Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

Team Udayavani, Mar 18, 2024, 5:54 PM IST

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

ಕಾಶ್ಮೀರದ ಪ್ರೇಕ್ಷಣೀಯ ತಾಣಗಳು:ಕಾಶ್ಮೀರಕ್ಕೆ ಹೇೂಗಿ ಕಾಶ್ಮೀರ ಎಲ್ಲಿದೆ ಎಂದು ಹುಡುಕ ಬೇಡಿ.ಕನಾ೯ಟಕದ ನೆಲದಲ್ಲಿ ನಿಂತು ಕನಾ೯ಟಕ ಹುಡುಕಿದ ಅನುಭವವಾಗಬಹುದು. ಕಾಶ್ಮೀರವೆಂದರೆ ಹತ್ತು ಜಿಲ್ಲೆಗಳಿಂದ ಒಂದು ಗೂಡುವ ಎಲ್ಲಾ ಪ್ರಕೃತಿ ರಮಣೀಯವಾದ ತಾಣಗಳ ಸೌಂದರ್ಯತೆಯೇ ಕಾಶ್ಮೀರದ ಸೊಬಗಿನ ವ್ಯಕ್ತಿತ್ವ.

ಬಹು ಮುಖ್ಯವಾಗಿ ಕಾಶ್ಮೀರದಲ್ಲಿ ಪ್ರವಾಸಿಗರ ತನು ಮನ ತಣಿಸುವ ತಾಣಗಳೆಂದರೆ ಗುಲ್ ಮಾರ್ಗ್;ಸೇೂನ್ ಮಾರ್ಗ್;ಪೌಲ್ ಗಮ್; ದೂದ …ಸರೇೂವರಗಳು;ಮೊಘಲ್ ಗಾಡ೯ನ್;ಆದಿ ಶಂಕರಾಚಾರ್ಯ ಪೀಠ ಮುಂತಾದ ಅನೇಕ ಪ್ರವಾಸಿ ಮತ್ತು ಯಾತ್ರಾಥಿ೯ ಸ್ಥಳಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ.

ಗುಲ್ ಮಾರ್ಗ್:ಕಾಶ್ಮೀರಕ್ಕೆ ಹೇೂದವರು ಗುಲ್ ಮಾರ್ಗ್ ನೇೂಡಲೇ ಬೇಕಾದ ತಾಣ. ಶ್ರೀನಗರದಿಂದ 30 ಕಿ.ಮೀ ದೂರದಲ್ಲಿದೆ ಈ ಗುಲ್ ಮಾರ್ಗ್.”ಗುಲ್”ಅಂದರೆ ಹೂಗಳು ಅನ್ನುವ ಅರ್ಥ;ಮಾರ್ಗ್ ಅಂದರೆ Medow( ಬಯಲು ಅನ್ನುವುದರ ಸಂಕೇತ.‌ ಇದು ಬೇಸಿಗೆಯಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಪವ೯ತ ಶ್ರೇಣಿಯಾದರೆ ಡಿಸೆಂಬರ್ ಫೆಬ್ರವರಿ ಮಾಸದ ಚಳಿಗಾಲದ ಹಿಮದ ಗಡ್ಡೆಯಲ್ಲಿ ಕಂಗೊಳಿಸುವ ರಜತಾದ್ರಿ ಬೆಟ್ಟ.ದಾರಿ ಪೂರ್ತಿ ಹಿಮದಿಂದ ಮುಚ್ಚಿ ಕೊಂಡಿದ್ದು ಅದರಲ್ಲಿಯೇ ದಾರಿ ಮಾಡಿ ನಡೆಯ ಬೇಕು..ಅಥವಾ ಕುದುರೆ ಹಾಗೂ ಸಣ್ಣಪುಟ್ಟ ಸ್ನೇೂ ಸ್ಕೂ ಬೈಕ್ ವಾಹನಗಳ ವ್ಯವಸ್ಥೆಯೂ ಇದೆ.ಗುಲ್ ಮಾರ್ಗ್ ದಲ್ಲಿ ಬಹು ಮುಖ್ಯವಾಗಿ ನೇೂಡ ಬೇಕಾದದ್ದು ಹಿಮದ ಪರ್ವತಾಲಯ.‌ ಹಿಮದ ಸಿಂಚನ ಅನುಭವವೇ ಒಂದು ವಿಶಿಷ್ಟವಾದ ರೇೂಚಕ ಅನುಭವ.ಇಲ್ಲಿ ಇಂತಹ ಅನುಭವದ ಪರಾಕಾಷ್ಟೆಗಾಗಿಯೇ ಅತಿ ಎತ್ತರದಲ್ಲಿ ಸಂಚರಿಸುವ ಕೇಬಲ್ ಕಾರ್…ಪಯಣದ ವ್ಯವಸ್ಥೆಯೂ ಇದೆ.

