ಐಪಿಎಲ್ ಅನಿರ್ದಿಷ್ಟಾವಧಿ ಮುಂದೂಡಿಕೆ
ಬಿಸಿಸಿಐ ಪದಾಧಿಕಾರಿಗಳ ವೀಡಿಯೋ ಕಾನ್ಫರೆನ್ಸ್‌ನಲ್ಲಿ ನಿರ್ಧಾರ; ಫ್ರಾಂಚೈಸಿಗಳಿಗೆ ಮಾಹಿತಿ
Team Udayavani, Apr 17, 2020, 5:30 AM IST
ಹೊಸದಿಲ್ಲಿ: ದೇಶದಲ್ಲಿ ಲಾಕ್‌ಡೌನ್ ಮೇ 3ರ ತನಕ ವಿಸ್ತರಣೆಯಾಗಿದ್ದರಿಂದ “ಮುಂದಿನ ಸೂಚನೆ ಬರುವವರೆಗೆ’ ಐಪಿಎಲ್ ಕೂಟವನ್ನು ರದ್ದುಗೊಳಿಸಲು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಅರುಣ್ ಧುಮಾಲ್ ಹಾಗೂ ಐಪಿಎಲ್ ಅಧ್ಯಕ್ಷ ಬೃಜೇಶ್ ಪಟೇಲ್ ಅವರೊಂದಿಗೆ ನಡೆದ ವೀಡಿಯೋ ಕಾನ್ಫರೆನ್ಸ್ ಬಳಿಕ ಐಪಿಎಲ್ ಸಿಇಒ ಹೇಮಾಂಗ್ ಅಮೀನ್ ಅವರು ಫ್ರಾಂಚೈಸಿಗಳಿಗೆ ಬಿಸಿಸಿಐಯ ಈ ನಿರ್ಧಾರವನ್ನು ತಿಳಿಸಿದ್ದಾರೆ.
ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಿಸುವುದಕ್ಕೆ ಮುಂಚಿತವಾಗಿ ಮಾ. 14ರಂದು ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಸಂಭಾವ್ಯ ಯೋಜನೆಗಳನ್ನು ಫ್ರಾಂಚೈಸಿಗಳ ಮಾಲಕರು ಚರ್ಚಿಸಿದ್ದರು. ಪ್ರೇಕ್ಷಕರಿಗೆ ಅವಕಾಶವಿಲ್ಲದೆ ಅಥವಾ ಚುಟುಕಾಗಿ ಪಂದ್ಯಾವಳಿಯನ್ನು ನಡೆಸುವ ಕುರಿತೂ ಚರ್ಚಿಸಲಾಗಿತ್ತು. ಆದರೆ ಲಾಕ್‌ಡೌನ್‌ಮುಂದುವರಿದಿರುವ ಕಾರಣ ಈ ಎಲ್ಲ ಯೋಜನೆಗಳು ಸದ್ಯಕ್ಕೆ ವ್ಯರ್ಥವಾದಂತಾಗಿವೆ.
ಹೂಡಿಕೆದಾರರು, ಬಿಸಿಸಿಐ ಹಾಗೂ ಪಂದ್ಯಾವಳಿಯ ಪ್ರಸಾರದ ಹಕ್ಕುಗಳನ್ನು ಪಡೆ ದಿರುವ ಸೋನಿ ಇಂಡಿಯಾ ಎಲ್ಲರೂ ಈಗ ನಷ್ಟ ಲೆಕ್ಕ ಹಾಕುತ್ತ ಕೂರಬೇಕಾಗಿದೆ. ಇದೀಗ ಸಪ್ಟೆಂಬರ್ ನವೆಂಬರ್ ಅವಧಿಯಲ್ಲಿ ಪಂದ್ಯಾವಳಿ ನಡೆಸುವ ಚುಟುಕು ಆಸೆಯೊಂದು ಈ ಎಲ್ಲರಲ್ಲೂ ಉಳಿದಿದೆ.
