iPhone series: ಹೊಸ ಐಫೋನ್ 16 ಸರಣಿ- ಇದರಲ್ಲಿ ಏನೇನು ವೈಶಿಷ್ಟ್ಯಗಳಿವೆ ?
ಐಫೋನ್ 16, 48-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ...
Team Udayavani, Sep 12, 2024, 11:52 AM IST
ಐಫೋನ್ ಫ್ಯಾನ್ ಗಳು ಕಾತರದಿಂದ ನಿರೀಕ್ಷಿಸುತ್ತಿದ್ದ ಹೊಸ ಐಫೋನ್ 16 ಸರಣಿಯನ್ನು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಐಫೋನ್ ಸರಣಿಯಲ್ಲಿ ಕ್ಯಾಮರಾವನ್ನು ಬಟನ್ ಮೂಲಕವೇ ನಿಯಂತ್ರಿಸುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಈ ಬಟನ್ ಅನ್ನು ಕೇವಲ ಸ್ಪರ್ಶಿಸುವ ಮೂಲಕ ಫೋಟೋ, ವಿಡಿಯೋಗಳ ಸೆಟ್ಟಿಂಗ್ ಗಳನ್ನು ಹೊಂದಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಆಪಲ್ ಇಂಟೆಲಿಜೆನ್ಸ್ (ಎಐ ಅನ್ನು ಆಪಲೀಕರಣಿಸಲಾಗಿದೆ!) ಸಾಫ್ಟ್ ವೇರ್ ಫೀಚರ್ ಪರಿಚಯಿಸಲಾಗಿದೆ. ಇವೆರಡು ಈ ಸರಣಿಯ ಹೊಸತನಗಳು.
ಹೊಸ ಐಫೋನ್ ಸರಣಿಯ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆ ಇಲ್ಲ. 16 ಮತ್ತು ಪ್ಲಸ್ ನಲ್ಲಿ ಎರಡು ಕ್ಯಾಮರಾ ಲೆನ್ಸ್ ಗಳನ್ನು ಡಯಾಗ್ನಲ್ ಬದಲು, ಒಂದರ ಮೇಲೆ ಒಂದರಂತೆ ಲಂಬವಾಗಿ ಇರಿಸಲಾಗಿದೆ. ಪ್ರೊ ಮತ್ತು ಪ್ರೊ ಮ್ಯಾಕ್ಸ್ ನಲ್ಲಿ ಮೂರು ಕ್ಯಾಮರಾ ಲೆನ್ಸ್ ಗಳು ಹಿಂದಿನಂತೆಯೇ ಇವೆ. ಹೀಗಾಗಿ 16 ಪ್ರೊ. ಪ್ರೊ ಮ್ಯಾಕ್ಸ್ ಅನ್ನು ಜೇಬಿನಲ್ಲಿ ಇರಿಸಿಕೊಂಡರೆ ಇದು ಹೊಸ ಸರಣಿಯ ಐಫೋನ್ ಎಂಬುದು ತಿಳಿಯುವುದಿಲ್ಲ! ಭಾರತದಲ್ಲಿ, iPhone 16 ಬೆಲೆ 79,900 ರೂ. ಮತ್ತು iPhone 16 Plus 89,900 ರೂ.ಗಳಲ್ಲಿ ಲಭ್ಯವಾಗಲಿದೆ. iPhone 16 Pro 1,19,900 ರೂ.ಗಳಿಂದ ಆರಂಭವಾಗುತ್ತದೆ. ಈ ಸರಣಿಯಲ್ಲಿ ಅತ್ಯುನ್ನತವಾದ iPhone 16 Pro Max ಬೆಲೆ 1,44900 ರೂ. ನಿಂದ ಆರಂಭ.
iPhone 16 ಸರಣಿಯ ಪ್ರಿ ಬುಕಿಂಗ್ ಭಾರತದಲ್ಲಿ ಸೆಪ್ಟೆಂಬರ್ 13 ರಂದು ಸಂಜೆ 5.30ಕ್ಕೆ ಪ್ರಾರಂಭವಾಗುತ್ತದೆ. ಮೊದಲ ಮಾರಾಟ ಸೆಪ್ಟೆಂಬರ್ 20 ರಂದು ನಡೆಯಲಿದೆ. ಆಪಲ್ ಸ್ಟೋರ್ಸ್, ಅಮೆಜಾನ್, ಫ್ಲಿಪ್ಕಾರ್ಟ್, ಮತ್ತು ಪ್ರಮುಖ ಮೊಬೈಲ್ ಫೋನ್ ಮಳಿಗೆಗಳಲ್ಲಿ ದೊರಕಲಿದೆ.
