ಐಪಿಎಲ್: ಯುವ ವೇಗಿ ವೈಭವ್ ಅರೋರಾ; ವೈಭವದ ಆರಂಭ
Team Udayavani, Apr 4, 2022, 10:47 PM IST
ಮುಂಬಯಿ: ಚೆನ್ನೈ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಪಂಜಾಬ್ ಭರ್ಜರಿ ಜಯ ಸಾಧಿಸುವಲ್ಲಿ ಲಿವಿಂಗ್‌ಸ್ಟೋನ್ ಅವರಂತೆ ಯುವ ವೇಗಿ ವೈಭವ್ ಅರೋರಾ ಪಾತ್ರವೂ ಪ್ರಮುಖವಾಗಿತ್ತು.
ಐಪಿಎಲ್ ಪದಾರ್ಪಣ ಪಂದ್ಯ ದಲ್ಲಿಯೇ ವೈಭವ್ ಅಮೋಘ ದಾಳಿ ಸಂಘಟಿಸಿ ಚೆನ್ನೈಗೆ ಆರಂಭದಲ್ಲಿಯೇ ಪ್ರಬಲ ಹೊಡೆತ ನೀಡಿದ್ದರು. ಪವರ್ ಪ್ಲೇ ಒಳಗಡೆ ಅಪಾಯಕಾರಿ ಆಟಗಾರರಾದ ರಾಬಿನ್ ಉತ್ತಪ್ಪ ಮತ್ತು ಮೊಯಿನ್ ಅಲಿ ಅವರ ವಿಕೆಟ್ ಹಾರಿಸಿ ಚೆನ್ನೈಯ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬು ಮುರಿಯುವಲ್ಲಿ ವೈಭವ್ ಯಶಸ್ವಿಯಾಗಿದ್ದರು. ಅವರು ತಮ್ಮ 4 ಓವರ್‌ಗಳ ದಾಳಿಯಲ್ಲಿ ಕೇವಲ 21 ರನ್ ನೀಡಿ 2 ವಿಕೆಟ್ ಹಾರಿಸಿ ಪಂಜಾಬ್ ಮೇಲುಗೈ ಸಾಧಿಸಲು ನೆರವಾಗಿದ್ದರು.
ವೈಭವ್ ದಾಳಿಗೈದ ಇದೇ ಪಿಚ್‌ನಲ್ಲಿ ಈ ಮೊದಲು ಪಂಜಾಬ್‌ನ ಆಟಗಾರರಾದ ಶಿಖರ್ ಧವನ್, ಲಿವಿಂಗ್‌ಸ್ಟೋನ್ ಮತ್ತು ಹೊಸಬ ಜಿತೇಶ್ ಶರ್ಮ ಭರ್ಜರಿ ಆಟದ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಲಿವಿಂಗ್‌ಸ್ಟೋನ್ 60 ರನ್ ಗಳಿಸಿದ್ದರು.
ವೇಗಿ ಸಂದೀಪ್ ಶರ್ಮ ಅವರ ಬದಲಿಗೆ ವೈಭವ್ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದು ಅನೇಕರ ಹುಬ್ಬೇರಿಸುವಂತೆ ಮಾಡಿತ್ತು. ಆದರೆ ಮೊದಲ ಪಂದ್ಯದಲ್ಲಿಯೇ ಗಮನಾರ್ಹ ನಿರ್ವಹಣೆ ನೀಡುವ ಮೂಲಕ ವೈಭವ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಅಂಗನವಾಡಿ ಅಭಿವೃದ್ಧಿಗೆ ಕ್ರಮ: ಸಚಿವೆ ಸ್ಮತಿ ಇರಾನಿ
ಬದುಕು ವೈಭವವಾಗಿರಲಿಲ್ಲ
ವೈಭವ್ ಅವರ ಆರಂಭಿಕ ಬದುಕು ವೈಭವಯುತವಾಗೇನೂ ಇರಲಿಲ್ಲ. ಪಂಜಾಬ್ ತಂಡದಲ್ಲಿ ಆವಕಾಶ ಸಿಗದ ಕಾರಣ ಹಿಮಾಚಲಕ್ಕೆ ತೆರಳಿದ್ದರು. ಪಂಜಾಬ್ ಅಂಡರ್-19 ಶಿಬಿರಕ್ಕೆ 3 ಬಾರಿ ತೆರಳಿದರೂ ಆಯ್ಕೆ ಆಗಿರಲಿಲ್ಲ. ಹೀಗಾಗಿ ಬೇರೇನಾದರೂ ಉದ್ಯೋಗ ಹುಡುಕಲು ತೊಡಗಿದರು. ಆಗ ವೈಭವ್ ಕುಟುಂಬದ ಆರ್ಥಿಕ ಸ್ಥಿತಿ ತೀವ್ರ ಹದಗೆಟ್ಟಿತ್ತು. ತಂದೆಯ ಡೈರಿ ಉದ್ಯಮ ನೆಲಕಚ್ಚಿತ್ತು.
ವೈಭವ್ ಹಿಮಾಚಲ ತಂಡ ಸೇರಲು ಕಾರಣರಾದವರು ಕೋಚ್ ರವಿ ವರ್ಮ. ಆದರೆ ಅಲ್ಲಿ ಜಿಲ್ಲಾ ಮಟ್ಟದ ಪಂದ್ಯವೊಂದರಲ್ಲಿ 7 ಕ್ಯಾಚ್ ಬಿಟ್ಟರು. ಕೋಚ್ ಕೆಂಡಾಮಂಡಲವಾದರು. ಇನ್ನು ನನ್ನ ಹತ್ತಿರ ಬರುವುದು ಬೇಡ ಎಂದು ಬೈದು ಕಳಿಸಿದರು. ಈ ರೀತಿ ನಿಂದನೆಗೊಳಗಾದ ವೈಭವ್ ಅವರಲ್ಲಿ ಹಠವೊಂದು ಮನೆಮಾಡಿತು. ಕ್ರಿಕೆಟ್‌ನಲ್ಲೇ ಮೇಲೇರಲು ಟೊಂಕ ಕಟ್ಟಿದರು. ಹಿಮಾಚಲ ಅಂಡರ್-23 ತಂಡದಲ್ಲಿ ಯಶಸ್ಸು ಸಾಧಿಸಿ ರಣಜಿ ತಂಡಕ್ಕೆ ಕರೆ ಪಡೆದರು. ಸೌರಾಷ್ಟ್ರ ಎದುರಿನ ಮೊದಲ ಪಂದ್ಯದಲ್ಲೇ 9 ವಿಕೆಟ್ ಉಡಾಯಿಸಿದರು. ಮೊದಲ ವಿಕೆಟ್ ಚೇತೇಶ್ವರ್ ಪೂಜಾರ ಅವರದಾಗಿತ್ತು!
2020ರ ಐಪಿಎಲ್ ಹರಾಜಿನಲ್ಲಿ ವೈಭವ್ ಅನ್‌ಸೋಲ್ಡ್ ಆಗಿದ್ದರು. 2021ರಲ್ಲಿ ಕೆಕೆಆರ್ 20 ಲಕ್ಷ ರೂ.ಗೆ ಖರೀದಿಸಿತು. ಈ ಬಾರಿ ಪಂಜಾಬ್ ಕಿಂಗ್ಸ್ 2 ಕೋಟಿ ರೂ. ನೀಡಿ ಬುಟ್ಟಿಗೆ ಹಾಕಿಕೊಂಡಿತು. ಈಗ ವೈಭವ್ ಬೆಲೆ ಏನೆಂಬುದು ಅರಿವಿಗೆ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.