ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್ ನಿಧನ
ಮೃತದೇಹ ನ.15ರ ಶುಕ್ರವಾರ ಮೈಸೂರಿಗೆ ಬರುವ ಸಾಧ್ಯತೆ ಇದೆ
Team Udayavani, Nov 13, 2024, 9:54 AM IST
■ ಉದಯವಾಣಿ ಸಮಾಚಾರ
ಮೈಸೂರು: ಮೈಸೂರು ಮೂಲದ ಅಂತಾರಾಷ್ಟ್ರೀಯ ಯೋಗ ಗುರು ಶರತ್ ಜೋಯಿಸ್ (53) ಅಮೆರಿಕಾದ ವರ್ಜೀನಿಯಾದಲ್ಲಿ ಹೃದಯಾಘಾತದಿಂದ ನಿಧನರಾದರು. ಹೆಸರಾಂತ ಯೋಗಗುರು ಮೈಸೂರು ಮೂಲದ ಕೆ.ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ ಶರತ್ ಜೋಯಿಸ್ ಅವರು ಅಮೆರಿಕಾದಲ್ಲಿ ನೆಲೆಸಿದ್ದರು.
ಖ್ಯಾತ ಗಾಯಕರಾದ ಮಡೋನಾ, ಸ್ಟಿಂಗ್, ಖ್ಯಾತ ನಟಿ ಗ್ವಿನತ್ ಪಲ್ಟ್ರೋ ಸೇರಿ ಹಲವು ಖ್ಯಾತ ನಾಮರಿಗೆ ಶರತ್ ಅವರು ಅಷ್ಟಾಂಗ ಯೋಗ ಕಲಿಸಿದ್ದರು.
ಯೋಗ ಗುರುವಾಗಿ ತಾತನ ಹಾದಿಯಲ್ಲೇ ಸಾಗಿದ್ದ ಅವರು, ಅಮೆರಿಕದ ವರ್ಜೀನಿಯಾದಲ್ಲಿ ಯೋಗ ತರಗತಿ ನಡೆಸುವಾಗ ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾದರು. ಮೃತರಿಗೆ ತಾಯಿ, ಪತ್ನಿ ಹಾಗೂ ಪುತ್ರ, ಪುತ್ರಿ ಇದ್ದಾರೆ. ಶರತ್ ಜೋಯಿಸ್ ಅವರ ಪತ್ನಿ ಹಾಗೂ ಪುತ್ರ ವರ್ಜೀನಿಯಾಗೆ ಮಂಗಳವಾರ ತೆರಳಿದ್ದು, ಮೃತದೇಹ ನ.15ರ ಶುಕ್ರವಾರ ಮೈಸೂರಿಗೆ ಬರುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೈಸೂರಿನ ವಿವಿ ಮೊಹಲ್ಲಾದಲ್ಲಿ ಶರತ್ ಜೋಯಿಸ್ ಅವರ ಕುಟುಂಬಸ್ಥರು ವಾಸ ವಿದ್ದು, ಶರತ್ ಜೋಯಿಸ್ ಅವರು 1971ರ
ಸೆ.29ರಂದು ಮೈಸೂರಿನಲ್ಲಿ ಸರಸ್ವತಿ (ಪಟ್ಟಾಭಿ ಜೋಯಿಸ್ ಅವರ ಪುತ್ರಿ) ಮತ್ತು ರಂಗಸ್ವಾಮಿ ದಂಪತಿಯ ಮಗನಾಗಿ ಜನಿಸಿ
ದರು. ಬಾಲ್ಯದಿಂದಲೇ ಯೋಗದ ಕುರಿತಂತೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು, 19ನೇ ವಯಸ್ಸಿನಲ್ಲಿ ಅಧಿಕೃತವಾಗಿ ಯೋಗದ
ಪ್ರಯಾಣ ಆರಂಭಿಸಿ, ನಸುಕಿನ 3.30ಕ್ಕೆ ಎದ್ದು ಯೋಗಾಭ್ಯಾಸ ಮಾಡುತ್ತಿದ್ದರು.
ಅಷ್ಟಾಂಗ ಯೋಗ ಗುರು ಎಂದೇ ಹೆಸರಾಗಿದ್ದ ಶರತ್ ಅವರು, ಯೋಗಾಭ್ಯಾಸ ಮತ್ತು ಯೋಗಪಾಠಕ್ಕೆ ಬದುಕನ್ನು ಮೀಸಲಾಗಿಟ್ಟಿ ದ್ದರು. ಶರತ್ ಜೋಯಿಸ್ ಅವರು ಖ್ಯಾತ ಪಾಪ್ ಗಾಯಕಿ ಮಡೋನಾ ಸೇರಿದಂತೆ ಹಲವರಿಗೆ ಯೋಗ ಕಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾ*ವು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: 15 ಬೈಕ್ ಕರಕಲು
Robbery: ಮನೆಗೆ ನುಗ್ಗಿ ಚಿನ್ನ, ನಗದು ದರೋಡೆ; ಬಾಲಕ ಸೇರಿದಂತೆ ಮೂವರ ಬಂಧನ
ಈ ಜಾಗ ನಮ್ಮದು… ವಿದ್ಯಾರ್ಥಿಗಳನ್ನು ಹೊರಹಾಕಿ ಶಾಲೆಗೆ ಬೀಗ ಜಡಿಯಲು ಯತ್ನಿಸಿದ ಕುಟುಂಬ
Arrested: ಬಿಡಿಸಿಸಿ, ಅಪೆಕ್ಸ್ ಬ್ಯಾಂಕ್‌ಗೆ 19 ಕೋಟಿ ರೂ. ವಂಚನೆ: ಮೂವರ ಸೆರೆ