iPhone 16 ಮತ್ತು iPhone 16 Plus:
Apple ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಅನ್ನು “ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ” ನಿಂದ ತಯಾರಿಸಲಾಗಿದೆ ಆಲ್ಟ್ರಾಮರೀನ್, ಟೀಲ್, ಪಿಂಕ್, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಬರುತ್ತವೆ. ಐಫೋನ್ 16 6.1-ಇಂಚಿನ ಪರದೆ ಹೊಂದಿದೆ, ಆದರೆ ಐಫೋನ್ 16 ಪ್ಲಸ್ 6.7-ಇಂಚಿನ ದೊಡ್ಡ ಪರದೆಯನ್ನು ನೀಡುತ್ತದೆ. ಎರಡೂ ಮಾದರಿಗಳು 2000nits ಗರಿಷ್ಠ ಬ್ರೈಟ್ನೆಸ್ ಹೊಂದಿವೆ.
ಬಟನ್ ಮೂಲಕವೇ ಕ್ಯಾಮರಾ ನಿಯಂತ್ರಣ:
ಹೆಚ್ಚುವರಿಯಾಗಿ, ಐಫೋನ್ 16 ಹೊಸ ಕ್ಯಾಮೆರಾ ನಿಯಂತ್ರಣ ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಆನ್/ಆಫ್ ಸ್ವಿಚ್ನಿಂದ ಸ್ವಲ್ಪ ಕೆಳಗೆ ಇದೆ. ಇದನ್ನು ಟಚ್ ಮಾಡಿದರೆ ಕ್ಯಾಮರಾ App ಓಪನ್ ಆಗುತ್ತದೆ. ಆಗ ಬಟನ್ ಮೇಲೆ ಬೆರಳನ್ನು ಸ್ಲೈಡ್ ಮಾಡುವ ಮೂಲಕ ಸೆಟ್ಟಿಂಗ್ ಗಳನ್ನು ಹೊಂದಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
ಈ ಬಟನ್ ಸ್ಯಾಫೈರ್ ಗ್ಲಾಸ್ ನಿಂದ ತಯಾರಾಗಿದೆ. ಒಂದೇ ಕ್ಲಿಕ್ ಕ್ಯಾಮರಾವನ್ನು ತೆರೆಯುತ್ತದೆ, ಎರಡನೇ ಕ್ಲಿಕ್ ಫೋಟೋವನ್ನು ಸೆರೆಹಿಡಿಯುತ್ತದೆ ಮತ್ತು ಆ ಬಟನ್ ಅನ್ನು ಒತ್ತಿ ಹಿಡಿದಾಗ ವೀಡಿಯೊವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸುತ್ತದೆ. ಕ್ಯಾಮರಾ ನಿಯಂತ್ರಣದಲ್ಲಿ ಸುಧಾರಿತ ಟಚ್ ಗೆ ಸ್ಚರ್ಗಳಿಗೆ ಬೆಂಬಲವಿದೆ, ಪೂರ್ಣ ಕ್ಲಿಕ್ ಮತ್ತು ಹಗುರವಾದ ಪ್ರೆಸ್ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ. ಹಗುರವಾದ ಪ್ರೆಸ್ ಕ್ಲೀನ್ ಪೂರ್ವವೀಕ್ಷಣೆಯನ್ನು ನೀಡುತ್ತದೆ. ಶಾಟ್ ಅನ್ನು ಹೆಚ್ಚು ನಿಖರವಾಗಿ ರೂಪಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಹೊಸ ಓವರ್ಲೇ ಜೂಮ್ ನಂತಹ ಅಗತ್ಯ ಕ್ಯಾಮರಾ ಸೆಟ್ಟಿಂಗ್ ಗಳಿಗೆ ಸಹಕರಿಸುತ್ತದೆ.
