![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 1, 2022, 10:39 PM IST
ಮುಂಬಯಿ: ನಾಯಕ ಕೆ.ಎಲ್. ರಾಹುಲ್ ಮತ್ತು ದೀಪಕ್ ಹೂಡಾ ಅವರ ಹೊಡಿಬಡಿಯ ಅರ್ಧ ಶತಕ, ಎಡಗೈ ಮಧ್ಯಮ ವೇಗಿ ಮೊಹ್ಸಿನ್ ಖಾನ್ ಅವರ ಘಾತಕ ದಾಳಿಯ ನೆರವಿನಿಂದ ಲಕ್ನೋ ಸೂಪರ್‌ಜೈಂಟ್ಸ್ ರವಿವಾರದ ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ರನ್ನುಗಳ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ 3 ವಿಕೆಟಿಗೆ 195 ರನ್ ಪೇರಿಸಿದರೆ, ಡೆಲ್ಲಿ 7 ವಿಕೆಟಿಗೆ 189 ರನ್ ಮಾಡಿ ಗೆಲುವಿನಿಂದ ವಂಚಿತವಾಯಿತು. ಇದು ಲಕ್ನೋಗೆ ಒಲಿದ 7ನೇ ಜಯ. ಹಾಗೆಯೇ ಡೆಲ್ಲಿಗೆ ಅನುಭವಿಸಿದ 5ನೇ ಆಘಾತ. ಇದರಿಂದ ರಾಹುಲ್ ಪಡೆ ಮುಂದಿನ ಸುತ್ತಿಗೆ ಇನ್ನಷ್ಟು ಹತ್ತಿರವಾಗಿದೆ. 6ನೇ ಸ್ಥಾನದಲ್ಲಿರುವ ರಿಷಭ್ ಪಂತ್ ತಂಡದ ಪ್ಲೇ ಆಫ್ ಯೋಜನೆ ಬಹುತೇಕ ತಲೆಕೆಳಗಾಗಿದೆ.
ರಾಹುಲ್-ಹೂಡಾ ಅಬ್ಬರ
ಪ್ರಚಂಡ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದ ಕೆ.ಎಲ್. ರಾಹುಲ್ 51 ಎಸೆತಗಳಿಂದ 77 ರನ್ (4 ಬೌಂಡರಿ, 5 ಸಿಕ್ಸರ್), ವನ್‌ಡೌನ್‌ನಲ್ಲಿ ಬಂದ ದೀಪಕ್ ಹೂಡಾ 34 ಎಸೆತಗಳಿಂದ 52 ರನ್ (6 ಬೌಂಡರಿ, 1 ಸಿಕ್ಸರ್) ಮಾಡಿ ಲಕ್ನೋ ಸರದಿಯನ್ನು ಬೆಳೆಸಿದರು. ಈ ಜೋಡಿಯಿಂದ ದ್ವಿತೀಯ ವಿಕೆಟಿಗೆ 95 ರನ್ ಒಟ್ಟುಗೂಡಿತು. ಕೊನೆಯ 5 ಓವರ್‌ಗಳಲ್ಲಿ ಭರ್ತಿ 50 ರನ್ ಹರಿದು ಬಂತು.
ಡೆಲ್ಲಿ ಬೌಲರ್ ಲಕ್ನೋಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲರಾದರು. ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ಕುಲದೀಪ್ ಯಾದವ್‌ಗೆ ಯಾವುದೇ ಯಶಸ್ಸು ಸಿಗಲಿಲ್ಲ. ಮುಸ್ತಫಿಜುರ್, ಸಕಾರಿಯಾ ಕೂಡ ಬ್ರೇಕ್ ಒದಗಿಸದೇ ಹೋದರು.
ಶಾ, ವಾರ್ನರ್ ವಿಫಲ
ಚೇಸಿಂಗ್ ವೇಳೆ ಡೆಲ್ಲಿ ಆರಂಭಿಕರಾದ ಪೃಥ್ವಿ ಶಾ (5) ಮತ್ತು ಡೇವಿಡ್ ವಾರ್ನರ್ (3) ಅವರನ್ನು ಬೇಗನೇ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ದುಷ್ಮಂತ ಚಮೀರ ಮತ್ತು ಮೊಹ್ಸಿನ್ ಖಾನ್ ಅವರ ಆರಂಭಿಕ ಸ್ಪೆಲ್ ಅತ್ಯಂತ ಘಾತಕವಾಗಿತ್ತು.
ಈ ಹಂತದಲ್ಲಿ ಮಿಚೆಲ್ ಮಾರ್ಷ್ (37) ಮತ್ತು ನಾಯಕ ರಿಷಭ್ ಪಂತ್ (44) ಸೇರಿಕೊಂಡು ಹೋರಾಟವನ್ನು ಜಾರಿಯಲ್ಲಿರಿಸಿದರು. ರೋವ¾ನ್ ಪೊವೆಲ್ (35) ಕೂಡ ಸಿಡಿದು ನಿಂತರು. ಕೊನೆಯಲ್ಲಿ ಸ್ಪಿನ್‌ದ್ವಯರಾದ ಅಕ್ಷರ್ ಪಟೇಲ್-ಕುಲದೀಪ್ ಯಾದವ್ ಸಿಡಿದು ನಿಂತಾಗ ಡೆಲ್ಲಿಗೆ ರೋಚಕ ಗೆಲುವು ಒಲಿಯುವ ಸಾಧ್ಯತೆಯೊಂದು ಗೋಚರಿಸಿತು. ಸ್ಟೋಯಿನಿಸ್ ಪಾಲಾದ ಅಂತಿಮ ಓವರ್‌ನಲ್ಲಿ 21 ರನ್ನುಗಳ ಕಠಿನ ಸವಾಲು ಎದುರಾಯಿತು. ಕುಲದೀಪ್ ಮೊದಲ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದರೆ, ಅಕ್ಷರ್ ಅಂತಿಮ ಎಸೆತವನ್ನು ಸಿಕ್ಸರ್‌ಗೆ ರವಾನಿಸಿದರು. ಈ ನಡುವೆ ಇನ್ನೊಂದು ಸಿಕ್ಸರ್ ಕೊರತೆ ಕಾಡಿತು.