ಸೇೂನ್ ಮಾರ್ಗ:ಕಾಶ್ಮೀರಕ್ಕೆ ಹೇೂದವರು ನೇೂಡಲೇ ಬೇಕಾದ ಇನ್ನೊಂದು ಸ್ಥಳವೆಂದರೆ ಸೇೂನ್ ಮಾಗ೯.ಇದು ಶ್ರೀನಗರದಿಂದ ಸುಮಾರು 80ಕಿ.ಮೀ.ದೂರದ ಗಂಧರ್ ಬಾಲ್ ಜಿಲ್ಲೆಯಲ್ಲಿದೆ.ಇದರ ವಿಶೇಷತೆ ಅಂದರೆ ಕಡಿದಾದ ಪರ್ವತ ಶ್ರೇಣಿಯಲ್ಲಿ ಹಬ್ಬಿಕೊಂಡಿರುವ ಮರಗಳ ಸಾಲಿನಲ್ಲಿ ಹಿಮದ ಲೇಪನದಿಂದ ಮರಗಳು ಬೆಳ್ಳಿ ಝರಿ ಸೀರೆಯನ್ನು ತೊಟ್ಟು ನಿಂತಿರುವ ಸೌಂದರ್ಯದ ರೂಪದಶಿ೯. .ಸೇೂನ್ ಮಾರ್ಗದ ಕೊನೆಯಲ್ಲಿ ಸುಮಾರು 6 ಕಿ.ಮಿ ದೂರದಷ್ಟು ಸುರಂಗಮಾರ್ಗದಲ್ಲಿ ಕ್ರಮಿಸುವುದೇ ಒಂದು ರೇೂಚಕ ಅನುಭವ.ಈ ಸುರಂಗಮಾರ್ಗ ಇತ್ತೀಚೆಗಷ್ಟೇ ಲೋಕಾರ್ಪಣೆ ಗೊಂಡಿದ್ದು ಇದನ್ನು “Z.ಮಾಥ೯” ವೆಂದು ಹೆಸರಿಸಲಾಗಿದೆ.ಇಲ್ಲಿಂದ ಮುಂದೆ ಹಿಮ ಬೆಟ್ಟದ ಶ್ರೇಣಿ.ಅಲ್ಲಿ ಪ್ರವಾಸಿಗರ ಮನೇೂರಂಜನ ಆಟಗಳಿಗಾಗಿಯೇ ಸ್ಕೇಟಿಂಗ್‌; ಜಾರು ಬಂಡಿ ಆಟಗಳಿಗೂ ಅನುಕೂಲ ಮಾಡಿಕೊಡಲಾಗಿದೆ.

ಇಲ್ಲಿಂದ ಕೆಲವೇ ದೂರದಲ್ಲಿ ಕಾಣ ಬಹುದಾದ ಬಹು ಚಿರಪರಿಚಿತ ಪ್ರದೇಶವೆಂದರೆ ಕಾಗಿ೯ಲ್ ಮಿಲಿಟರಿ ನೆಲೆಯ ತಾಣ.ಕಾಗಿ೯ಲ್ ಯುದ್ಧ ಸಂದರ್ಭದಲ್ಲಿ ಇದೇ ಸೇೂನ್ ಮಾಗ೯ವನ್ನು ನಮ್ಮ ಮಿಲಿಟರಿ ಕಾರ್ಯಚರಣೆಗಾಗಿ ಬಳಸಿಕೊಂಡಿದರಂತೆ..ಇದನ್ನು ನೇೂಡುವಾಗಲೇ ನಮ್ಮ ದೇಶ ರಕ್ಷಣೆ ಹೊತ್ತ ಸೈನಿಕರ ಸ್ಥೈರ್ಯ ಧೈರ್ಯ ಬಲಿದಾನವೆಲ್ಲವನ್ನು ನೆನಪಿಸುವ ತಾಣವೂ ಹೌದು.