ಹೊಸ ಚಿಪ್ ಸೆಟ್: ಐಫೋನ್ 16 ಮತ್ತು ಅದರ ಪ್ಲಸ್ ಮಾದರಿಯು ಆಪಲ್ ನ ಇತ್ತೀಚಿನ A18 ಪ್ರೊಸೆಸರ್ ಒಳಗೊಂಡಿದೆ. ಇದು ಎರಡನೇ ತಲೆಮಾರಿನ 3nm ತಂತ್ರಜ್ಞಾನವನ್ನು ಬಳಸುತ್ತದೆ. A18 ಚಿಪ್ 6-ಕೋರ್ CPU ನೊಂದಿಗೆ ಬರುತ್ತದೆ, ಇದು 2 ಕಾರ್ಯಕ್ಷಮತೆಯ ಕೋರ್ ಗಳು ಮತ್ತು 4 ದಕ್ಷತೆಯ ಕೋರ್ ಗಳನ್ನು ಒಳಗೊಂಡಿದೆ. Apple ಪ್ರಕಾರ, iPhone 15 ನಲ್ಲಿರುವ A16 ಬಯೋನಿಕ್ ಗೆ ಹೋಲಿಸಿದರೆ iPhone 16 ಶೇಕಡಾ 30 ರಷ್ಟು ವೇಗದ ಕಾರ್ಯಕ್ಷಮತೆಯನ್ನು ನೀಡುತ್ತದೆ ಮತ್ತು ಚಿಪ್ 17 ಶೇಕಡಾ ಹೆಚ್ಚಿನ ಸಿಸ್ಟಮ್ ಮೆಮೊರಿ ಬ್ಯಾಂಡ್ವಿಡ್ತ್ ಅನ್ನು ಸಹ ಒದಗಿಸುತ್ತದೆ.
ಕ್ಯಾಮರಾ ವಿಶೇಷಗಳು:
ಐಫೋನ್ 16, 48-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ, ಇದು 48MP ಮತ್ತು 12MP ಫೋಟೋಗಳನ್ನು ಒಂದು ಸ್ಪಷ್ಟವಾದ 24MP ಚಿತ್ರಕ್ಕೆ ಸಂಯೋಜಿಸುತ್ತದೆ. ಇದರಲ್ಲಿ ಡಾಲ್ಬಿ ವಿಷನ್ HDR ನೊಂದಿಗೆ 4K60 ವೀಡಿಯೊವನ್ನು ಶೂಟ್ ಮಾಡಬಹುದು ಮತ್ತು ಹೊಸ 12MP ಅಲ್ಟ್ರಾ-ವೈಡ್ ಕ್ಯಾಮೆರಾವು ದೊಡ್ಡ ಅಪರ್ಚರ್ ಮತ್ತು ಹೆಚ್ಚಿನ ಪಿಕ್ಸೆಲ್ ಗಳನ್ನು ಹೊಂದಿದೆ. ಇದು ಪ್ರಕಾಶಮಾನವಾದ, ತೀಕ್ಷ್ಣವಾದ ಫೋಟೋಗಳಿಗಾಗಿ 2.6x ಹೆಚ್ಚಿನ ಬೆಳಕನ್ನು ನೀಡುತ್ತದೆ. ಐಫೋನ್ 16 ಫೋನಿನ ಕ್ಯಾಮರಾ ಸೆಟಪ್, ನಾಲ್ಕು ಕ್ಯಾಮೆರಾ ಲೆನ್ಸ್ ಗಳಿಗೆ ಸಮನಾಗಿದೆ ಎಂದು ಆಪಲ್ ತಿಳಿಸಿದೆ.
ಐಫೋನ್ 16 ಮಾದರಿಗಳಲ್ಲಿ ಆಪಲ್ ಇಂಟೆಲಿಜೆನ್ಸ್ ಸಾಫ್ಟ್ ವೇರ್ ಇರುವುದು ಪ್ರಮುಖ ವೈಶಿಷ್ಟ್ಯ. ಇದರಲ್ಲಿ ಡೇಟಾವನ್ನು ಎಂದಿಗೂ ಸಂಗ್ರಹಿಸಲಾಗುವುದಿಲ್ಲ ಅಥವಾ ಹಂಚಿಕೊಳ್ಳಲಾಗುವುದಿಲ್ಲ ಎಂದು Apple ಭರವಸೆ ನೀಡಿದೆ.