ಚರ್ಚೆಯ ಬಳಿಕ ವೇಳಾಪಟ್ಟಿ
ವೈರಸ್ ನಿಯಂತ್ರಣಕ್ಕೆ ಬರುವ ಜತೆಗೆ ವೈಮಾನಿಕ ಪ್ರಯಾಣಕ್ಕೂ ಅವಕಾಶ ಸಿಗಬೇಕು. ಪ್ರೇಕ್ಷಕರಿದ್ದು ಅಥವಾ ಇಲ್ಲದೆ ಹಾಗೂ ಕೇಂದ್ರ ಸರಕಾರ ಕೂಡ ಕ್ರೀಡಾಕೂಟ ನಡೆಸುವ ಅವಕಾಶ ಒದಗಿಸಬೇಕು. ಆಗ ಮಾತ್ರ ಬಿಸಿಸಿಐ, ಐಸಿಸಿ ಹಾಗೂ ಇತರ ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚಿಸಿ ಐಪಿಎಲ್ ವೇಳಾಪಟ್ಟಿ ಸಿದ್ಧಪಡಿಸುವುದು ಸಾಧ್ಯ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ವಿವಿಎಸ್ ಲಕ್ಷ್ಮಣ್ ಅವರು ಸೆಪ್ಟಂಬರ್ ನವೆಂಬರ್ ಅವಧಿಯಲ್ಲಿ ಐಪಿಎಲ್ ನಡೆಸಲು ಅವಕಾಶ ಸಿಕ್ಕರೆ ವಿಶ್ವಕಪ್ ಟಿ20ಗೂ ಮುನ್ನ ಆಟಗಾರರು ಕ್ರೀಡೆಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಈ ಅವಧಿಯಲ್ಲಿ ಐಪಿಎಲ್ ಆಯೋಜಿಸಿದರೆ ಏಷ್ಯಾ ಕಪ್ ಸಹಿತ ಹಲವು ಕೂಟಗಳನ್ನು ರದ್ದು ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಇದು ಭಾರತ ಪಾಕಿಸ್ಥಾನ ಕ್ರಿಕೆಟ್ ಮಂಡಳಿಗಳ ನಡುವಿನ ನಿರ್ಧಾರವಾಗುವುದಿಲ್ಲ. ಬೇರೆ ದೇಶಗಳೂ ಸಮ್ಮತಿಸಬೇಕಾಗುತ್ತದೆ ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಎಹಸಾನ್ ಮಣಿ ಹೇಳಿದ್ದಾರೆ.
ಹಲವು ಸವಾಲು
ಆಸ್ಟ್ರೇಲಿಯದಲ್ಲಿ ಟಿ20 ವಿಶ್ವಕಪ್ ನಡೆಯುವುದು ಸಾಧ್ಯವಾಗದಿದ್ದರೆ ನವೆಂಬರ್‌ನಲ್ಲಿ ಐಪಿಎಲ್ ಹಮ್ಮಿಕೊಳ್ಳಲೂ ಬಿಸಿಸಿಐ ಮುಂದಾಗುವ ನಿರೀಕ್ಷೆಯಿದೆ. ಆಸ್ಟ್ರೇಲಿಯವು ವಾಯುಯಾನ ಸಂಚಾರದ ಮೇಲೆ ಆರು ತಿಂಗಳ ಕಾಲ (ಸೆ. 19ರ ವರೆಗೆ) ನಿಷೇಧ ಹೇರಿದ್ದರಿಂದ ನಿಗದಿಯಂತೆ ಕ್ರೀಡಾಕೂಟಗಳು ನಡೆಯುವುದು ಅನುಮಾನ. ಸ್ಟಾರ್ ಇಂಡಿಯಾ ಟಿ20 ವಿಶ್ವಕಪ್, ಐಪಿಎಲ್ ಹಾಗೂ ಏಷ್ಯಾ ಕಪ್ ಈ ಮೂರು ಪಂದ್ಯಾವಳಿಗಳ ಪ್ರಸಾರ ಹಕ್ಕನ್ನೂ ಹೊಂದಿದ್ದು, ಪಂದ್ಯಾವಳಿ ಆಯೋಜನೆ ವಿಚಾರದಲ್ಲಿ ಈ ಸಂಸ್ಥೆಯ ಅಭಿಪ್ರಾಯವೂ ಪ್ರಾಮುಖ್ಯ ಪಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.