ಪಾಲ್ ಗಮ್:ಕಾಶ್ಮೀರದ ಅತೀ ದೊಡ್ಡ ಜಿಲ್ಲೆ ಎಂದೇ ಕರೆಸಿಕೊಂಡ ಅನಂತನಾಗ್ ನಿಂದ ಸುಮಾರು 15 ಕಿ.ಮೀ.ದೂರದಲ್ಲಿ ಕಾಣ ಸಿಗುವ ಅತ್ಯಂತ ಸೊಗಸಾದ ಅದರಲ್ಲೂ ಮಕ್ಮಳ ಆಟೇೂಟಗಳಿಗೆ ಹೇಳಿಸಿ ಮಾಡಿಸಿದ ಪ್ರೇಕ್ಷಣೀಯ ತಾಣವೆಂದರೆ ಪಾಲ್ ಗಮ್. ಇದನ್ನೇ ಬೇತಾಬ್ ವ್ಯಾಲ್ಯೂ ಎಂದೇ ಕರೆಯುವುದು ವಾಡಿಕೆ. ಬೇತಾಬ್ ಬಾಲಿವುಡ್ ಸಿನಿಮಾ ಚಿತ್ರೀಕರಣವಾದ ಕಾರಣ ಇದಕ್ಕೆ ಈ ಹೆಸರು ಅಂಟಿಕೊಂಡಿದೆ ಅಂತೆ. ಇಡಿ ಪ್ರದೇಶ ಹಿಮದಿಂದ ಆವರಿಸಿದ್ದರೂ ಕೂಡಾ ಹಿಮ ಕರಗಿ ನದಿ ರೂಪದಲ್ಲಿ ಹರಿಯುತ್ತಿರುವುದನ್ನು ಚಳಿಗಾಲದಲ್ಲಿ ನೇೂಡ ಬಹುದು.ಅದೇ ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ನದಿ ತುಂಬಿ ಹರಿಯುತ್ತದೆ ಮಾತ್ರವಲ್ಲ ಮರಗಿಡ ನೆಲ ಎಲ್ಲವೂ ಹಸಿರಿನಿಂದ ಕಂಗೊಳಿಸುವ ರಮಣೀಯ ನೇೂಟ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುತ್ತದೆ..ಅಂದರೆ ಇಲ್ಲಿಗೆ ವರುಷ ಪೂತಿ೯ ಪ್ರವಾಸಿಗರನ್ನು ಆಮಂತ್ರಿಸುವ ಸೌಂದರ್ಯತೆ ಈ ಪ್ರದೇಶದ ಇನ್ನೊಂದು ವೈಶಿಷ್ಟ್ಯ.

ದೂದ್ ಪತ್ರಿ:ಇದು ಹೆಸರಿಗೆ ಅನ್ವರ್ಥವಾಗಿ ನಿಂತಿರುವ ಪ್ರವಾಸಿ ತಾಣ.ಕಾಶ್ಮೀರದ ಬುದಗಾಮ್ ಜಿಲ್ಲೆಯಲ್ಲಿ ಕಾಣ ಸಿಗುವ ಬಹು ಸುಂದರವಾದ ಹಿಲ್‌ ಸ್ಟೇಷನ್.ಇದು ವ್ಯಾಲ್ಯೂ ಆಫ್ ಮಿಲ್ಕ್ ಅಂತಲೇ ಪ್ರಸಿದ್ಧವಾದ ಪ್ರವಾಸಿ ತಾಣ. ಶ್ರೀನಗರದಿಂದ 30ಕಿ.ಮೀ ದೂರದಲ್ಲಿದೆ. ಇಲ್ಲಿನ ನದಿ ಶಾಲಿಗಂಗಾ..ಕಡಿದಾದ ಪರ್ವತ ಶ್ರೇಣಿಯಲ್ಲಿ ಹಾಲಿನ ಹೊಳೆ ಹರಿದು ಬರುವ ನೀರಿನ ಝಳ ಝಳ ರೂಪ ನೇೂಡುವುದೇ ಸೊಬಗು. ಚಳಿಗಾಲದಲ್ಲಿ ಹಿಮದಿಂದ ಆವೃತ್ತವಾದ ಸೌಂದರ್ಯವಾದರೆ ಬೇಸಿಗೆ ಅಂದರೆ ಎಪ್ರಿಲ್ ನಿಂದ ಸೆಪ್ಟೆಂಬರ್‌ ತನಕ ಹಸಿರಿನ ಸಿರಿ ಹಾಸಿದ ಮಡಿಲಿನ ಮಧ್ಯೆ ಹಾಲಿನ ಹೊಳೆ.