ಆಪಲ್ ಇಂಟೆಲಿಜೆನ್ಸ್ ಮೂಲಕ ಫೋಟೋ ಅಥವಾ ವೀಡಿಯೊಗಳಲ್ಲಿನ ನಿರ್ದಿಷ್ಟ ಕ್ಷಣಗಳಂತಹ ವಿವರಣೆಗಳನ್ನು ಬಳಸಿಕೊಂಡು ಬಳಕೆದಾರರು ಫೋಟೋಗಳನ್ನು ಹುಡುಕಬಹುದು. (ಉದಾ:ಗೆ ಜಲಪಾತದ ಮುಂದೆ ನಿಂತಿರುವ ಫೋಟೋ ಎಂದು ಟೈಪಿಸಿದಾಗ ಅಲ್ಲಿನ ಪ್ರವಾಸದ ಚಿತ್ರಗಳು ದೊರಕುತ್ತವೆ) ಹೊಸ ವೈಶಿಷ್ಟ್ಯವಾದ ವಿಷುವಲ್ ಇಂಟೆಲಿಜೆನ್ಸ್ ಮೂಲಕ ಕ್ಯಾಮರಾ ಲೆನ್ಸ್ ಅನ್ನು ಫೋಟೋಗಳ ಮೇಲೆ ಹಿಡಿದಾಗ ಇದು ಫೋಟೋಕ್ಕೆ ಸಂಬಂಧಿಸಿದ ವಿವರಗಳನ್ನು ಗುರುತಿಸುತ್ತದೆ. ಎರಡೂ ಇಂಟಲಿಜೆನ್ಸ್ ವೈಶಿಷ್ಟ್ಯಗಳು ಯುಎಸ್ ಇಂಗ್ಲಿಷ್ ನಲ್ಲಿ ಆರಂಭದಲ್ಲಿ ಲಭ್ಯ. ಮುಂದಿನ ವರ್ಷ ಹೆಚ್ಚಿನ ಭಾಷೆಗಳಲ್ಲಿ ಇದು ದೊರಕಲಿದೆ.
iPhone 16 Pro ಮತ್ತು iPhone 16 Pro Max:ವಿನ್ಯಾಸ ಮತ್ತು ಪರದೆ:
ಪ್ರೊ ಮತ್ತು ಮ್ಯಾಕ್ಸ್ ಆವೃತ್ತಿಗಳು ಟೈಟೇನಿಯಂ ಲೋಹದ ದೇಹ ಹೊಂದಿವೆ. ಇದು ಅತ್ಯಂತ ಬಲಿಷ್ಠ ಲೋಹ. ಆದರೆ ತೂಕದಲ್ಲಿ ಹಗುರ. ಪ್ರೊ 199 ಗ್ರಾಂ ಇದ್ದರೆ, ಪ್ರೊ ಮ್ಯಾಕ್ಸ್ 227 ಗ್ರಾಂ ತೂಕವಿದೆ. ಹಿಂದಿನ ಸರಣಿಯಲ್ಲಿ ಐಫೋನ್ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳು ಕ್ರಮವಾಗಿ 6.1 ಮತ್ತು 6.7 ಇಂಚಿನ ಪರದೆ ಹೊಂದಿರುತ್ತಿದ್ದವು. ಈ ಬಾರಿ iPhone 16 Pro 6.3-ಇಂಚಿನ ಹಾಗೂ iPhone 16 Pro Max 6.9-ಇಂಚಿನ ಓಎಲ್ಇಡಿ 460 ಪಿಪಿಐ ಪರದೆಯನ್ನು ಹೊಂದಿದೆ, ಇದುವರೆಗಿನ ಐಫೋನ್ ಗಳಲ್ಲಿ ಇದು ಅತ್ಯಂತ ದೊಡ್ಡ ಅಳತೆಯ ಪರದೆಯಾಗಿದೆ. ಸುಪರ್ ರೆಟಿನಾ ಎಕ್ಸ್ ಡಿ ಆರ್ ಡಿಸ್ ಪ್ಲೇ ಹೊಂದಿವೆ.
