![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 29, 2024, 6:22 PM IST
ಕಥುವಾ: ಜಮ್ಮು-ಕಾಶ್ಮೀರದಲ್ಲಿ ಮೂರನೇ ಹಾಗೂ ಕೊನೆಯ ಹಂತದ ಚುನಾವಣಾ ಪ್ರಚಾರದ ಕೊನೆಯ ದಿನ ಕಾರ್ಯಕ್ರಮ ಭಾಷಣ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಸಿದು ಬಿದ್ದಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಜಸ್ರೋಟಾ ವಿಧಾನಸಭಾ ಕ್ಷೇತ್ರದ ಬರ್ನೋಟಿಯಲ್ಲಿ ಭಾಷಣ ಮಾಡುವಾಗ ಅಸ್ವಸ್ಥರಾದರು. ಈ ವೇಳೆ ಕೆಲ ನಿಮಿಷಗಳ ಕಾಲ ಭಾಷಣ ನಿಲ್ಲಿಸಬೇಕಾಯಿತು.
ಮೋದಿಯ ಅಧಿಕಾರದಿಂದ ಕೆಳಗಿಳಿಸುವವರೆಗೂ ಸಾಯಲ್ಲ: ಮಲ್ಲಿಕಾರ್ಜುನ ಖರ್ಗೆ
ಸ್ವಲ್ಪ ಸಮಯದ ನಂತರ, ಅವರು ಕುಳಿತು ಕೆಲವು ನಿಮಿಷಗಳ ಕಾಲ ಭಾಷಣ ಮಾಡಿದರು, ಆದರೆ ಮಧ್ಯದಲ್ಲಿ ಮತ್ತೆ ನಿಲ್ಲಿಸಿದರು. ಬಳಿಕ ಎದ್ದು ನಿಂತು 2 ನಿಮಿಷ ಭಾಷಣ ಮಾಡಿದರು. “ನನಗೆ ಕೊಂಚ ಆಯಾಸದಿಂದ ತಲೆ ಸುತ್ತು ಬಂದಂತೆ ಆಯಿತು. ಹೀಗಾಗಿ ಕುಳಿತೆ, ಕ್ಷಮಿಸಿ. ಪ್ರಧಾನಿ ನರೇಂದ್ರ ಮೋದಿಯ
ವರನ್ನು ಸೋಲಿಸಿ ಅಧಿಕಾರದಿಂದ ಕೆಳಗೆ ಇಳಿಸುವವರೆಗೆ ನಾನು ಸಾಯುವುದಿಲ್ಲ. ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ತಂದುಕೊಡುವ ವರೆಗೆ ಹೋರಾಟ ಮುಂದುವರಿಸಲಿದ್ದೇವೆ. ನನಗೆ ಈಗ 83 ವರ್ಷ ವಯಸ್ಸು. ನಾನು ಅಷ್ಟು ಬೇಗ ಸಾಯುವುದಿಲ್ಲ’ ಎಂದರು.
ದೇಶದ ಯುವಜನರ ಬಗ್ಗೆ ಪ್ರಧಾನಿ ನೈಜ ಅನುಕಂಪ ಹೊಂದಿಲ್ಲ. ದೇಶದಲ್ಲಿ ನಿರುದ್ಯೋಗ 45 ವರ್ಷಗಳಲ್ಲಿಯೇ ಅಧಿಕವಾಗಿದೆ. ಬಿಜೆಪಿಯ ನೀತಿಯಿಂದಾ ಗಿಯೇ ಹೀಗಾಗಿದೆ. ಜಮ್ಮು-ಕಾಶ್ಮೀರ ಸರಕಾರದ ಇಲಾಖೆಗಳಲ್ಲಿ ಶೇ. 65ರಷ್ಟು ಹುದ್ದೆಗಳು ಭರ್ತಿಯಾಗಿಲ್ಲ. ಕಾಶ್ಮೀರದ ಜನರಿಗೆ ನೀಡಬೇಕಾಗಿರುವ ಉದ್ಯೋಗಗಳನ್ನು ಹೊರಗಿನವರಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗುತ್ತಿದೆ ಎಂದರು.