ಕಾಶ್ಮೀರದ ಇನ್ನೊಂದು ವಿಶಿಷ್ಟತೆಯಂದರೆ ಸಾರ್ವಕಾಲಿಕವಾಗಿ ಪ್ರವಾಸಿಗರ ತನು ಮನ ತಣಿಸುವ ಸೌಂದರ್ಯದ ತಾಣವೂ ಹೌದು. ಕಾಶ್ಮೀರದ ಕೇಂದ್ರ ಸ್ಥಳ ಅನ್ನಿಸಿಕೊಂಡ ಶ್ರೀನಗರದ ಸುತ್ತ ಮುತ್ತ ಅಷ್ಟೇನೂ ಸ್ನೊ ಫಾಲ್ ಇಲ್ಲ..ಇಲ್ಲಿ ಕಾಣ ಬಹುದಾದ ಬಹು ಆಕಷಿ೯ತ ಸ್ಥಳಗಳು ಮಾತ್ರವಲ್ಲ ಅಲ್ಲಿನ ಜನ ಸಾಮಾನ್ಯ ಬದುಕಿಗೆ ಇಂಬು ನೀಡುವ ಪ್ರವಾಸಿಗರ ತಾಣವೆಂದರೆ ಅಲ್ಲಿನ ಸರೇೂವರಗಳು.ಕಾಶ್ಮೀರದ ಕೇಂದ್ರದಲ್ಲಿರವ ದಾಲ್ ಲೇಕ್‌ ಅತ್ಯಂತ ವಿಸ್ತಾರವಾಗಿ ಸುಸಜ್ಜಿತವಾದ ಜನಾಕಷ೯ಣ ಸರೇೂವರವೆಂದೇ ಹೆಸರು ವಾಸಿ ಸರೋವರ .ಸುಮಾರು 12ಕಿ.ಮಿ ಉದ್ಧ ಸರೇೂವರದಲ್ಲಿ ಬೇೂಟ್ ವಿಹಾರ ಮಾಡುವುದು ಜೊತೆಗೆ ಹೌಸ್ ಬೇೂಟಿಂಗ್ ರಾತ್ರಿಯಲ್ಲಿ ಉಳಿದು ಕೊಳ್ಳುವ ಸೌಲಭ್ಯವು ಇದೆ..ಅಲ್ಲಿನ ಚಿಕ್ಕ ಪುಟ್ಟ ವ್ಯಾಪಾರಿಗಳು ತಮ್ಮ ಬದುಕನ್ನು ಇಲ್ಲಿಯೇ ಕಟ್ಟಿ ಕೊಂಡಿರುತ್ತಾರೆ.

ಬಹು ಪ್ರಸಿದ್ಧವಾದ ಮೊಘಲ್ ಗಾರ್ಡನ್ ನೇೂಡ ಬಹುದು. ಶ್ರೀನಗರದಿಂದ ಅಣತಿ ದೂರದಲ್ಲಿದೆ ಆದಿ ಶಂಕರಾಚಾರ್ಯ ಪೀಠ. ಸುಮಾರು ಒಂದು ಸಾವಿರ ಅಡಿ ಎತ್ತರದಲ್ಲಿ ಇರುವ ಬಹು ಪುರಾತನ ಶಂಕರಾಚಾರ್ಯ ಪೀಠ ನೇೂಡ ಬೇಕಾದರೆ ಸುಮಾರು 250 ರಿಂದ 300 ಮೆಟ್ಟಿಲುಗಳನ್ನು ಹತ್ತಿ ಹೇೂಗ ಬೇಕು.ಇದನ್ನು ಗೇೂಪಾದಾರಿ ಬೆಟ್ಟ ಎಂದು ಕರೆಯುತ್ತಾರೆ.ಅದು ಶಿವಾರಾಧನಾ ಪಾವನ ತಾಣವು ಹೌದು.

*ಲೇಖಕರು:ಪ್ರತ್ಯಕ್ಷ ದಶಿ೯ :ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ.

ಟಾಪ್ ನ್ಯೂಸ್

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMW ಕಾರು, 4BHK ಫ್ಲಾಟ್ ಗಿಫ್ಟ್

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

Belagavi: Kannadigas’ tax money wasted to please fake Gandhis: Jagadish Shettar

Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ

GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ

M Chinnaswamy Stadium

M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMW ಕಾರು, 4BHK ಫ್ಲಾಟ್ ಗಿಫ್ಟ್

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.