Israel: ಲೈವ್ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್ ಮಿಸೈಲ್ ದಾಳಿ!
ಮಿಸೈಲ್ ಬಿದ್ದಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
Team Udayavani, Sep 25, 2024, 5:11 PM IST
ಲೆಬನಾನ್(ಬೈರೂತ್): ಟಿವಿಯಲ್ಲಿ ಲೈವ್ ಸಂದರ್ಶನ ಮಾಡುತ್ತಿರುವ ವೇಳೆಯಲ್ಲೇ ಇಸ್ರೇಲ್ ನ ಮಿಸೈಲ್ ವೊಂದು ಲೆಬನಾನ್ ಪತ್ರಕರ್ತರೊಬ್ಬರ ಮನೆ ಮೇಲೆ ಬಿದ್ದ ಪರಿಣಾಮ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ಲೆಬನಾನ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಮಿರಯಾ ಅಂತರಾಷ್ಟ್ರೀಯ ನೆಟ್ ವರ್ಕ್ (Miraya International Network) ಎಡಿಟರ್ ಇನ್ ಚೀಫ್ ಫಾಡಿ ಬೌಡಯಾ ಅವರು ಇಸ್ರೇಲ್ ಮಿಸೈಲ್ ಏಕಾಏಕಿ ಮನೆ ಬಂದು ಬಡಿದ ಪರಿಣಾಮ ಪತ್ರಕರ್ತ ಪಾಡಿ ಸಮತೋಲನ ತಪ್ಪಿ, ಕೆಳಗೆ ಬಿದ್ದಿದ್ದು, ಕೆಲಕಾಲ ಸ್ಕ್ರೀನ್ ನಲ್ಲಿ ಆಯತಪ್ಪಿ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ..
ಲೈವ್ ಸಂದರ್ಶನದ ಸಂದರ್ಭದಲ್ಲೇ ಲೆಬನಾನ್ ಪತ್ರಕರ್ತನ ಮನೆ ಮೇಲೆ ಮಿಸೈಲ್ ಬಿದ್ದಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏಕಾಏಕಿ ಮಿಸೈಲ್ ಸ್ಫೋಟಗೊಂಡ ಪರಿಣಾಮ ಫಾಡಿ ಕಿರುಚಾಡುತ್ತಿದ್ದು, ಸ್ಕ್ರೀನ್ ಬ್ಲರ್ ಆಗಿರುವ ದೃಶ್ಯವಿದೆ. ಘಟನೆಯಲ್ಲಿ ಸಣ್ಣ, ಪುಟ್ಟ ಗಾಯದೊಂದಿಗೆ ಪತ್ರಕರ್ತ ಫಾಡಿ ಪವಾಡ ಸದೃಶ ಎಂಬಂತೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ತಿಳಿಸಿದೆ.
WINDOWS AND WALLS SHATTER AND COLLAPSE ON A JOURNALIST, NEARLY KILLING HIM
Fadi Boudia,editor of the Maraya International News Network,nearly dies live as IDF missiles attack his home in Beqaa,eastern 🇱🇧,just as he begins a Skype interview for a live program in the video above. pic.twitter.com/ucJls46IGC
— Malcolm X (@malcolmx653459) September 23, 2024
ಪತ್ರಕರ್ತ ಫಾಡಿ ಹೆಜ್ಬುಲ್ಲಾ ಪರ ಸಹಾನುಭೂತಿ ಹೊಂದಿರುವುದಾಗಿ ವರದಿ ವಿವರಿಸಿದೆ. ಈ ಸಂದರ್ಭದಲ್ಲಿ ನನಗೆ ಕರೆ ಮಾಡಿ, ಸಂದೇಶ ಕಳುಹಿಸಿ ಯೋಗಕ್ಷೇಮ ವಿಚಾರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಫಾಡಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ದೇವರ ಆಶೀರ್ವಾದಿಂದ ನಾನು ಆರೋಗ್ಯದಿಂದ ಇದ್ದೇನೆ. ನಿಮ್ಮೆಲ್ಲರ ಬೆಂಬಲದೊಂದಿಗೆ ಮತ್ತೆ ಮಾಧ್ಯಮದ ಕಾರ್ಯ ಮುಂದುವರಿಸಲಿದ್ದೇನೆ ಎಂದು ಎಕ್ಸ್ ನಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.