ಮೊಹಾಲಿಯಲ್ಲಿ ನಡೆದದ್ದು ಕೊನೆಯ ಪಂದ್ಯವೇ?
15 ಕಿ.ಮೀ. ದೂರದಲ್ಲೇ ತಲೆ ಎತ್ತುತ್ತಿದೆ ನೂತನ ಸ್ಟೇಡಿಯಂ!
Team Udayavani, Mar 8, 2022, 7:25 AM IST
ಮೊಹಾಲಿ: ಭಾರತದ ಖ್ಯಾತ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾದ, ಅನೇಕ ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿಯಾದ ಮೊಹಾಲಿಯ “ಐ.ಎಸ್. ಬಿಂದ್ರಾ ಸ್ಟೇಡಿಯಂ’ನಲ್ಲಿನ್ನು ಅಂತಾರಾಷ್ಟ್ರೀಯ ಪಂದ್ಯ ನಡೆಯುವುದಿಲ್ಲವೇ? ಭಾರತ-ಶ್ರೀಲಂಕಾ ನಡುವೆ ರವಿವಾರ ಮುಗಿದ ಟೆಸ್ಟ್ ಮುಖಾಮುಖಿಯೇ ಇಲ್ಲಿನ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೇ? ಚಂಡೀಗಢದ ಪತ್ರಿಕೆಯೊಂದರ ವರದಿ ಪ್ರಕಾರ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ “ಹೌದು’!
ಕಾರಣ, ಮೊಹಾಲಿಯಿಂದ 15 ಕಿ.ಮೀ. ದೂರದ ಮುಲ್ಲಾನ್‌ಪುರದಲ್ಲಿ ತಲೆ ಎತ್ತಿರುವ ಸುಸಜ್ಜಿತ ನೂತನ ಕ್ರೀಡಾಂಗಣ. ಮೊಹಾಲಿ ಸ್ಟೇಡಿಯಂಗೆ ಹೋಲಿಸಿದರೆ ಇಲ್ಲಿನ ವೀಕ್ಷಕರ ಸಾಮರ್ಥ್ಯ 10 ಸಾವಿರದಷ್ಟು ಜಾಸ್ತಿ. ಅಲ್ಲಿ 25 ಸಾವಿರವಾದರೆ, ಇಲ್ಲಿ 35 ಸಾವಿರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಬಹುದು. ಪಾರ್ಕಿಂಗ್ ಸ್ಥಳಾವಕಾಶವೂ ಹೆಚ್ಚು ವಿಸ್ತಾರವಾಗಿದೆ. ಡ್ರೈನೇಜ್ ಸೌಕರ್ಯವೂ ಅದ್ಭುತ ಮಟ್ಟದಲ್ಲಿದೆ. ಮಳೆ ನಿಂತ ಅರ್ಧ ಗಂಟೆಯಲ್ಲೇ ಪಂದ್ಯವನ್ನು ಆರಂಭಿಸಬಹುದು.
ಈ ಎಲ್ಲ ಕಾರಣಗಳಿಂದ ಮೊಹಾಲಿಯ ಐ.ಎಸ್.ಬಿಂದ್ರಾ ಸ್ಟೇಡಿಯಂ ಇತಿಹಾಸ ಸೇರು ವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಬಹುಶಃ ಪಂಜಾಬ್‌ಗ ಮುಂದಿನ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ಲಭಿಸುವ ವೇಳೆ ಮುಲ್ಲಾನ್‌ಪುರದ ಸ್ಟೇಡಿಯಂ ಸಜ್ಜಾದೀತು.
ಇದರ ನಿರ್ಮಾಣ ಕಾರ್ಯ 2013-14ರಲ್ಲೇ ಆರಂಭವಾಗಿತ್ತು. ಮೊದಲ ಹಂತದ ಕಾಮಗಾರಿ ಸಂಪೂರ್ಣ ಮುಗಿದಿದೆ. ದ್ವಿತೀಯ ಹಂತ ಇನ್ನೇನು ಮುಗಿಯಲಿದೆ. ಈಗಾಗಲೇ ಇಲ್ಲಿ ರಾಜ್ಯ ಮಟ್ಟದ ಕೆಲವು ಕ್ರಿಕೆಟ್ ಪಂದ್ಯಗಳನ್ನು ಆಡಲಾಗಿದೆ. ಎರಡು ವಿಶಾಲ ಮೈದಾನಗಳನ್ನು ಹೊಂದಿರುವುದು ಈ ಸ್ಟೇಡಿಯಂನ ಹೆಗ್ಗಳಿಕೆ.
ಹರ್ಯಾಣದಲ್ಲೂ ಸ್ಟೇಡಿಯಂ
ಪಕ್ಕದ ಹರ್ಯಾಣದಲ್ಲೂ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವ ಯೋಜನೆ ಇದೆ. ಇಲ್ಲಿ ವಿಶ್ವ ದರ್ಜೆಯ ಕ್ರೀಡಾಂಗಣವಿಲ್ಲ. ಚಂಡೀಗಢದ ಸೆಕ್ಟರ್-16 ಸ್ಟೇಡಿಯಂ ಸಾಮಾನ್ಯ ಮಟ್ಟದ ಕ್ರೀಡಾಂಗಣ. 2006ರಲ್ಲಿ ಭಾರತ- ಆಸ್ಟ್ರೇಲಿಯ ನಡುವೆ ನಡೆದ ಏಕದಿನ ಪಂದ್ಯದ ಬಳಿಕ ಇದಕ್ಕೆ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ಲಭಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.