Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
ಎಲ್ಲದಕ್ಕೂ ಪೊಲೀಸರು ಉತ್ತರ ಕೊಡಬೇಕಲ್ಲವೇ?
Team Udayavani, Dec 24, 2024, 4:17 AM IST
ಬೆಂಗಳೂರು: ನನ್ನ ಇಲಾಖೆಯಲ್ಲಿ ಬೇರೆ ಯಾರೂ ಹಸ್ತಕ್ಷೇಪ ಮಾಡುತ್ತಿಲ್ಲ. ಹಸ್ತಕ್ಷೇಪ ಆದರೂ ಅಧಿಕಾರಿಗಳು ಕೇಳುವುದಿಲ್ಲ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು.
ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ. ರವಿ ಪ್ರಕರಣದಲ್ಲಿ ಯಾರೂ ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಧಿಕಾರಿಗಳು ಸಿಎಂ ಹಾಗೂ ಗೃಹ ಸಚಿವರ ಮಾತು ಮಾತ್ರ ಕೇಳುತ್ತಾರೆ. ಬೇರೆ ಘಟನೆಗಳಲ್ಲಿ ಮಾತ್ರ ಬೇರೆ ಸಚಿವರ ಮಾತು ಕೇಳುತ್ತಾರೆ. ಇಂತಹ ಘಟನೆಗಳಲ್ಲಿ ಪೊಲೀಸರು ಮಾತು ಕೇಳಲ್ಲ. ಎಲ್ಲದಕ್ಕೂ ಪೊಲೀಸರು ಉತ್ತರ ಕೊಡಬೇಕಲ್ಲವೇ? ಪೊಲೀಸರಿಗೂ ಈ ವಿಚಾರ ಗೊತ್ತಿದೆ ಎಂದರು.
ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವೆ ಹೆಬ್ಬಾಳ್ಕರ್ ಡೈರೆಕ್ಷನ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಲಕ್ಷ್ಮೀ ಅವರ ಮೇಲೆ ಘಟನೆ ನಡೆದಿದೆ. ಆಗ ಶಿವಕುಮಾರ್ ಸದನದಲ್ಲಿ ಇದ್ದರು. ಡಿಸಿಎಂ ಹೆಚ್ಚು ಮಾತನಾಡಿರಬಹುದು. ಬೇರೆ ಯಾವುದೇ ಮಾಹಿತಿ ಇಲ್ಲ. ತಡರಾತ್ರಿ ಡೈರೆಕ್ಷನ್ ಕೊಟ್ಟ ಬಗ್ಗೆ ಮಾಹಿತಿ ಇಲ್ಲ. ನೇರವಾಗಿ ಆರೋಪ ಮಾಡಲಿ. ನಾನು ಪ್ರತಿಕ್ರಿಯೆ ಕೊಡುತ್ತೇನೆ. ಡಿ.ಕೆ. ಶಿವಕುಮಾರ್ ಡೈರೆಕ್ಷನ್ ಕೊಟ್ಟ ಬಗ್ಗೆ ಪರಿಶೀಲಿಸುತ್ತೇನೆ. ಕಾಣದ ಕೈಗಳು ಪರಿಸ್ಥಿತಿಯನ್ನು ನಿಭಾಯಿಸಿವೆ ಎಂದು ಯಾರು ಹೇಳಿದರು? ಇದರಲ್ಲಿ ಸಿಕ್ರೆಟ್ ಏನಿದೆ? ಸಚಿವರು ಅಂತಾ ಹೇಳಿದ್ದಾರೆ. ಯಾವ ಸಚಿವರು ಅಂತಾ ಹೇಳಲಿ ಎಂದರು.
ಸದನದ ವೀಡಿಯೋ ವಿಚಾರ ಸಭಾಪತಿಗಳೇ ಪರಿಶೀಲಿಸಬಹುದು. ಎಫ್ಎಸ್‌ಎಲ್‌ಗೆ ಕೊಟ್ಟು ಪರಿಶೀಲಿಸುತ್ತೇವೆ. ಪೊಲೀಸರು ಅವರ ಚೌಕಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಎಲ್ಲ ವಿಷಯಗಳನ್ನು ಪೊಲೀಸರು ಹೇಳಬೇಕಿಲ್ಲ. ಡಿಜಿಪಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಇರುತ್ತಾರೆ. ಅವರ ಬಳಿ ಸಲಹೆ ಪಡೆಯಬಹುದು. ಸ್ಥಳದಲ್ಲೇ ನಿರ್ಧಾರ ಮಾಡಲಿದ್ದಾರೆ. ಬಳಿಕ ಸರಕಾರಕ್ಕೆ ವರದಿ ನೀಡಲಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rajendra Babu: ನಟರಿಗೆ ಪ್ಯಾನ್ ಇಂಡಿಯಾ ಭೂತ ಹಿಡಿದಿದೆ: ಬಾಬು
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.