![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Apr 27, 2021, 11:31 AM IST
ಬಾಲಿ (ಇಂಡೋನೇಷ್ಯಾ) : ಕೋವಿಡ್ ಸೋಂಕು ಪ್ರಪಂಚದಾದ್ಯಂತ ತಾಂಡವಾಡುತ್ತಿದೆ. ಇದೇ ಹಿನ್ನೆಲೆಯಲ್ಲಿ ನಾನಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದ್ರೆ ಇಲ್ಲಿಬ್ಬರು ಸೋಷಿಯಲ್ ಮೀಡಿಯಾ ಬಳಕೆದಾರರು ಮುಖಕ್ಕೆ ಮಾಸ್ಕ್ ಹಾಕದೆ ಅಧಿಕಾರಿಗಳಿಗೆ ಫೂಲ್ ಮಾಡಲು ಹೋಗಿ ಅವರೇ ಸಿಕ್ಕಿ ಬಿದ್ದಿರುವ ಘಟನೆ ಇಂಡೋನೇಷ್ಯಾದ ಬಾಲಿ ಎಂಬಲ್ಲಿ ನಡೆದಿದೆ.
ಬಾಲಿ ಪ್ರದೇಶದ ಸೋಷಿಯಲ್ ಮೀಡಿಯಾ ಸ್ಟಾರ್ ಜೋಶ್ ಪಾಲರ್ ಲಿನ್ ಮತ್ತು ಲಿಯಾ ಸೆ ಎಂಬುವವರು ಮಾಸ್ಕ್ ಹಾಕುವ ಬದಲು ಮುಖಕ್ಕೆ ಮಾಸ್ಕ್ ರೀತಿ ಬಣ್ಣ ಬಳಿದುಕೊಂಡು ಅಧಿಕಾರಿಗಳಿಗೆ ಫೂಲ್ ಮಾಡಲು ಹೋಗಿದ್ದರು. ಇದನ್ನು ತಿಳಿದ ಅಧಿಕಾರಿಗಳು ಈ ಇಬ್ಬರ ಪಾಸ್ ಪೋರ್ಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಇಬ್ಬರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಹರಿದಾಡಿದ್ದು, ಆ ವಿಡಿಯೋದಲ್ಲಿ ಜೋಶ್ ಪಾಲರ್ ಲಿನ್ ಮತ್ತು ಲಿಯಾ ಸೆ ಎಂಬುವವರು ಮಾಸ್ಕ್ ಇಲ್ಲದೆ ಸೂಪರ್ ಮಾರ್ಕೇಟ್ ಗೆ ಹೋಗಿದ್ದಾರೆ. ಅಲ್ಲಿನ ಸೆಕ್ಯುರಿಟಿ ಇವರನ್ನು ತಡೆದಿದ್ದಾನೆ. ಅದಾದ ನಂತರ ಅಲ್ಲಿಂದ ವಾಪಸ್ಸಾದ ಈ ಇಬ್ಬರು ಮುಖಕ್ಕೆ ಮಾಸ್ಕ್ ರೀತಿ ಬಣ್ಣ ಬಳಿದುಕೊಂಡು ಮತ್ತೆ ಅದೇ ಮಾರ್ಕೇಟ್ ಗೆ ಹೋದಾಗ ಅಲ್ಲಿದ್ದ ಸೆಕ್ಯುರಿಟಿ ಈ ಇಬ್ಬರನ್ನು ಒಳಗಡೆ ಬಿಟ್ಟಿದ್ದಾನೆ.
ಈ ವಿಡಿಯೋ ನೋಡಿದ ಬಾಲಿ ಪ್ರದೇಶದ ಸ್ಥಳೀಯರು ಈ ಇಬ್ಬರು ಸೋಷಿಯಲ್ ಮೀಡಿಯಾ ಸ್ಟಾರ್ ಗಳನ್ನು ತರಟೆಗೆ ತೆಗೆದುಕೊಂಡಿದ್ದಾರೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.