ಶುಶ್ರೂಷಕಿಯರಿಗೆ ನಮನ : ಇಂದು ದಾದಿಯರ ದಿನ


Team Udayavani, May 12, 2021, 7:30 AM IST

ಶುಶ್ರೂಷಕಿಯರಿಗೆ ನಮನ : ಇಂದು ದಾದಿಯರ ದಿನ

ಇಡೀ ನಾಡು ಆತಂಕದಿಂದ ಇರುವಾಗ ಧೈರ್ಯ ತುಂಬಿದಾಕೆ ದಾದಿ; ಬದುಕಿನ ಭರವಸೆ ಕಳೆದುಕೊಂಡು ಕೈ ಚೆಲ್ಲಿದಾಗ ಆಸರೆಯಾದವಳು ದಾದಿ; ಕಾಲದ ಚಕ್ರದ ಜತೆ ಪೈಪೋಟಿಗಿಳಿದು ಜಗದ ಆರೋಗ್ಯ ನೋಡಿಕೊಂಡವಳು ದಾದಿ. ಅಂಥ ದೇವತಾ ಸ್ವರೂಪಿಯರ ದಿನ ಇಂದು. ನಾಡಿನ ಪ್ರಮುಖ ವೈದ್ಯರು ತಮ್ಮ ಸಹೋದ್ಯೋಗಿ ನರ್ಸ್‌ಗಳಿಗೆ ಸಲ್ಲಿಸಿರುವ ನುಡಿ ಗೌರವ ಇದು.

ಭರವಸೆಯ ಹೊಂಗಿರಣ
ಶುಶ್ರೂಷಕಿಯರು ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗ. ವೈದ್ಯರು ಮತ್ತು ರೋಗಿಗಳ ನಡುವೆ ಅವರು ರಾಯಭಾರಿ ಗಳಾಗಿ ಕೆಲಸ ಮಾಡುತ್ತಾರೆ. ರೋಗಿಯ ನಾಡಿಮಿಡಿತ, ಅವರ ಚೇತರಿಕೆಯ ಹಾದಿ ವೈದ್ಯರಿಗಿಂತಲೂ ಶುಶ್ರೂಷಕಿಯರಿಗೆ ಬೇಗ ತಿಳಿಯುತ್ತದೆ. ತಾಯಿ ಹೃದಯ ಇದ್ದರೆ ಮಾತ್ರ ನಿಸ್ವಾರ್ಥ ಸೇವೆ ಸಾಧ್ಯ. ರೋಗಿಗಳ ಜತೆಗೆ ವೈದ್ಯರಿಗಿಂತಲೂ ಹೆಚ್ಚು ಬಾಂಧವ್ಯ ಹೊಂದಿರುವವರು ಇವರು. ಅವರು ರೋಗಿಗಳ ಪಾಲಿನ ಭರವಸೆಯ ಹೊಂಗಿರಣವಾಗಿದ್ದಾರೆ.

ಕಳೆದ 14 ತಿಂಗಳುಗಳಿಂದ ಪ್ರಾಣ ಒತ್ತೆ ಇರಿಸಿ ಕೊರೊನಾ ರೋಗಿಗಳ ನಿರಂತರ ಸೇವೆ ಮಾಡುತ್ತಿದ್ದಾರೆ. ವೈದ್ಯರು ದಿನಕ್ಕೆ ಒಮ್ಮೆ ಸೋಂಕುಪೀಡಿತರ ವಾರ್ಡ್‌ಗೆ ತೆರಳಿದರೆ ಇವರು ದಿನಪೂರ್ತಿ ಅಲ್ಲೇ ಇದ್ದು, ಆರೈಕೆ ಮಾಡುತ್ತಾರೆ. ಸದ್ಯ ಕೊರೊನಾ ಸೇನಾನಿಗಳ ಪೈಕಿ ಮೊದಲ ಪಂಕ್ತಿಯಲ್ಲಿದ್ದಾರೆ.

ಆದರೆ ಅವರಿಗೆ ಸಿಗಬೇಕಾದ ಗೌರವ, ಸ್ಥಾನಮಾನ ಸಿಗುತ್ತಿಲ್ಲ. ಸರಕಾರ ಇನ್ನಾದರೂ ಶುಶ್ರೂಷಕಿಯರ ಮಹತ್ವನ್ನು ಅರಿತು ಶುಶ್ರೂಷಕಿಯರ ದಿನವನ್ನು ಆಚರಿಸಬೇಕು. ಪ್ರಶಸ್ತಿ, ಗೌರವ ಧನ ನೀಡಿ ಅವರ ಸೇವೆಯನ್ನು ಸ್ಮರಿಸಬೇಕು. ಸಮಾಜವು ಕೂಡ ಅವರನ್ನು ವೈದ್ಯರಷ್ಟೇ ಗೌರವಿಸಬೇಕು.
– ಡಾ| ಸಿ.ಎನ್‌. ಮಂಜುನಾಥ್‌, ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ

 ಶುಶ್ರೂಷಕಿಯರ ಪರಿಶ್ರಮ, ತ್ಯಾಗವಿದೆ
ವೈದ್ಯರು ಆರೋಗ್ಯ ಸೇವೆಯ ಮೆದುಳಾದರೆ ಶುಶ್ರೂಷಕಿ ಯರು ಅದರ ಹೃದಯ ವಾಗಿರು ತ್ತಾರೆ. ಒಬ್ಬ ರೋಗಿ ಗುಣಮುಖರಾಗುವ ಹಿಂದೆ ಶುಶ್ರೂಷಕಿಯರ ಪರಿಶ್ರಮ ತ್ಯಾಗ ಹಾಗೂ ಸಹಾನುಭೂತಿ ಅಡಗಿರುತ್ತದೆ. ಹಗಲು -ರಾತ್ರಿ ರೋಗಿಯ ಜತೆಯಲ್ಲಿ ಇದ್ದು ಅವರ ಪ್ರತಿಯೊಂದು ಬೇಕು -ಬೇಡಗಳ ಬಗ್ಗೆ ಗಮನಹರಿಸಿ ಅವರ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುವ ಶುಶ್ರೂಷಕಿಯರು ತಾಳ್ಮೆಯ ಪ್ರತೀಕವಾಗಿರುತ್ತಾರೆ.
– ಡಾ| ನಿಕಿನ್‌ ಶೆಟ್ಟಿ , ಫಿಸಿಷಿಯನ್‌, ಜಿಲ್ಲಾ ಆಸ್ಪತ್ರೆ, ಉಡುಪಿ

ಪ್ರಾಣ ಪಣಕ್ಕಿಟ್ಟು ಆರೈಕೆ ಮಾಡುವ ದೇವತೆಗಳು
ಶುಶ್ರೂಷಕಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಅವರಿಲ್ಲದೆ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆ, ಆರೈಕೆ ಕಷ್ಟಸಾಧ್ಯ. ಒಬ್ಬ ವೈದ್ಯ ರೋಗಿಗೆ 5ರಿಂದ 10 ನಿಮಿಷ ಸಮಯ ನೀಡಬಹುದು. ಆದರೆ ಶುಶ್ರೂಷಕಿಯರು ದಿನಪೂರ್ತಿ ಆರೈಕೆ ಮಾಡುತ್ತಾರೆ. ರೋಗಿಯ ಚೇತರಿಕೆಯಲ್ಲಿ ವೈದ್ಯರಿಗಿಂತ ಹೆಚ್ಚಿನ ಕೊಡುಗೆ ಇವರದು. ಅದರಲ್ಲೂ ಕೊರೊನಾದಂತಹ ಸಂದರ್ಭದಲ್ಲಿ ತಮ್ಮ ಮತ್ತು ಕುಟುಂಬದವರ ಪ್ರಾಣವನ್ನು ಪಣಕ್ಕಿಟ್ಟು ನಿಸ್ವಾರ್ಥವಾಗಿ ಸೋಂಕುಪೀಡಿತರ ಆರೈಕೆ ಮಾಡುತ್ತಿರುವ ದೇವತೆಗಳು ಇವರು. ಸೇವಾ ಮನೋಭಾವ, ವೃತ್ತಿ ನೈತಿಕತೆ, ಮಾನವೀಯ ಗುಣ, ತಾಯಿಯಂಥ ಆರೈಕೆಯಿಂದಾಗಿ ಭಾರತೀಯ ಶುಶ್ರೂಷಕಿಯರಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ.
-ಡಾ| ಸುದರ್ಶನ್‌ ಬಲ್ಲಾಳ್‌, ಅಧ್ಯಕ್ಷರು, ಮಣಿಪಾಲ್‌ ಆಸ್ಪತ್ರೆಗಳು

ರೋಗಿ-ವೈದ್ಯರ ನಡುವಿನ ಕೊಂಡಿ
ನರ್ಸಿಂಗ್‌ ವೃತ್ತಿಗೆ ಅದರದ್ದೇ ಆದ ಘನತೆ ಇದೆ. ರೋಗಿ ಮತ್ತು ವೈದ್ಯರ ನಡುವೆ ಕೊಂಡಿಯಾಗಿ ಅವರು ಕೆಲಸ ನಿರ್ವಹಿ ಸುತ್ತಾರೆ. ಈ ವೃತ್ತಿಯಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಬಹಳ ಮುಖ್ಯ. ಅದೆಷ್ಟೋ ಸಂದರ್ಭಗಳಲ್ಲಿ ರೋಗಿಗಳು ತನ್ನ ರೋಗದ ಗೌಪ್ಯವಿಚಾರವನ್ನು ದಾದಿಯರ ಜತೆ ಹಂಚಿಕೊಳ್ಳುತ್ತಾರೆ. ರೋಗಿಯೊಡನೆ ತಾಳ್ಮೆಯಿಂದ ವರ್ತಿಸಿ ತನ್ನ ವೃತ್ತಿಗೆ ಗೌರವ ಸಲ್ಲಿಸುತ್ತಾರೆ.
ಸಮಾಜದಲ್ಲಿ ಶುಶ್ರೂಷಕಿಯರಿಗೆ ಮತ್ತಷ್ಟು ಗೌರವ ಸಿಗಬೇಕಿದೆ. ಇಂದಿನ ಕೊರೊನಾ ಸಮಯದಲ್ಲಿ ನರ್ಸ್‌ಗಳ ಸೇವೆ ಅನನ್ಯ ಅದೆಷ್ಟೋ ಸಂದರ್ಭದಲ್ಲಿ ಮನೆಗಳಿಗೂ ತೆರಳದೆ ದಿನವಿಡೀ ಆಸ್ಪತ್ರೆಗಳಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಾಜ ಅವರಿಗೆ ಸರಿಯಾದ ರೀತಿಯಲ್ಲಿ ಗೌರವ ನೀಡಬೇಕಿದೆ.
– ಡಾ| ಜಿ.ಜಿ. ಲಕ್ಷ್ಮಣ ಪ್ರಭು, ಮೂತ್ರರೋಗ ತಜ್ಞರು, ಮುಖ್ಯಸ್ಥರು, ಯುರಾಲಜಿ ವಿಭಾಗ, ಕೆಎಂಸಿ, ಮಂಗಳೂರು

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.