ಅಕ್ಷರ್-ಕುಲದೀಪ್ ಮುರಿಯದ 8ನೇ ವಿಕೆಟಿಗೆ 3.2 ಓವರ್‌ಗಳಿಂದ 41 ರನ್ ಸಿಡಿಸಿ ಗೆಲುವಿಗೆ ಗರಿಷ್ಠ ಪ್ರಯತ್ನವನ್ನೇನೋ ಮಾಡಿದರು, ಆದರೆ ಅದೃಷ್ಟ ಕೈಕೊಟ್ಟಿತು.
16 ರನ್ನಿಗೆ 4 ವಿಕೆಟ್ ಕೆಡವಿದ ಮೊಹ್ಸಿನ್ ಖಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದು ಐಪಿಎಲ್‌ನಲ್ಲಿ ಮೊಹ್ಸಿನ್ ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ.
ಸ್ಕೋರ್ ಪಟ್ಟಿ
ಲಕ್ನೋ ಸೂಪರ್ ಜೈಂಟ್ಸ್
ಕ್ವಿಂಟನ್ ಡಿ ಕಾಕ್ ಸಿ ಲಲಿತ್ ಬಿ ಠಾಕೂರ್ 23
ಕೆ.ಎಲ್. ರಾಹುಲ್ ಸಿ ಲಲಿತ್ ಬಿ ಠಾಕೂರ್ 77
ದೀಪಕ್ ಹೂಡಾ ಸಿ ಮತ್ತು ಬಿ ಠಾಕೂರ್ 52
ಮಾರ್ಕಸ್ ಸ್ಟೋಯಿನಿಸ್ ಔಟಾಗದೆ 17
ಕೃಣಾಲ್ ಪಾಂಡ್ಯ ಔಟಾಗದೆ 9
ಇತರ 17
ಒಟ್ಟು (3 ವಿಕೆಟಿಗೆ) 195
ವಿಕೆಟ್ ಪತನ: 1-42, 2-137, 3-176.
ಬೌಲಿಂಗ್:
ಮುಸ್ತಫಿಜುರ್ ರೆಹಮಾನ್ 4-0-37-0
ಚೇತನ್ ಸಕಾರಿಯಾ 4-0-44-0
ಅಕ್ಷರ್ ಪಟೇಲ್ 4-0-25-0
ಲಲಿತ್ ಯಾದವ್ 1-0-16-0
ಶಾರ್ದೂಲ್ ಠಾಕೂರ್ 4-0-40-3
ಕುಲದೀಪ್ ಯಾದವ್ 3-0-29-0
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಗೌತಮ್ ಬಿ ಚಮೀರ 5
ಡೇವಿಡ್ ವಾರ್ನರ್ ಸಿ ಬದೋನಿ ಬಿ ಮೊಹ್ಸಿನ್ 3
ಮಿಚೆಲ್ ಮಾರ್ಷ್ ಸಿ ಡಿ ಕಾಕ್ ಬಿ ಗೌತಮ್ 37
ರಿಷಭ್ ಪಂತ್ ಬಿ ಮೊಹ್ಸಿನ್ 44
ಲಲಿತ್ ಯಾದವ್ ಬಿ ಬಿಷ್ಣೋಯಿ 3
ರೋವ¾ನ್ ಪೊವೆಲ್ ಸಿ ಪಾಂಡ್ಯ ಬಿ ಮೊಹ್ಸಿನ್ 35
ಅಕ್ಷರ್ ಪಟೇಲ್ ಔಟಾಗದೆ 42
ಶಾರ್ದೂಲ್ ಠಾಕೂರ್ ಸಿ ಪಾಂಡ್ಯ ಬಿ ಮೊಹ್ಸಿನ್ 1
ಕುಲದೀಪ್ ಯಾದವ್ ಔಟಾಗದೆ 16
ಇತರ 3
ಒಟ್ಟು (7 ವಿಕೆಟಿಗೆ) 189
ವಿಕೆಟ್ ಪತನ: 1-5, 2-13, 3-73, 4-86, 5-120, 6-146, 7-148.
ಬೌಲಿಂಗ್:
ಮೊಹ್ಸಿನ್ ಖಾನ್ 4-0-16-4
ದುಷ್ಮಂತ ಚಮೀರ 4-0-44-1
ಕೃಣಾಲ್ ಪಾಂಡ್ಯ 1-0-19-0 ಜೇಸನ್ ಹೋಲ್ಡರ್ 4-0-45-0
ರವಿ ಬಿಷ್ಣೋಯಿ 4-0-28-1
ಕೃಷ್ಣಪ್ಪ ಗೌತಮ್ 2-0-23-1
ಮಾರ್ಕಸ್ ಸ್ಟೋಯಿನಿಸ್ 1-0-14-0
ಪಂದ್ಯಶ್ರೇಷ್ಠ: ಮೊಹ್ಸಿನ್ ಖಾನ್
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.