ಈ ಪರದೆಗಳು ನೀರು ಮತ್ತು ಧೂಳು ನಿರೋಧಕವಾಗಿದ್ದು, ಹೊಸ ತಲೆಮಾರಿನ ಸಿರಾಮಿಕ್ ಶೀಲ್ಡ್ ಹೊಂದಿವೆ. ಇದು ಯಾವುದೇ ಸ್ಮಾರ್ಟ್ ಫೋನಿನ ಗಾಜಿಗಿಂತ ಎರಡು ಪಟ್ಟು ಬಲಿಷ್ಠ ಎಂದು ಆಪಲ್ ತಿಳಿಸಿದೆ. ಎರಡೂ ಮಾದರಿಗಳು ತೆಳುವಾದ ಅಂಚುಗಳನ್ನು ಹೊಂದಿವೆ 120Hz ರಿಫ್ರೆಶ್ ರೇಟ್ ಹೊಂದಿವೆ. ಪ್ರೊ ಮಾದರಿಗಳು ಬ್ಲ್ಯಾಕ್ ಟೈಟಾನಿಯಂ, ವೈಟ್ ಟೈಟಾನಿಯಂ, ನ್ಯಾಚುರಲ್ ಟೈಟಾನಿಯಂ ಮತ್ತು ಹೊಸ ಡಸರ್ಟ್ ಟೈಟಾನಿಯಂ ಬಣ್ಣದಲ್ಲಿ ಲಭ್ಯವಿದೆ.
ಪ್ರೊಸೆಸರ್: ಎರಡೂ ಮಾದರಿಗಳು ಸುಧಾರಿತ A18 ಪ್ರೊ ಚಿಪ್ಸ್ ಸೆಟ್ ನಿಂದ ಚಾಲಿತವಾಗಿದ್ದು, 2ನೇ-ಜನ್ 3nm ಟ್ರಾನ್ಸಿಸ್ಟರ್ ಗಳಲ್ಲಿ ನಿರ್ಮಿಸಲಾಗಿದೆ. ಹೊಸ ಚಿಪ್ 6-ಕೋರ್ GPU ಅನ್ನು ಹೊಂದಿದೆ ಎಂದು ಆಪಲ್ ಹೇಳಿದೆ, A17 Pro ಗಿಂತ 20% ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಇದು 2 ಕಾರ್ಯಕ್ಷಮತೆಯ ಕೋರ್ ಗಳು ಮತ್ತು 4 ದಕ್ಷತೆಯ ಕೋರ್ ಗಳನ್ನು ಹೊಂದಿದೆ, USB 3 ಮತ್ತು ProRes ವೀಡಿಯೊ ರೆಕಾರ್ಡಿಂಗ್ ಬೆಂಬಲ ಹೊಂದಿವೆ.
ಕ್ಯಾಮರಾ: 16 ಪ್ರೊ, ಮತ್ತು ಮ್ಯಾಕ್ಸ್ ನಲ್ಲಿ ಮೂರು ಲೆನ್ಸಿನ ಹಿಂಬದಿ ಕ್ಯಾಮೆರಾ ಹೊಂದಿದೆ. iPhone 16 Pro ಮಾದರಿಗಳು ಹೊಸ 48MP ಫ್ಯೂಷನ್, 12 ಮೆ.ಪಿ. ಟೆಲಿಫೋಟೋ, 48 ಮೆ.ಪಿ. ಅಲ್ಟ್ರಾ ವೈಡ್ ಕ್ಯಾಮರಾ ಹೊಂದಿದೆ. 10ಎಕ್ಸ್ ಆಪ್ಟಿಕಲ್ ಜೂಮ್, 25 ಎಕ್ಸ್ ಡಿಜಿಟಲ್ ಜೂಮ್ ಹೊಂದಿದೆ. 4ಕೆ ಡಾಲ್ಬಿ ವಿಷನ್ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಒಳಗೊಂಡಿವೆ.
ಈ ನಾಲ್ಕೂ ಮಾದರಿಗಳಲ್ಲಿ ಎರಡು ಸಿಮ್ ಬಳಸಬಹುದು (ಇಸಿಮ್ + ನ್ಯಾನೋ ಸಿಮ್)
*ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.