ಬಿಜೆಪಿಯವರು ಪಾಕಿಸ್ಥಾನದ ಬಗ್ಗೆ ಮಾತನಾಡಿ ಹೆದರಿಸಲು ಪ್ರಯತ್ನಿಸು ತ್ತಾರೆ. ಅದಕ್ಕೆ ನಾವು ಬಗ್ಗುವುದಿಲ್ಲ ಎಂದರು. ಪಾಕಿಸ್ಥಾನದ ಹಿಡಿತದಲ್ಲಿದ್ದ ಬಾಂಗ್ಲಾದೇಶವನ್ನು ಇಂದಿರಾ ಗಾಂಧಿಯವರು ಮುಕ್ತಿಗೊಳಿಸಿದರು. ಲಾಲ್‌ಬಹದ್ದೂರ್ ಶಾಸ್ತ್ರಿ ನೇತೃತ್ವದ ಸರಕಾರದ ಅವಧಿಯಲ್ಲಿ ಪಾಕಿಸ್ಥಾನವನ್ನು ಸೋಲಿಸಿದ್ದು ನಾವು. ಜೈ ಜವಾನ್, ಜೈ ಕಿಸಾನ್ ಘೋಷಣೆಯನ್ನು ನೀಡಿದ್ದು ಕಾಂಗ್ರೆಸ್‌ನವರೇ ಎಂದರು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಜೊತೆಗೆ ಮೈತ್ರಿಯೊಂದಿಗೆ ಕಾಂಗ್ರೆಸ್ ಸ್ಪರ್ಧಿಸುತ್ತಿದ್ದು, ಮೂರನೇ ಹಂತದಲ್ಲಿ 40 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, 40 ಕ್ಷೇತ್ರಗಳ ಪೈಕಿ 24 ಜಮ್ಮು ವಿಭಾಗದ ವ್ಯಾಪ್ತಿಗೆ ಬರುತ್ತವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ಸಚಿನ್ ಪೈಲಟ್ ರವಿವಾರ ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ಆಯೋಜನೆಗೊಂಡಿದ್ದ ಸಭೆಗಾಗಿ ಆಗಮಿಸಿದ್ದರು.
#WATCH | Jammu and Kashmi: Congress President Mallikarjun Kharge became unwell while addressing a public gathering in Kathua. pic.twitter.com/OXOPFmiyUB
— ANI (@ANI) September 29, 2024
ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟದ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮತದಾರರ ಮನವೊಲಿಸಲು ಖರ್ಗೆಯವರು ಜಸ್ರೋಟಾ ಮತ್ತು ರಾಮನಗರದಲ್ಲಿ ಸಭೆಗಳ ಉದ್ದೇಶಿಸಿ ಮಾತನಾಡುತ್ತಿದ್ದರು. ಅಕ್ಟೋಬರ್ 1 ರಂದು ಜಮ್ಮು ಮತ್ತು ಕಾಶ್ಮೀರ ಮೂರನೇ ಮತ್ತು ಕೊನೆಯ ಹಂತದ ಚುನಾವಣೆಗೆ ಸಜ್ಜಾಗುತ್ತಿದ್ದು, ಬಹಿರಂಗ ಪ್ರಚಾರಕ್ಕೆ ರವಿವಾರ ಕೊನೆಯ ದಿನವಾಗಿದೆ.
ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಟ್ವೀಟ್:
ಜಮ್ಮು ಮತ್ತು ಕಾಶ್ಮೀರದ ಜಸ್ರೋಟಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಭಾಷಣದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಸ್ವಲ್ಪ ಅಸ್ವಸ್ಥರಾದ್ದರಿಂದ ಸಮೀಪದ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡವು ಪರೀಕ್ಷಿಸಿ ರಕ್ತದ ಒತ್ತಡ ಕಡಿಮೆಯಾದ್ದರಿಂದ ಈ ರೀತಿಯಾಗಿದೆ. ಜನರ ಹಾರೈಕೆಯಿಂದ ಅವರು ಮತ್ತಷ್ಟು ಶಕ್ತಿಯುತವಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.