IPL Auction: 27 ಕೋ. ರೂ. ಒಡೆಯ ರಿಷಭ್ ಪಂತ್ಗೆ ಸಿಗುವುದು 18.90 ಕೋಟಿ ಮಾತ್ರ!
Team Udayavani, Nov 28, 2024, 7:15 AM IST
ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ನಿಂದ ಬೇರ್ಪಟ್ಟ ರಿಷಭ್ ಪಂತ್ ಈ ಬಾರಿಯ ಹರಾಜಿನಲ್ಲಿ 27 ಕೋಟಿ ರೂ.ಗಳ ಬೃಹತ್ ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಾರಾಟವಾಗಿ ಐಪಿಎಲ್ ದಾಖಲೆಯನ್ನೆಲ್ಲ ಚಿಂದಿ ಮಾಡಿರುವುದು ಈಗ ಇತಿಹಾಸ. ಹಾಗೆಯೇ ಶ್ರೇಯಸ್ ಅಯ್ಯರ್ 26.75 ಕೋಟಿ ರೂ.ಗೆ ಮಾರಾಟವಾದದ್ದು ಕೂಡ ದಾಖಲೆಯೇ. ಅರ್ಥಾತ್, ಡೆಲ್ಲಿಯ ಮಾಜಿ ನಾಯಕ ರಿಬ್ಬರಿಗೇ ಐಪಿಎಲ್ ಫ್ರಾಂಚೈಸಿ ಗಳು 53.75 ಕೋಟಿ ರೂ. ಸುರಿದಂತಾಯಿತು.
ಆದರೆ ವಿಷಯ ಇದಲ್ಲ. ಈ ಕ್ರಿಕೆಟಿಗರ ಕೈಗೆ ಇಷ್ಟೊಂದು ದೊಡ್ಡ ಗಂಟು ಸಿಗಲಿದೆಯೇ ಎಂಬುದು ಇಲ್ಲಿನ ಪ್ರಶ್ನೆ. “ಇಲ್ಲ’ ಎಂಬುದು ವಾಸ್ತವ. ಇದಕ್ಕೆ ಕಾರಣ ಆದಾಯ ತೆರಿಗೆ ಕಾಯ್ದೆ. ಇದರಂತೆ ಈ ಮೊತ್ತದ ಶೇ. 30ರಷ್ಟು ಪಾಲು ತೆರಿಗೆಗೆ ಹೋಗಲಿದೆ. ಇದು ಐಪಿಎಲ್ನಲ್ಲಿ ಮಾರಾಟ ಗೊಂಡ ಎಲ್ಲ ಆಟಗಾರರಿಗೂ ಅನ್ವಯಿಸುತ್ತದೆ. ಈ ಲೆಕ್ಕಾಚಾರದಂತೆ ರಿಷಭ್ ಪಂತ್ ಕೈಗೆ ಸಿಗು ವುದು 18.90 ಕೋಟಿ ರೂ. ಮಾತ್ರ. ಹಾಗೆಯೇ ಶ್ರೇಯಸ್ ಅಯ್ಯರ್ ಕಿಸೆಗೆ ಬೀಳುವ ಮೊತ್ತ 18.72 ಕೋಟಿಯಷ್ಟೇ.
ಇನ್ನು ವಿರಾಟ್ ಕೊಹ್ಲಿಯ ಗಳಿಕೆಯ ಲೆಕ್ಕ ಗಮನಿಸಿ. ಇವರಿಗೆ ಆರ್ಸಿಬಿ ನೀಡಿರುವುದು 21 ಕೋಟಿ ರೂ. ಆದರೆ ಕೊನೆಯಲ್ಲಿ ಸಿಗುವುದು ಕೇವಲ 14.70 ಕೋ. ರೂ. ಐಪಿಎಲ್ನಿಂದ ಸರಕಾರಕ್ಕೂ ಕೂತಲ್ಲೇ ದುಡ್ಡು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.