ಐಪಿಎಲ್- 2022: ಕೋಲ್ಕತಾ ನೈಟ್ ರೈಡರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ಜಯ
Team Udayavani, Apr 10, 2022, 10:24 PM IST
ಮುಂಬೈ: ಖಲೀಲ್ ಅಹ್ಮದ್ ಮತ್ತು ಕುಲದೀಪ್ ಯಾದವ್ ಅವರ ಅಮೋಘ ದಾಳಿಗೆ ತತ್ತರಿಸಿದ ಕೋಲ್ಕತಾ ನೈಟ್‌ರೈಡರ್ ತಂಡವು ರವಿವಾರದ ಮೊದಲ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 44 ರನ್ನುಗಳಿಂದ ಶರಣಾಗಿದೆ.
ಗೆಲ್ಲಲು 216 ರನ್ ತೆಗೆಯುವ ಕಠಿನ ಗುರಿ ಪಡೆದ ಕೆಕೆಆರ್ ತಂಡವು ಆರಂಭದಲ್ಲಿಯೇ ಎಡವಿತು. ಖಲೀಲ್ ಮತ್ತು ಕುಲದೀಪ್ ಅವರ ಮಾರಕ ದಾಳಿಗೆ ಕುಸಿದ ಕೆಕೆಆರ್ ತಂಡವು 19.4 ಓವರ್‌ಗಳಲ್ಲಿ 171 ರನ್ನುಗಳಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಈ ಮೊದಲು ಪೃಥ್ವಿ ಶಾ ಮತ್ತು ಡೇವಿಡ್ ವಾರ್ನ್ರ್ ಅವರ ಅರ್ಧಶತಕದಿಂದಾಗಿ ಡೆಲ್ಲಿ ತಂಡವು 5 ವಿಕೆಟಿಗೆ 215 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು.
ಕೆಕೆಆರ್‌ನ ಆರಂಭ ಉತ್ತಮವಾಗಿರಲಿಲ್ಲ. ಖಲೀಲ್ ಅಹ್ಮದ್ ಅರಂಭದಲ್ಲಿಯೇ ಡೆಲ್ಲಿಗೆ ಮೇಲುಗೈ ಒದಗಿಸಿದರು. ಮೊದಲ ಐದು ಓವರ್ ಒಳಗಡೆ ಖಲೀಲ್ ಅಹ್ಮದ್ ಅವರು ಆರಂಭಿಕರನ್ನು ಪೆಲಿವಿಯನ್‌ಗೆ ಕಳುಹಿಸಿ ಕೆಕೆಆರ್‌ಗೆ ಆಘಾತ ಉಂಟುಮಾಡಿದರು. ಆಬಳಿಕ ನಾಯಕ ಶ್ರೇಯಸ್ ಅಯ್ಯರ್ ಮತ್ತು ನಿತೀಶ್ ರಾಣಾ ಅವರು ಮೂರನೇ ವಿಕೆಟಿಗೆ 69 ರನ್ನುಗಳ ಜತೆಯಾಟದಲ್ಲಿ ಭಾಗಿಯಾದರು. ಆದರೆ ಈ ಜೋಡಿ ಮುರಿದ ಬಳಿಕ ತಂಡ ಮತ್ತೆ ಕುಸಿಯತೊಡಗಿತು.
ಕುಲದೀಪ್ ಆಕ್ರಮಣ
ಆರಂಭದಲ್ಲಿ ಖಲೀಲ್ ಕೆಕೆಆರ್‌ಗೆ ಪ್ರಬಲ ಹೊಡೆತ ನೀಡಿದ್ದರು. ಕೊನೆ ಹಂತದಲ್ಲಿ ಕುಲದೀಪ್ ಆಕ್ರಮಣಕ್ಕೆ ಕೆಕೆಆರ್ ಧೂಳೀಪಟಗೊಂಡಿತು. ವಿಕೆಟ್ ಕಳೆದುಕೊಳ್ಳುತ್ತಿದ್ದ ಕೆಕೆಆರ್ ತಂಡವು 19.4 ಓವರ್‌ಗಳಲ್ಲಿ 171 ರನ್ನಿಗೆ ಆಲೌಟಾಯಿತು. ಕುಲದೀಪ್ ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ ಕೇವಲ 35 ರನ್ನಿಗೆ 4 ವಿಕೆಟ್ ಉರುಳಿಸಿದರು. ಮುಸ್ತಾಫಿಜುರ್ ರೆಹಮಾನ್ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 21 ರನ್ ನೀಡಿ ರನ್‌ವೇಗಕ್ಕೆ ಕಡಿವಾಣ ಹಾಕಿದರು.
