ಇಟಾಲಿಯನ್ ಓಪನ್ ವನಿತಾ ಸಿಂಗಲ್ಸ್ : ಐಗಾ ಸ್ವಿಯಾಟೆಕ್ ಸ್ವೀಟ್ ವಿಕ್ಟರಿ
Team Udayavani, May 17, 2021, 2:30 AM IST
ರೋಮ್: ಫ್ರೆಂಚ್ ಓಪನ್ ಚಾಂಪಿಯನ್, ಪೋಲೆಂಡಿನ ಟೀನೇಜರ್ ಆಟಗಾರ್ತಿ ಐಗಾ ಸ್ವಿಯಾಟೆಕ್ “ಇಟಾಲಿಯನ್ ಓಪನ್’ ಫೈನಲ್‌ನಲ್ಲಿ ಸ್ವೀಟ್ ವಿಕ್ಟರಿಯೊಂದಿಗೆ ಟ್ರೋಫಿಯನ್ನು ಹಿಡಿದೆತ್ತಿ ಸಂಭ್ರಮಿಸಿದ್ದಾರೆ.
ರವಿವಾರದ ಫೈನಲ್‌ನಲ್ಲಿ 19 ವರ್ಷದ ಸ್ವಿಯಾಟೆಕ್ 2019ರ ಚಾಂಪಿಯನ್, 9ನೇ ಶ್ರೇಯಾಂಕದ ಜೆಕ್ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾಗೆ ಒಂದೂ ಅಂಕ ಬಿಟ್ಟುಕೊಡದೆ ಜಬರ್ದಸ್ತ್ ಪ್ರದರ್ಶನ ನೀಡಿದರು. ಗೆಲುವಿನ ಅಂತರ 6-0, 6-0. ಈ ಏಕಪಕ್ಷೀಯ ಪಂದ್ಯ ಕೇವಲ 46 ನಿಮಿಷಗಳಲ್ಲಿ ಕೊನೆಗೊಂಡಿತು. ಇದರೊಂದಿಗೆ ಇನ್ನೆರಡೇ ವಾರಗಳಲ್ಲಿ ಆರಂಭವಾಗಲಿರುವ ಫ್ರೆಂಚ್ ಓಪನ್ ಗ್ರಾÂನ್‌ಸ್ಲಾಮ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಿಯಾಟೆಕ್ ದಿಟ್ಟ ಹೆಜ್ಜೆಯೊಂದನ್ನು ಇರಿಸಿದಂತಾಯಿತು.
ಆಕ್ರಮಣಕಾರಿ ಪ್ರದರ್ಶನ
ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಿದ ಸ್ವಿಯಾಟೆಕ್ ಮೊದಲ ಸೆಟ್ ಅನ್ನು ಕೇವಲ 20 ನಿಮಿಷಗಳಲ್ಲಿ ವಶಪಡಿಸಿಕೊಂಡರು. ದ್ವಿತೀಯ ಸೆಟ್‌ನಲ್ಲೂ ಇದೇ ಜೋಶ್ ತೋರಿದ ಪೋಲಿಶ್ ಆಟಗಾರ್ತಿ, ಪ್ಲಿಸ್ಕೋವಾ ಮೇಲೆ ಸವಾರಿ ಮುಂದುವರಿಸಿದರು.
“ಐಯಾಮ್ ರಿಯಲೀ ರಿಯಲೀ ಹ್ಯಾಪ್ಪಿ’ ಎಂದು ಐಗಾ ಸ್ವಿಯಾಟೆಕ್ ಪ್ರತಿಕ್ರಿಯಿಸಿದರೆ, “ಇದನ್ನು ನಾನು ಸಾಧ್ಯವಾದಷ್ಟು ಬೇಗ ಮರೆಯಲೆತ್ನಿಸುತ್ತೇನೆ’ ಎಂಬುದಾಗಿ ಪರಾಜಿತ ಪ್ಲಿಸ್ಕೋವಾ ಹೇಳಿದರು. ಇದು ರೋಮ್‌ನಲ್ಲಿ ಪ್ಲಿಸ್ಕೋವಾ ಕಂಡ ಹ್ಯಾಟ್ರಿಕ್ ಫೈನಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.