ನಕ್ಷತ್ರದ ಹಂಗಿಲ್ಲದ 172 ಗ್ರಹಗಳು ಪತ್ತೆ! ಖಗೋಳ ವಿಜ್ಞಾನಿಗಳಿಗೆ ಜಾಕ್‌ಪಾಟ್
ಏಕಕಾಲಕ್ಕೆ ಮುಕ್ತ ಸಂಚಾರಿ ಗ್ರಹಗಳ ಅನ್ವೇಷಣೆ
Team Udayavani, Dec 27, 2021, 10:15 PM IST
ನ್ಯೂಯಾರ್ಕ್: ಭೂಮಿಯು ಹೇಗೆ ಸೂರ್ಯನ ಕಕ್ಷೆಯಲ್ಲಿ ಸುತ್ತುತ್ತದೋ, ಅದೇ ರೀತಿ ಉಳಿದ ಗ್ರಹಗಳೂ ನಕ್ಷತ್ರವೊಂದರ ಸುತ್ತ ಸುತ್ತುತ್ತವೆ. ಆದರೆ, ಈಗ ಮೂಲ ನಕ್ಷತ್ರವೇ ಇಲ್ಲದ 70-172 ಗ್ರಹಗಳನ್ನು ಖಗೋಳವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ!
ಈ ರೀತಿ ಮುಕ್ತವಾಗಿ ಸಂಚರಿಸುವಂತಹ ಇಷ್ಟೊಂದು ಗ್ರಹಗಳು ಒಂದೇ ಬಾರಿಗೆ ಪತ್ತೆಯಾಗಿರುವುದು ಇದೇ ಮೊದಲು. ಅಲ್ಲದೇ, ಈವರೆಗೆ ಪತ್ತೆಯಾದ ಮುಕ್ತ-ಸಂಚಾರಿ ಗ್ರಹಗಳ ಸಂಖ್ಯೆಗೆ ಹೋಲಿಸಿದರೆ ಈ ಬಾರಿ ಇಂಥ ಗ್ರಹಗಳು ದುಪ್ಪಟ್ಟು ಸಂಖ್ಯೆಯಲ್ಲಿ ಕಂಡುಬಂದಿರುವುದು ವಿಶೇಷ.
ಗುರುವಿಗಿಂತ 13 ಪಟ್ಟು ಕಡಿಮೆ ದ್ರವ್ಯರಾಶಿ:
ಈ ಗ್ರಹಗಳ ಮೂಲವು ಇನ್ನೂ ನಿಗೂಢವಾಗಿಯೇ ಉಳಿದಿದೆ. ಸಾಮಾನ್ಯವಾಗಿ ನಕ್ಷತ್ರಗಳು ರೂಪುಗೊಳ್ಳುವಂಥ ಪ್ರಕ್ರಿಯೆಯ ವೇಳೆ ಈ ರೀತಿಯ ಗ್ರಹಗಳು ಸೃಷ್ಟಿಯಾಗುತ್ತವೆ. ಗುರುಗ್ರಹದ ದ್ರವ್ಯರಾಶಿಯ 13 ಪಟ್ಟು ಕಡಿಮೆ ದ್ರವ್ಯರಾಶಿಯನ್ನು ಹೊಂದಿರುವ ಗ್ರಹಗಳು ಇವು. ಇವುಗಳು ಯಾವುದೇ ನಕ್ಷತ್ರದ ಕಕ್ಷೆಯಲ್ಲಿ ಸುತ್ತುವುದಿಲ್ಲ. ಬದಲಿಗೆ, ಸ್ವಂತವಾಗಿ ತೇಲುತ್ತಿರುತ್ತವೆ. ಈ ಅನ್ವೇಷಣೆಗೆ ಸಂಬಂಧಿಸಿದ ವರದಿಯು ನೇಚರ್ ಆಸ್ಟ್ರಾನಮಿ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
ಜೇಮ್ಸ್ ವೆಬ್‌ನಿಂದ ಹೆಚ್ಚಿನ ಅಧ್ಯಯನ:
ಈಗ ಪತ್ತೆಯಾಗಿರುವ ಮುಕ್ತ ಸಂಚಾರಿ ಗ್ರಹಗಳು ಮುಂದಿನ ಹಲವು ಅಧ್ಯಯನಗಳಿಗೆ ನೆರವಾಗಲಿದೆ. ಇತ್ತೀಚೆಗಷ್ಟೇ ನಾಸಾವು ಜೇಮ್ಸ್ ವೆಬ್ ಸ್ಪೇಸ್ ದೂರದರ್ಶಕವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದು, ಈ ಟೆಲಿಸ್ಕೋಪ್ ಮೂಲಕ ಇಂಥ ಗ್ರಹಗಳ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲು ಸಾಧ್ಯವಾಗಬಹುದು ಎಂದೂ ಖಗೋಳವಿಜ್ಞಾನಿಗಳು ಅಂದಾಜಿಸಿದ್ದಾರೆ.
ಇದನ್ನೂ ಓದಿ : ಕಾವೇರಿ ತಾಯಿ ಮುಂದೆ ನಿಂತು ನಾಟಕ: ಡಿಕೆಶಿ ವಿರುದ್ಧ ಹೆಚ್ ಡಿಕೆ ತೀವ್ರ ವಾಗ್ದಾಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.