ಪೃಥ್ವಿ, ವಾರ್ನರ್ ಅರ್ಧಶತಕ
ಆರಂಭಿಕ ಆಟಗಾರರಾದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಅವರ ಭರ್ಜರಿ ಅರ್ಧಶತಕ ಹಾಗೂ ಕೊನೆ ಹಂತದಲ್ಲಿ ಅಕ್ಷರ್ ಪಟೇಲ್ ಮತ್ತು ಶಾದೂìಲ್ ಠಾಕುರ್ ಸಿಡಿದ ಕಾರಣ ಡೆಲ್ಲಿ ತಂಡ 5 ವಿಕೆಟಿಗೆ 215 ರನ್ನುಗಳ ಬೃಹತ್ ಮೊತ್ತ ಪೇರಿಸುವಂತಾಯಿತು.
ಕೆಕೆಆರ್ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ ಪೃಥ್ವಿ ಶಾ ಮತ್ತು ವಾರ್ನರ್ ಕೇವಲ 8.4 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 93 ರನ್ ಪೇರಿಸಿದ್ದರು. ಅವರಿಬ್ಬರು ಓವರೊಂದಕ್ಕೆ 10ರಂತೆ ರನ್ ಸಿಡಿಸಿದ್ದರು. ಪೃಥ್ವಿ ಕೇವಲ 29 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 51 ರನ್ ಹೊಡೆದರೆ ವಾರ್ನರ್ 45 ಎಸೆತ ಎದುರಿಸಿ 61 ರನ್ ಹೊಡೆದರು. 6 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು.
ನಾಯಕ ರಿಷಬ್ ಪಂತ್ ಬಿರುಸಿನ 27 ರನ್ ಹೊಡೆದರು. ಆಬಳಿಕ ಬ್ಯಾಟಿಂಗ್ ಕುಸಿತ ಕಂಡರೂ ತಂಡ ಆಗಲೇ ಉತ್ತಮ ಮೊತ್ತ ಪೇರಿಸಿಯಾಗಿತ್ತು. ಕೊನೆ ಹಂತದಲ್ಲಿ ಅಕ್ಷರ್ ಪಟೇಲ್ ಮತ್ತು ಶಾದೂìಲ್ ಠಾಕುರ್ ಬಿರುಸಿನ ಆಟವಾಡಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟುವಂತಾಯಿತು.
ಸ್ಕೋರುಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಬಿ ವರುಣ್ 51
ಡೇವಿಡ್ ವಾರ್ನರ್ ಸಿ ರಹಾನೆ ಬಿ ಯಾದವ್ 61
ರಿಷಬ್ ಪಂತ್ ಸಿ ಯಾದವ್ ಬಿ ರಸೆಲ್ 27
ಲಲಿತ್ ಯಾದವ್ ಎಲ್‌ಬಿಡಬ್ಲ್ಯು ಬಿ ನಾರಾಯಣ್ 1
ಪೊವೆಲ್ ಸಿ ಬದಲಿಗ ಬಿ ನಾರಾಯಣ್ 8
ಅಕ್ಷರ್ ಪಟೇಲ್ ಔಟಾಗದೆ 22
ಶಾರ್ದೂಲ್ ಠಾಕೂರ್ ಔಟಾಗದೆ 29
ಇತರ: 16
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 215
ವಿಕೆಟ್ ಪತನ: 1-93, 2-148, 3-151, 4-161, 5-166
ಬೌಲಿಂಗ್:
ಉಮೇಶ್ ಯಾದವ್ 4-0-48-1
ರಸಿಕ್ ಸಲಮ್ 1-0-10-0
