ಇಸ್ರೇಲ್ ಕ್ಯಾಬಿನೆಟ್‌ನಲ್ಲಿ ಹೆಚ್ಚಾದ ಸಲಿಂಗಿ ಸಂಸದರ ಸಂಖ್ಯೆ
Team Udayavani, Jun 21, 2020, 6:26 PM IST
ಜೆರುಸಲೆಮ್ (ಇಸ್ರೇಲ್): ಕ್ಯಾಬಿನೆಟ್ ಸದಸ್ಯರಿಗೆ ತಮ್ಮ ಸ್ಥಾನಗಳನ್ನು ಬಿಟ್ಟುಕೊಡಲು ಅವಕಾಶ ನೀಡುವ ಹೊಸ ನಿಯಮಗಳು ಜಾರಿಯಾದ ಅನಂತರದ ದಿನಗಳಲ್ಲಿ ಇಸ್ರೇಲ್ ಅತೀ ಹೆಚ್ಚು ಸಲಿಂಗಿ ಸಂಸದರನ್ನು ಹೊಂದಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
120 ಸಂಸದರ ಬಲಾಬಲ ಹೊಂದಿರುವ ಇಸ್ರೇಲ್ ಸೆನೆಟ್‌ನಲ್ಲಿ 5 ಪಕ್ಷಗಳಿಂದ ಆರು ಸಲಿಂಗಿ ಸಂಸದರು ಸೇವೆಗೈದಿದ್ದಾರೆ ಎಂದು ಮಾಧ್ಯಮ ವರದಿ ಉಲ್ಲೇಖ ಮಾಡಿದ್ದು, ಯೋರಾಯ್ ಲಹವ್-ಹರ್ಟ್‌ಜಾನೊ ಅವರು ಮುಂದಿನ ವಾರದ ಪ್ರಮಾಣವಚನ ಸ್ವೀಕರಿಸುವ ಮೂಲಕ ಆರನೇ ಸಲಿಂಗಿ ಸಂಸದರಾಗಲಿದ್ದಾರೆ.
ಸಮಾಜದ ಕೆಲವು ಸಂಪ್ರದಾಯವಾದಿ ವರ್ಗಗಳ ವಿರೋಧದ ಹೊರತಾಗಿಯೂ, ದೇಶ ಪ್ರಗತಿ ಪಥ ನಡೆಯುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಅತ್ಯಂತ ಪ್ರಗತಿಪರ ಮನೋಭಾವವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಇನ್ನು ಕಳೆದ ವರ್ಷ, ಇಸ್ರೇಲ್ ತಾನು ಸಲಿಂಗಿ ಎಂದು ಘೋಷಿಸಿಕೊಂಡ ಸಂಸದನನ್ನು ಮಂತ್ರಿಯಾಗಿ ನೇಮಕಗೊಂಡಿದ್ದರು. ಜತೆಗೆ ಅದೇ ವರ್ಷದಲ್ಲಿ ಲಿಕುಡ್ ಪಕ್ಷದ ಅಮೀರ್ ಓಹಾನಾ ಅವರು ನ್ಯಾಯಾಂಗ ಸಚಿವರಾಗಿ ಆಯ್ಕೆಗೊಂಡಿದಲ್ಲದೇ ಇಸ್ರೇಲ್ ಕ್ಯಾಬಿನೆಟ್‌ನ ಮೊದಲ ಸಲಿಂಗಿ ಸದಸ್ಯರಾಗಿದ್ದರು. ಪ್ರಸ್ತುತ ಅವರು ಸಾರ್ವಜನಿಕ ಭದ್ರತಾ ಸಚಿವರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
War: ಉಕ್ರೇನ್‌ನಿಂದ ಸೆರೆ ಭೀತಿ: ಉ.ಕೊರಿಯಾದ 300 ಯೋಧರ ಆತ್ಮಹತ್ಯೆ?
Canada ಮಾರಾಟಕ್ಕಿಲ್ಲ: ಟ್ರಂಪ್‌ಗೆ ಎನ್‌ಡಿಪಿ ನಾಯಕ ಸಿಂಗ್ ಚಾಟಿ
Los Angeles;ಕಾಳ್ಗಿಚ್ಚು ಆರಿಸಲು ಸೂಪರ್ ಸ್ಕೂಪರ್:ಬೆಂಕಿಯ ಕೆನ್ನಾಲಿಗೆಗೆ ಬದುಕು ಭಸ್ಮ!
ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.