಣ್ಣು ನೀಡದೆ ಚಿಕ್ಕಿ ನೀಡಲಾಗಿದೆ. ಚಿಕ್ಕಿಯ ತೂಕ 35 ಗ್ರಾಂನಿಂದ 40 ಗ್ರಾಂ ಇರಬೇಕೆಂಬ ನಿಯಮವಿದ್ದರೂ ಅದನ್ನು ಮುರಿದು 30 ಗ್ರಾಂ ಗಿಂತ ಕಡಿಮೆ ತೂಕದ ಚಿಕ್ಕಿ ವಿತರಿಸಲಾಗಿದೆ ಎಂದು ಎಪಿಎಫ್ ಶಿಕ್ಷಣ ಇಲಾಖೆಗೆ ವರದಿ ನೀಡಿದೆ.
ಲೋಪವಾಗಿರುವುದು ಗಮನಕ್ಕೆ ಬಂದಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಆ್ಯಪ್ ಅಳವಡಿಕೆ ಮತ್ತು ದಿಢೀರ್ ಭೇಟಿ ಕ್ರಮ ಕೈಗೊಳ್ಳಲಿದ್ದೇವೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಡಾ| ಕೆ.ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.
98 ಅಧಿಕಾರಿಗಳಿಗೆ ನೋಟಿಸ್: ಅಕ್ರಮ ತಡೆಗೆ ನೋಟಿಸ್
ಕರ್ತವ್ಯ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ 50 ಬಿಇಒಗಳು ಮತ್ತು 48 ಪಿಎಂ ಪೋಷಣ್‌ನ ಸಹಾಯಕ ನಿರ್ದೇಶಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಜತೆಗೆ ಮಕ್ಕಳಿಗೆ ಮೊಟ್ಟೆ ವಿತರಣೆಯನ್ನು ಖಾತರಿ ಪಡಿಸಲು ಆ್ಯಪ್ ಅಭಿವೃದ್ಧಿ ಪಡಿಸಿ ಅದರಲ್ಲಿ ಮೊಟ್ಟೆ ವಿತರಣೆಯ ದೈನಂದಿನ ಚಿತ್ರ ಮತ್ತು ಮಾಹಿತಿ ಅಪ್‌ಡೇಟ್ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದರ ಜತೆಗೆ ಶಿಕ್ಷಣ ಇಲಾಖೆಯು ತನ್ನದೇ ಅದ ತಂಡಗಳನ್ನು ರಚಿಸಲಿದ್ದು ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಮೊಟ್ಟೆ ವಿತರಣೆಯ ಬಗ್ಗೆ ಪರಿಶೀಲನೆ ನಡೆಸಲಿದೆ.
-ರಾಕೇಶ್ ಎನ್.ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪೋಕ್ಸೋ ಕಾಯ್ದೆಯಡಿ ಇಬ್ಬರು ಆರೋಪಿಗಳ ಬಂಧನ
ವಿಜಯಪುರ: ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ… ಸಾಧು-ಸಂತರ ಮೂಲಕ ಈಶ್ವರಪ್ಪ ಶಕ್ತಿ ಪ್ರದರ್ಶನ
Kalaburagi: MLC ಬಿ.ಜಿ. ಪಾಟೀಲ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ: ಕೆಲ ಕಾಲ ಆತಂಕ
Gundlupete: ಗೂಡ್ಸ್ ವಾಹನ – ಬೈಕ್ ನಡುವೆ ಅಪಘಾತ: ಬೈಕ್ ಸವಾರನ ಕಾಲಿಗೆ ಗಂಭೀರ ಗಾಯ
Hubballi: ಬೆಳ್ಳಂಬೆಳಗ್ಗೆ ಗುಂಡಿನ ಸದ್ದು… ಗುಜರಾತ್ ಮೂಲದ ಇಬ್ಬರು ದರೋಡೆಕೋರರ ಬಂಧನ
MUST WATCH
ಹೊಸ ಸೇರ್ಪಡೆ
Lokasabha: ಕೆಲವು ನಾಯಕರಿಗೆ ಮನೆ ನವೀಕರಣ, ಸ್ಟೈಲಿಶ್ ಶವರ್ಗಳೇ ಆದ್ಯತೆ: ಮೋದಿ ಟಾಂಗ್
Bantwala: ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಮೇಲೆ ಫೈರಿಂಗ್
ನರೇಗಾ ಯೋಜನೆ ಸದ್ಬಳಕೆ: ಗೋವಿನಜೋಳ ಬೆಳೆಯುತ್ತಿದ್ದವರು ಕುರಿದೊಡ್ಡಿ ಕಟ್ಟಿದರು…
Game Changer : ಈ ದಿನ ಒಟಿಟಿಗೆ ಬರಲಿದೆ ಶಂಕರ್ – ರಾಮ್ಚರಣ್ರ ʼಗೇಮ್ ಚೇಂಜರ್ʼ
Mystery: ಒಂದೇ ರಾತ್ರಿಯಲ್ಲಿ ಸಾವಿರಾರು ಕುಟುಂಬಗಳು ಕಣ್ಮರೆಯಾದ ನಿಗೂಢ ಗ್ರಾಮ ಇದು…