ಪ್ಯಾಟ್ ಕಮಿನ್ಸ್ 4-0-51-0
ವರುಣ್ ಚಕ್ರವರ್ತಿ 4-0-44-1
ಸುನೀಲ್ ನಾರಾಯಣ್ 4-0-21-2
ಆ್ಯಂಡ್ರೆ ರಸೆಲ್ 2-0-16-1
ವೆಂಕಟೇಶ್ ಅಯ್ಯರ್ 1-0-14-0
ಕೋಲ್ಕತಾ ನೈಟ್‌ರೈಡರ್
ಅಜಿಂಕ್ಯ ರಹಾನೆ ಸಿ ಠಾಕುರ್ ಬಿ ಅಹ್ಮದ್ 8
ವೆಂಕಟೇಶ್ ಅಯ್ಯರ್ ಸಿ ಪಟೇಲ್ ಬಿ ಅಹ್ಮದ್ 18
ಶ್ರೇಯಸ್ ಅಯ್ಯರ್ ಸ್ಟಂಪ್ಡ್ ಪಂತ್ ಬಿ ಕುಲದೀಪ್ 54
ನಿತೀಶ್ ರಾಣಾ ಸಿ ಶಾ ಬಿ ಲಲಿತ್ 30
ಆ್ಯಂಡ್ರೆ ರಸೆಲ್ ಸಿ ಖಾನ್ ಬಿ ಠಾಕುರ್ 24
ಸ್ಯಾಮ್ ಬಿಲ್ಲಿಂಗ್ಸ್ ಸಿ ಲಲಿತ್ ಬಿ ಅಹ್ಮದ್ 15
ಪ್ಯಾಟ್ ಕಮಿನ್ಸ್ ಎಲ್‌ಬಿಡಬ್ಲ್ಯು ಬಿ ಕುಲದೀಪ್ 4
ಸುನೀಲ್ ನಾರಾಯಣ್ ಸಿ ಪೊವೆಲ್ ಬಿ ಕುಲದೀಪ್ 4
ಉಮೇಶ್ ಯಾದವ್ ಸಿ ಮತ್ತು ಬಿ ಕುಲದೀಪ್ 0
ರಸಿಕ ಸಲಮ್ ಸಿ ಪೊವೆಲ್ ಬಿ ಠಾಕುರ್ 7
ವರುಣ್ ಚಕ್ರವರ್ತಿ ಔಟಾಗದೆ 1
ಇತರ: 6
ಒಟ್ಟು (19.4 ಓವರ್‌ಗಳಲ್ಲಿ ಆಲೌಟ್) 171
ವಿಕೆಟ್ ಪತನ: 1-21, 2-38, 3-107, 4-117, 5-133, 6-139, 7-143, 8-143, 9-170
ಬೌಲಿಂಗ್:
ಮುಸ್ತಾಫಿಜುರ್ ರೆಹಮಾನ್ 4-0-21-0
ಶಾರ್ದೂಲ್ ಠಾಕೂರ್ 2.4-0-30-2
ಖಲೀಲ್ ಅಹ್ಮದ್ 4-0-25-3
ಅಕ್ಷರ್ ಪಟೇಲ್ 3-0-32-0
ಕುಲದೀಪ್ ಯಾದವ್ 4-0-35-4
ಪೊವೆಲ್ 1-0-17-0
ಲಲಿತ್ ಯಾದವ್ 1-0-8-1
ಪಂದ್ಯಶ್ರೇಷ್ಠ: ಕುಲದೀಪ್ ಯಾದವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia ಗೆಲುವಿಗೆ ಕಮಿನ್ಸ್ ನೆರವು: ಪಾಕಿಸ್ಥಾನ 203; ಆಸೀಸ್ 8 ವಿಕೆಟಿಗೆ 204
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Football ಮೈದಾನಕ್ಕೆ ಬಡಿದ ಸಿಡಿಲು; ಆಟಗಾರ ಮೃ*ತ್ಯು, ಹಲವರಿಗೆ ಗಾಯ
BGT Series: ಇಂಡಿಯಾ ಎ ಪಂದ್ಯಕ್ಕಾಗಿ ಆಸೀಸ್ ಗೆ ಹೊರಟ ಕೆಎಲ್ ರಾಹುಲ್, ಜುರೆಲ್
Team India: ಗಂಭೀರ್ ಅಧಿಕಾರಕ್ಕೆ ಕುತ್ತು ತಂದ ಸರಣಿ ಸೋಲು; ಬಿಸಿಸಿಐ ಮಹತ್ವದ ನಿರ್ಧಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.