Indore: ಬೆಳ್ಳುಳ್ಳಿ ತರಕಾರಿಯೋ ಅಥವಾ ಮಸಾಲೆ ಪದಾರ್ಥವೋ: ತೀರ್ಪು ನೀಡಿದ ಹೈಕೋರ್ಟ್
Team Udayavani, Aug 13, 2024, 8:37 PM IST
ಇಂದೋರ್: ಬೆಳ್ಳುಳ್ಳಿ ತರಕಾರಿಯೋ ಅಥವಾ ಮಸಾಲೆ ಪದಾರ್ಥವೋ ಎಂಬ ಸುಮಾರು ಒಂದು ದಶಕದ ಕಾನೂನು ಹೋರಾಟದ ನಂತರ, ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ಇದೀಗ ನಿರ್ಣಾಯಕ ತೀರ್ಪು ನೀಡಿದೆ.
ಬೆಳ್ಳುಳ್ಳಿ ತರಕಾರಿಯೇ ಅಥವಾ ಮಸಾಲೆಯೇ ಎಂಬ ಈ ಪ್ರಕರಣದಲ್ಲಿ ಬೆಳ್ಳುಳ್ಳಿಯನ್ನು ಮೂಲವಾಗಿರಿಸಿ ಚರ್ಚೆಯನ್ನು ನಡೆಸಲಾಗಿದ್ದು, ಬೆಳ್ಳುಳ್ಳಿ ಒಂದು ತರಕಾರಿಯ ವಿಧ ಎಂದು ಕೋರ್ಟ್ ಪೀಠ ತೀರ್ಪು ನೀಡಿದೆ. ಬೆಳ್ಳುಳ್ಳಿಯ ಕೊಳೆಯುವ ಸ್ವಭಾವವನ್ನು ತೀರ್ಪಿನಲ್ಲಿ ಪ್ರಮುಖ ಅಂಶವಾಗಿ ಉಲ್ಲೇಖಿಸಲಾಗಿದೆ.
2015 ರಲ್ಲಿ ಬೆಳ್ಳುಳ್ಳಿಯ ಈ ವರ್ಗೀಕರಣ ಸಮಸ್ಯೆ ಆರಂಭವಾಗಿತ್ತು. ಮಧ್ಯಪ್ರದೇಶ ಮಂಡಿ ಮಂಡಳಿಯಲ್ಲಿ ರೈತರ ಸಂಘಟನೆಯು ಬೆಳ್ಳುಳ್ಳಿಯನ್ನು ತರಕಾರಿ ಎಂದು ವರ್ಗೀಕರಿಸಿದಾಗ ವಿವಾದ ಪ್ರಾರಂಭವಾಯಿತು. ಆದಾಗ್ಯೂ, ಕೃಷಿ ಇಲಾಖೆಯು 1972 ರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯಿದೆ ಅಡಿಯಲ್ಲಿ ಬೆಳ್ಳುಳ್ಳಿಯನ್ನು ಮಸಾಲೆ ಎಂದು ಮರುವರ್ಗೀಕರಿಸುವ ಮೂಲಕ ಇದು ಕಾನೂನು ಸಮರಕ್ಕೆ ಕಾರಣವಾಯಿತು.
ಹೈಕೋರ್ಟ್ ಇದೀಗ 2017ರಲ್ಲಿ ತಾನು ನೀಡಿದ್ದ ʼಬೆಳ್ಳುಳ್ಳಿ ಒಂದು ತರಕಾರಿʼ ಎಂಬ ತೀರ್ಪನ್ನು ಎತ್ತಿ ಹಿಡಿದಿದೆ. ನ್ಯಾ.ಎಸ್.ಎ ಧರ್ಮಾಧಿಕಾರಿ ಮತ್ತು ಡಿ ವೆಂಕಟರಮಣ ಅವರಿದ್ದ ದ್ವಿಸದಸ್ಯ ಪೀಠ ಈ ವರ್ಗೀಕರಣವು ತರಕಾರಿ ಮತ್ತು ಮಸಾಲೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡಿದ್ದು, ರೈತರಿಗೆ ಮತ್ತು ವ್ಯಾಪಾರಿಗಳಿಗೆ ತಮ್ಮ ಮಾರಾಟದ ಆಯ್ಕೆಯನ್ನು ವಿಸ್ತರಿಸುತ್ತದೆ ಎಂಬುದರ ಬಗ್ಗೆ ಗಮನಹರಿಸಿದರು.
ಬೆಳ್ಳುಳ್ಳಿ ಮಾರುಕಟ್ಟೆ ಮತ್ತು ಮಾರಾಟ ಮಾಡುವ ಪ್ರದೇಶದ ಹಲವಾರು ನಿಯಮಾವಳಿಗಳಿಗೆ ಬೆಳ್ಳುಳ್ಳಿಯ ದ್ವಿಗುಣವು ಮಹತ್ತರ ಪ್ರಭಾವವನ್ನು ಬೀರುವ ಕಾರಣ ರೈತರು ಮತ್ತು ವ್ಯಾಪಾರಿಗಳಿಗೆ ಈ ಪ್ರಕರಣವು ಅಗತ್ಯವಾಗಿದೆ. ಪೀಠವು ಬೆಳ್ಳುಳ್ಳಿ ವ್ಯಾಪಾರದಲ್ಲಿ ಇರುವ ನಿರ್ಬಂಧಗಳನ್ನು ತೆಗೆದುಹಾಕುವ ನಿರೀಕ್ಷೆಯನ್ನಿಟ್ಟಿದ್ದು, ಉತ್ಪಾದಕರು ಮತ್ತು ಮಾರಾಟಗಾರರಿಗೂ ಹೊಸ ಅವಕಾಶವನ್ನು ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.